Advertisement

ಸಮಾಧಿಯಲ್ಲಿ ವಾಹನ ಪತ್ತೆ

06:00 AM Jun 05, 2018 | Team Udayavani |

ಭಾಗಪತ್‌: ಉತ್ತರ ಪ್ರದೇಶದ ಸನೌಲಿಯಲ್ಲಿ ಗಾಡಿಗಳ ಅವಶೇಷಗಳು ಪತ್ತೆಯಾಗಿದ್ದು, ಹೊಸ ಸಂಚಲನ ಸೃಷ್ಟಿಸಿವೆ. ಈ ಗಾಡಿಗಳ ಸಮಾಧಿಗಳು ಕಂಚಿನ ಯುಗದವೆಂದು ಹೇಳಲಾಗಿದ್ದು, ಶಿಲಾಯುಗದ ನಂತರದಲ್ಲಿ ಕಂಚಿನ ಬಳಕೆ ಶುರು ಮಾಡಿದ್ದ ಮಾನವ, ತನ್ನ ಸಂಚಾರಕ್ಕಾಗಿ ಗಾಡಿಗಳನ್ನು ಬಳಸುತ್ತಿದ್ದನೆಂಬ ಕುತೂಹಲಕಾರಿ ವಿಚಾರ ಬಹಿರಂಗಗೊಂಡಿದೆ ಎಂದು ಪ್ರಾಚ್ಯವಸ್ತು ಸಂಶೋಧಕರು ತಿಳಿಸಿದ್ದಾರೆ.  

Advertisement

ಈವರೆಗೆ ಮಿಸಪೊಟೇಮಿಯ, ಜಾರ್ಜಿಯಾ, ಗ್ರೀಕ್‌ ನಾಗರಿಕತೆಗಳ ಮಾನವರು ಮಾತ್ರ ಗಾಡಿಗಳನ್ನು ಬಳಸುತ್ತಿದ್ದರು ಎಂಬ ಪ್ರತೀತಿ ಇತ್ತು. ಆದರೀಗ, ಭಾರತದಲ್ಲಿದ್ದ ಅನಾದಿ ಕಾಲದ ಮಾನವನೂ ರಥಗಳನ್ನು ಬಳಸುತ್ತಿದ್ದನೆಂಬುದಕ್ಕೆ ಸಾಕ್ಷಿ ಸಿಕ್ಕಿದೆ. ಹರ್ಯಾಣದ ರಾಖೀಗಾರ್ಡಿ, ರಾಜಸ್ಥಾನದ ಕಲೀ ಬಂಗನ್‌ ಹಾಗೂ ಗುಜರಾತ್‌ನ ಲೋಥಲ್‌ನಲ್ಲೂ ಇಂಥ ಕಂಚಿನ ಯುಗದ ಸಮಾಧಿಗಳು ಪತ್ತೆಯಾಗಿವೆ. ಆದರೂ, ಸತ್ತವರ ರಥಗಳೊಂದಿಗೆ ಇರುವ ಸಮಾಧಿಗಳು ಸಿಕ್ಕಿರುವುದು ಇದೇ ಮೊದಲು ಎಂದು ಸಂಶೋಧಕರು ವಿವರಿಸಿದ್ದಾರೆ.

ಪ್ರಾಚೀನ ಮಾನವ ಗಾಡಿ ಬಳಸುತ್ತಿದ್ದ ಬಗ್ಗೆ ಮೊದಲ ಪುರಾವೆ
ಈ ಉತ್ಖನನ ಮತ್ತಷ್ಟು ಸಂಶೋಧನೆಗಳಿಗೆ ನಾಂದಿ ಹಾಡಲಿದೆ ಎಂದ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next