Advertisement

ಮತ್ತೊಮ್ಮೆ ರೈತರ ಬದುಕನ್ನು ಕಸಿದುಕೊಂಡ ಕೋವಿಡ್ : ತೋಟದಲ್ಲೇ ಕೊಳೆಯುತ್ತಿದೆ ತರಕಾರಿ ಬೆಳೆ

06:07 PM Jun 03, 2021 | Team Udayavani |

ಬನಹಟ್ಟಿ: ಕೊರೊನಾ ಲಾಕ್‌ಡೌನ್‌ ರೈತರ ಬದುಕನ್ನು ಮತ್ತೂಮ್ಮೆ ಕಸಿದುಕೊಂಡಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಬೆಳೆದು
ಹಾನಿ ಮಾಡಿಕೊಂಡ ರೈತರ ಸಂಕಷ್ಟ ಮಾತ್ರ ಹೇಳ ತೀರದು. ಅದರಲ್ಲೂ ಲಾಕ್‌ಡೌನ್‌ನಿಂದಾಗಿ ರೈತರು ಬೆಳೆದ ತರಕಾರಿಗಳು ತೋಟದಲ್ಲಿಯೇ ಕೊಳೆಯುವಂತಾಗಿದೆ.

Advertisement

ಬನಹಟ್ಟಿಯ ಕೆರೆಯ ರಸ್ತೆಯ ರೈತ ಮಲ್ಲಿಕಾರ್ಜುನ ಮಿರ್ಜಿ ತಮ್ಮ ತೋಟದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬದನೆ, ಸವತೆ, ಕೋಬೀಜ, ಟೊಮ್ಯಾಟೊ, ಮಣಸಿನಕಾಯಿ ಬೆಳೆದಿದ್ದರು. ಆದರೆ ಲಾಕ್‌ಡೌನ್‌ನಿಂದ ಮಾರುಕಟ್ಟೆ ಸಿಗದೇ ಬೆಳೆದ ಬೆಳೆ
ಗಿಡದಲ್ಲಿಯೇ ಕೊಳೆಯುವಂತಾಗಿದೆ.

“ಸರಿಯಾದ ಮಾರುಕಟ್ಟೆ ಇತ್ತು. ತರಕಾರಿ ಮಾರಾಟಕ್ಕೆ ಇನ್ನಷ್ಟು ಅನುಕೂಲತೆ ಕಲ್ಪಿಸಿದರೆ ಮೂರು ತಿಂಗಳ ಅವಧಿಯಲ್ಲಿ ಐವತ್ತು ಸಾವಿರ ರೂ.ದಷ್ಟು ಲಾಭ ಆಕ್ಕಿತ್ರಿ. ಆದರ ಈಗ ಖರ್ಚು ಮಾಡಿದ 40 ಸಾವಿರದಷ್ಟು ಹಣ ಕೂಡಾ ಬರದ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜಿನಾಮೆ

ಬದನೆಕಾಯಿ, ಸವತೆಕಾಯಿ, ಕೋಬೀಜ್‌, ಟೊಮ್ಯಾಟೊ ತರಕಾರಿಗಳು ತೋಟದಲ್ಲಿ ಕೊಳೆತು ಹೋಗಿವೆ. ಬದನೆಕಾಯಿ ಬೆಳೆ
ಸಂಪೂರ್ಣವಾಗಿ ಕೊಳೆತಿದ್ದು, ಹಳದಿ ಬಣ್ಣಕ್ಕೆ ತಿರುಗಿದೆ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ ಮಿರ್ಜಿ. ಬೆಳಗ್ಗೆ 6 ರಿಂದ 10ರವರೆಗೆ ತಳ್ಳುವ ಗಾಡಿಗಳ ಮೂಲಕ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರೈತರು ತಳ್ಳುವ ಗಾಡಿಗಳ ಮೂಲಕ ಊರು ತುಂಬ
ತಿರುಗಾಡಿಲಿಕ್ಕೆ ಸಾಧ್ಯವಿಲ್ಲ. ಇನ್ನ ಹೆಣ್ಣು ಮಕ್ಕಳು ಸಂತೆಯಲ್ಲಿ ಕುಳಿತು ಮಾರಾಟ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ.

Advertisement

ಬೇಗ ಮಾರಾಟ ಮಾಡಬೇಕು ಎಂದರೆ ಗ್ರಾಹಕರು ಇದೇ ಅವಕಾಶ ಎಂದು ತಿಳಿದುಕೊಂಡು ಅರ್ಧಕ್ಕಿಂತ ಕಡಿಮೆ ದರಕ್ಕೆ ತರಕಾರಿ ಕೇಳುತ್ತಿದ್ದಾರೆ ಎಂದರು. ಬೇಸಿಗೆಯ ಸಂದರ್ಭದಲ್ಲಿ ತರಕಾರಿ ಬೆಳೆದ ರೈತರಿಗೆ ಸ್ವಲ್ಪ ಮಟ್ಟಿನ ಆದಾಯವಿರುತ್ತದೆ. ಆದರೆ
ಲಾಕ್‌ಡೌನ್‌ ಸಂಪೂರ್ಣವಾಗಿ ಬೇಸಿಗೆಯಲ್ಲಿ ಇದ್ದ ಪರಿಣಾಮವಾಗಿ ಬಹಳಷ್ಟು ಹಾನಿಯಾಗಿದೆ ಎನ್ನುತ್ತಾರೆ ತೋಟಗಾರಿಕಾ ರೈತರು.

ಮೂರ್‍ನಾಲ್ಕು ತಿಂಗಳುಗಳ ಕಾಲ ಗೊಬ್ಬರ ಹಾಕಿ, ನೀರು ಹಾಯಿಸಿ ಕಷ್ಟ ಪಟ್ಟು ಬೆಳೆದ ಕೈ ಬಾರದೆ ಹೋದರೆ ಕೆಟ್ಟ ಅನಸತೈತ್ರಿ. ಒಂದ ದಿವಸಕ್ಕ ಬೇರೆ ಬೇರೆ ತರಕಾರಿ ಮಾರಾಟ ಮಾಡಿ 4ರಿಂದ 5 ಸಾವಿರದಷ್ಟು ಆದಾಯ ಬರುತ್ತಿತ್ತು. ಆದರ ಈಗ ಎರಡ ಸಾವಿರದಷ್ಟು ವ್ಯಾಪಾರ ಮಾಡುವುದು ಸಾಧ್ಯ ಇಲ್ಲಿ ಎನ್ನುತ್ತಾರೆ ಜಗದಾಳ ಗ್ರಾಮದ ರೈತ ಮಹಿಳೆ ಸುವರ್ಣಾ ಬಂಗಿ.

Advertisement

Udayavani is now on Telegram. Click here to join our channel and stay updated with the latest news.

Next