ನಾಲತವಾಡ: ಪಟ್ಟಣದ ವಡಗೇರಿ ಕ್ರಾಸ್ ಹತ್ತಿರ ಚುನಾವಣಾಧಿಕಾರಿಗಳು ಶುಕ್ರವಾರ ಹೊಸದಾಗಿ ಚೆಕ್‌ಪೋಸ್ಟ್ ಪ್ರಾರಂಭಿಸಿ ವಾಹನಗಳ ತಪಾಸಣೆ ನಡೆಸತೊಡಗಿದ್ದಾರೆ. ಈ ಮೊದಲು 7 ಕಿ.ಮೀ. ಅಂತರದಲ್ಲಿರುವ ನಾರಾಯಣಪುರ ಸರ್ಕಲ್‌ನಲ್ಲಿ ಒಂದೇ ಚೆಕ್‌ಪೋಸ್ಟ್ ಇತ್ತು. ಇದರಿಂದಾಗಿ ನಾಲತವಾಡದಿಂದ ರಾಯಚೂರು, ಬಳ್ಳಾರಿ, ಯಾದಗಿರಿ ಮುಂತಾದ ಭಾಗಗಳಿಗೆ ಹೋಗಲು ಒಳದಾರಿಗಳು ಬಳಕೆ ಆಗುತ್ತಿದ್ದವು.
ಒಳದಾರಿ ಮೂಲಕ ಅಕ್ರಮ ನಡೆಯುವ ಅಪಾಯ ಅರಿತ ಅಧಿಕಾರಿಗಳು ಈ ಕ್ರಮ ಕೈಗೊಂಡು ಅಕ್ರಮ ತಡೆಗಟ್ಟಲು
ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದಾರೆ. ಇಲ್ಲಿನ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಇವರೊಂದಿಗೆ ಇಂಡೋ ಟಿಬೇಟಿಯನ್ ಬಾರ್ಡರ್ ಸೆಕ್ಯೂರಿಟಿ ಸೈನಿಕರನ್ನು ತಪಾಸಣೆಗೆ ನಿಯೋಜಿಸಲಾಗಿದೆ. ಇವರು ಈ ಮಾರ್ಗದಲ್ಲಿ ಬರುವ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿ ಯಾವುದೇ ರೀತಿಯಲ್ಲಿ ಚುನಾವಣಾ ಅಕ್ರಮ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ.