Advertisement

ದಿಂಬಂ ಘಾಟಿಯಲ್ಲಿ ರಾತ್ರಿ ವೇಳೆ ಸರಕು ವಾಹನ ನಿಷೇಧ

01:29 AM Feb 10, 2019 | Team Udayavani |

ಚಾಮರಾಜನಗರ: ರಾಜ್ಯದಿಂದ ತಮಿಳುನಾಡು ಪ್ರವೇಶಿಸುವ ಬಣ್ಣಾರಿ ದಿಂಬಂ ಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳ ಸಂರಕ್ಷಣಾ ಹಿತದೃಷ್ಟಿಯಿಂದ ವಾಣಿಜ್ಯ, ಸರಕು ಸಾಗಣೆ ವಾಹನಗಳ ಸಂಚಾರವನ್ನು ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ. ಅಲ್ಲದೆ, 12 ಚಕ್ರಗಳಿಗಿಂತ ಮೇಲ್ಪಟ್ಟ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.

Advertisement

ತಮಿಳುನಾಡು ರಾಜ್ಯ ಈರೋಡ್‌ ಜಿಲ್ಲಾಧಿಕಾರಿಯವರು ರಸ್ತೆ ಸುರಕ್ಷತಾ ಸಮಿತಿಯ ತೀರ್ಮಾನದಂತೆ ಈ ಮಾರ್ಗದಲ್ಲಿ ವಾಹನ ಸಂಚಾರ ಸಂಬಂಧ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಇದೇ ವೇಳೆ, ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

ಪ್ರಯಾಣಿಕರ 4 ಚಕ್ರದ ವಾಹನಗಳಿಗೆ 20 ರೂ.ಹಾಗೂ ವ್ಯಾನ್‌ಗಳಿಗೆ 30 ರೂ.ನಂತೆ ಶುಲ್ಕ ನಿಗದಿಗೊಳಿಸಲಾಗಿದೆ. ಲಘು ಮತ್ತು ಭಾರೀ ವಾಣಿಜ್ಯದ 4 ಚಕ್ರದ ವಾಹನ ಹಾಗೂ ಚಿಕ್ಕ ಲಾರಿ 407 ಇತ್ಯಾದಿಗಳಿಗೆ 20 ರೂ., 6 ಚಕ್ರಗಳ ವಾಹನಕ್ಕೆ 50 ರೂ., 8 ಚಕ್ರದ ವಾಹನಗಳಿಗೆ 60 ರೂ., 10 ಚಕ್ರಗಳ ವಾಹನಗಳಿಗೆ 80 ರೂ. ಹಾಗೂ 12 ಚಕ್ರದ ವಾಹನಗಳಿಗೆ 100 ರೂ.ಗಳ ಶುಲ್ಕ ನಿಗದಿಪಡಿಸಲಾಗಿದೆ. ಸರ್ಕಾರಿ, ಸಾರ್ವಜನಿಕ ಹಾಗೂ ತುರ್ತು ವಾಹನ (ಆ್ಯಂಬುಲೆನ್ಸ್‌)ಗಳಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next