ಶಿವಮೊಗ್ಗ: ನಗರದಲ್ಲಿ ಅಘೋಷಿತ ಲಾಕ್‌ಡೌನ್ ಮುಂದುವರೆದಿದೆ. ಅಗತ್ಯ ವಸ್ತು ಹೊರತಾದಅಂಗಡಿಗಳು ಬಂದ್ ಆಗಿವೆ. ಆದರೆ ಗಾಂಧಿ ಬಜಾರ್,ನೆಹರೂ ರಸ್ತೆ ಸೇರಿದಂತೆ ನಗರದ ಹೃದಯ ಭಾಗದಲ್ಲಿಮಾತ್ರ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿದ್ದು,ಉಳಿದ ಕಡೆಗಳಲ್ಲಿ ವ್ಯಾಪಾರ ವಹಿವಾಟು ನಡೆದಿದೆ.ಬಾಗಿಲು ತೆಗೆದು ವಹಿವಾಟು ನಡೆಸುತ್ತಿದ್ದ ಅಂಗಡಿಮಾಲೀಕರಿಗೆ ಪೊಲೀಸರು ಬಂದ್ ಮಾಡುವಂತೆಸೂಚನೆ ನೀಡಿದ್ದಾರೆ.
ಅದೇ ರೀತಿ ಬೇಕರಿಗಳನ್ನು ಕೂಡಬಂದ್ ಮಾಡಿಸಲಾಗಿದೆ. ಈ ವೇಳೆ ವ್ಯಾಪಾರಸ್ಥರುಪೊಲೀಸರ ಮಧ್ಯೆ ವಾಗ್ವಾದವೂ ನಡೆದಿದೆ. ಅಗತ್ಯವಸ್ತು ಕಾಯ್ದೆಯಡಿ ಬರುವ ಬೇಕರಿಯನ್ನು ಕೂಡಬಂದ್ ಮಾಡಿಸಿರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಬೇಕರಿ ಬಂದ್ ಮಾಡಿಸದಂತೆ ಪೊಲೀಸ್‌ಇಲಾಖೆಗೆ ಸೂಚನೆ ನೀಡಿದ್ದಾರೆ.ಕಫೂì ಹಿನ್ನೆಲೆಯಲ್ಲಿ ನಗರದಲ್ಲಿ ವಾಹನಗಳಸಂಚಾರ ವಿರಳವಾಗಿತ್ತು.
ಕಡಿಮೆ ಸಂಖ್ಯೆಯ ಬಸ್‌ಗಳ ಸಂಚಾರವಿತ್ತಾದರೂ ಪ್ರಯಾಣಿಕರ ದಟ್ಟಣೆಕಂಡುಬರಲಿಲ್ಲ. ಆದರೆ ಕೆಲವು ಮಾರ್ಗದ ಖಾಸಗಿಮತ್ತು ಸರ್ಕಾರಿ ಬಸ್‌ಗಳಲ್ಲಿ ಶೇ. 50 ಕ್ಕಿಂತ ಹೆಚ್ಚುಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ದ ಮಾಹಿತಿಪಡೆದ ಜಿಲ್ಲಾ ಧಿಕಾರಿಯವರು ಕೆಎಸ್‌ಆರ್‌ಟಿಸಿವಿಭಾಗೀಯ ನಿಯಂತ್ರಣಾ ಧಿಕಾರಿ ಮತ್ತು ಸಾರಿಗೆಅ ಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆನೀಡಿದ್ದಾರೆ.ವಾರಾಂತ್ಯ ಕಫೂÂì ಶುಕ್ರವಾರ ರಾತ್ರಿಯಿಂದಆರಂಭವಾಗಲಿರುವುದರಿಂದ ಬಹುತೇಕರುಮನೆ ಸೇರಿಕೊಂಡಿದ್ದಾರೆ. ದಿನಸಿ, ತರಕಾರಿ,ಮೊದಲಾದ ವಸ್ತುಗಳ ಖರೀದಿ ಹೆಚ್ಚಾಗಿದೆ.
ಕೆಲವರುಮಾಮೂಲಿಯಾಗಿ ಖರೀದಿಸುತ್ತಿದ್ದಕ್ಕಿಂತ ಹೆಚ್ಚಿನಪ್ರಮಾಣದಲ್ಲಿ ದಿನಸಿ ಖರೀದಿಸಿದ್ದಾರೆ. ಇನ್ನುಮಾರುಕಟ್ಟೆಯಲ್ಲಿ ಗುಟ್ಕಾ, ತಂಬಾಕು, ಕೃತಕ ಅಭಾವಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.5 ರೂ.ಗೆ ಸಿಗುತ್ತಿದ್ದ ಗುಟ್ಕಾ ಪ್ಯಾಕೆಟ್‌ಗಳು 10ರೂ.ದಾಟಿದೆ. ಮದ್ಯದಂಗಡಿಗಳಲ್ಲೂ ಕೂಡಭರ್ಜರಿ ವಹಿವಾಟು ನಡೆದಿದೆ.
2 ದಿನ ವಾರಾಂತ್ಯಕರ್ಫ್ಯೂ ಇರುವುದರಿಂದ ಬರೋಬ್ಬರಿ 57 ಗಂಟೆಗಳಮದ್ಯ ಸಿಗಲ್ಲ ಎನ್ನುವುದನ್ನು ಮನಗೊಂಡ ಮದ್ಯಪ್ರಿಯರು ಎಣ್ಣೆ ಅಂಗಡಿಗಳಿಗೆ ಮುಗಿಬಿದ್ದು ಮದ್ಯಖರೀದಿಸಿದ್ದಾರೆ. ಎರಡು ಮೂರು ದಿನಕ್ಕೆ ಆಗುವಷ್ಟುಮದ್ಯ ಖರೀದಿಸಿದ್ದಾರೆ.ಬಹುತೇಕ ನಗರದೆಲ್ಲೆಡೆ ಬಂದ್ ವಾತಾವರಣಕಂಡು ಬಂದಿದೆ. ಪೊಲೀಸರನ್ನು ಅಲ್ಲಲ್ಲಿನಿಯೋಜಿಸಲಾಗಿದ್ದು, ಮಾಸ್ಕ್ ಧರಿಸುವಂತೆಮಹಾನಗರ ಪಾಲಿಕೆ ಆರೋಗ್ಯ ಮತ್ತು ಕಂದಾಯವಿಭಾಗದ ಅ ಧಿಕಾರಿಗಳು ಜನರಿಗೆ ಜಾಗೃತಿಮೂಡಿಸಿದ್ದಾರೆ. ಮಾಸ್ಕ್ ಧರಿಸದವರಿಗೆ ಬಿಸಿಮುಟ್ಟಿಸಲಾಗಿದೆ.