ಚೇಳೂರು: ಟೊಮೆಟೋ ಬೆಲೆ ನೂರು ರೂ. ದಾಟಿದ ನಂತರ ಇತರೆ ತರಕಾರಿ ಬೆಲೆಯೂ ಗ್ರಾಹಕರ ಕೈ ಸುಡುತ್ತಿದೆ. ಈ ಹಿಂದೆ ಈರುಳ್ಳಿ ಕಣ್ಣಲ್ಲಿ ನೀರು ತರಿಸಿತ್ತು. ಈ ಹಿಂದೆ ಈರುಳ್ಳಿ ಬೆಲೆ ಕೆ.ಜಿ.ಗೆ 150 ರೂ. ಆಗಿತ್ತು, ಇದೀಗ ಈರುಳ್ಳಿ ಬಿಟ್ಟರೆ ಉಳಿದೆಲ್ಲ ತರಕಾರಿ ಬೆಲೆ 50 ರೂ. ದಾಟಿದೆ.
ಒಂದು ವಾರ 40 ರೂ. ಆಸುಪಾಸಿನಲ್ಲೇ ಇದ್ದ ಟೊಮೆಟೋ ಬೆಲೆ ಹೆಚ್ಚಳ ಆಗುತ್ತಿದಂತೆಯೇ ತರಕಾರಿ ಬೆಲೆಯೂ ಗಗನಮುಖೀ ಆಗ ತೊಡಗಿದೆ. ಹಾಗೆಯೇ ಸೊಪ್ಪಿನ ಬೆಲೆಯಲ್ಲೂ ಅಲ್ಪ ಸ್ವಲ್ಪ ಏರಿಕೆಯಾಗಿದೆ.
ಮಳೆಯಿಂದ ತರಕಾರಿ ಬೆಲೆಯೂ ಹಾಳು: ಭಾರೀ ಮಳೆ, ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಟೊಮೆಟೋ ಬೆಳೆ ಕೈಕೊಟ್ಟು ದರ ಏರಿಕೆಯಾಗಿದೆ ಎಂಬುದೇನೋ ನಿಜ. ಆದರೆ, ತರಕಾರಿ ಏರಿಕೆಗೆ ಕಾರಣ ಏನೂ ಇಲ್ಲ. ಈ ಬಗ್ಗೆ ವ್ಯಾಪಾರಿಗಳು ಹೇಳುವುದೇನೆಂದರೆ ಮಳೆಯಿಂದಾಗಿ ತರಕಾರಿ ಬೆಳೆ ಹಾಳಾಗಿದೆ. ಇದರಿಂ ದಾಗಿ ಬೆಲೆ ಹೆಚ್ಚಳವಾಗಿದೆ. ಆದರೆ, ರೈತರು ಹೇಳು ವುದೇ ಬೇರೆ, ನಮ್ಮ ಬಳಿ ಕಡಿಮೆ ಬೆಲೆಗೆ ಖರೀದಿ ಮಾಡುವ ಮಧ್ಯವರ್ತಿಗಳು ಪಟ್ಟಣದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದಾರೆ ಎಂದು ಆರೋಪಿಸುತ್ತಾರೆ.
ಬೆಲೆ ಕಡಿಮೆ ಆಗುವ ಸಾಧ್ಯತೆ: ಆದರೆ, ಮಾರುಕಟ್ಟೆ ಯಲ್ಲಿ ವ್ಯಾಪಾರಿಗಳು ತರಕಾರಿ ಅವಕದಲ್ಲಿ ಇಳಿಮುಖವಾಗಿದೆ, ಇದು ತಾತ್ಕಾಲಿಕ ಮಾತ್ರ. ಇನ್ನು 15 ದಿನದೊಳಗೆ ತರಕಾರಿ ಬೆಲೆ ದಿಢೀರ್ ಎಂದು ಕುಸಿಯುವ ಸಾಧ್ಯತೆಯೂ ಇದೆ ಎನ್ನುತ್ತಾರೆ.
ಇನ್ನೂ 15ರಿಂದ 20 ದಿನದೊಳಗೆ ಟೊಮೆಟೋ ಬೆಲೆಯೂ ಇಳಿಮುಖವಾಗುವ ಸಾಧ್ಯತೆ ಇದೆ. 100 ರೂ. ದಾಟಿರುವ ಟೊಮೆಟೋ ಬೆಲೆ ಅರ್ಧದಷ್ಟು ಕಡಿಮೆ ಆಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
-ಪಿ.ವಿ.ಲೋಕೇಶ್