Advertisement

ರಾಜ್ಯದಲ್ಲಿ ತರಕಾರಿ ರಸ್ತೆಗೆ, ಹೂ ತೋಟಕ್ಕೆ ಬೆಂಕಿ

02:56 AM May 26, 2021 | Team Udayavani |

ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಲಾಕ್‌ ಡೌನ್‌ ಮಾದರಿ ಕರ್ಫ್ಯೂ ಘೋಷಿಸಿದೆ. ಇದರ ಪರಿಣಾಮ ರೈತರು ತಾವು ಬೆಳೆದ ತರಕಾರಿ, ಹೂವು, ಹಣ್ಣು ಮಾರಾಟ ಮಾಡಲಾಗದ ಸ್ಥಿತಿಗೆ ಬಂದಿದ್ದಾರೆ. ಇದರಿಂದಾಗಿ ಬೆಳೆದ ಬೆಳೆಗಳನ್ನು ಬೀದಿಗೆ ಚೆಲ್ಲುತ್ತಿರುವುದು, ಹೊಲದಲ್ಲೇ ಬಿಡುವುದು ಸಾಮಾನ್ಯವಾಗಿದೆ. ಒಟ್ಟಾರೆ ಕೊರೊನಾ ಅಬ್ಬರದಿಂದಾಗಿ ರೈತರ ಬದುಕು ಬೀದಿಗೆ ಬಿದ್ದಿದೆ.

Advertisement

ಕೊಳೆಯುತ್ತಿದೆ ತರಕಾರಿ
ಜಿಲ್ಲೆಯಲ್ಲಿ ಅಂದಾಜು 200 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ, ಕರ್ಬುಜ, ಪಪ್ಪಾಯ ಸೇರಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಬೀದರ ಗಡಿ ಜಿಲ್ಲೆಯಾಗಿರುವುದರಿಂದ . ಇಲ್ಲಿ ಬೆಳೆದ ಹಣ್ಣುಗಳನ್ನು ಹೈದರಾಬಾದ್‌ ಮತ್ತು ಸೊಲ್ಲಾಪುರಗೆ ರಫು¤ ಮಾಡ ಲಾಗುತ್ತದೆ. ಆದರೆ ಲಾಕ್‌ಡೌನ್‌ನಿಂದ ಸಾಗಣೆ ಸಮಸ್ಯೆ, ಮತ್ತೂಂದೆಡೆ ಮಾರು ಕಟ್ಟೆಯಲ್ಲಿ ವಹಿವಾಟು ಇಲ್ಲದಿರು ವುದು ಅನ್ನದಾ ತರನ್ನು ಕಂಗಾಲಾಗಿಸಿದೆ. ಖರೀದಿದಾರರೇ ಇಲ್ಲದೇ ಹಣ್ಣುಗಳು ತೋಟದಲ್ಲೇ ಕೊಳೆಯುತ್ತಿವೆ.

ಬಾಡಿದ ಬೆಳೆಗಾರರ ಬದುಕು
ಮದುವೆಗಳಿಲ್ಲದೆ ಘಮಘಮ ಪರಿಮಳ ಬೀರುವ ಹೂವುಗಳನ್ನು ಬೆಳೆಯುವ ರೈತರ ಬದುಕು ಬಾಡುತ್ತಿದೆ. ಗದಗ ತಾಲೂಕಿನ ಲಕ್ಕುಂಡಿ, ಕದಾಂಪುರ, ಪಾಪನಾಶಿ, ಸಂಭಾಪುರ ಭಾಗದಲ್ಲಿ ಸುಮಾರು 191 ಹೆಕ್ಟೇರ್‌ ಪ್ರದೇಶದಲ್ಲಿ ಸೇವಂತಿಗೆ, ಆಬಾಲಿ, ಮಲ್ಲಿಗೆ, ಗಲಾಟೆ, ಚೆಂಡು ಹೂ ಬೆಳೆಯಲಾಗುತ್ತದೆ. ವಾರ್ಷಿಕ 1,494 ಟನ್‌ ಬೆಳೆ ಉತ್ಪಾದನೆಯಾಗುತ್ತಿದ್ದು, ಸುಮಾರು 385 ಲಕ್ಷ ರೂ. ವಹಿವಾಟು ನಡೆಯುತ್ತದೆ. ಹೊನ್ನಾವರ, ಕುಮಟಾ, ಮಂಗಳೂರು, ಉಡುಪಿ, ಗದಗ, ಹುಬ್ಬಳ್ಳಿ, ಬೆಳಗಾವಿ ಹೂವಿನ ಪ್ರಮುಖ ಮಾರುಕಟ್ಟೆಗಳಾಗಿವೆ. ಆದರೆ ವಾಹನ ಗಳ ಸಂಚಾರವಿಲ್ಲದ ಕಾರಣ ಕೆಲವರು ಹೂವು ಕಟಾವು ಮಾಡದೇ ತೋಟದಲ್ಲೇ ಬಿಟ್ಟಿದ್ದಾರೆ. ಇನ್ನೂ, ಕೆಲವರು ಹೂವಿನ ಗಿಡಗಳನ್ನು ಕಿತ್ತು ಬೆಂಕಿ ಹಚ್ಚುತ್ತಿದ್ದಾರೆ.

ಬೆಳೆ ಕಳೆದುಕೊಂಡ ರೈತ
ಮಂಡ್ಯ ತಾಲೂಕಿನ ಈಚಗೆರೆ ಗ್ರಾಮದ ರೈತ ನವೀನ್‌ಕುಮಾರ್‌ ತನ್ನ ಒಂದು ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದಾರೆ. ಆದರೆ ಲಾಕ್‌ಡೌನ್‌ನಿಂದ ಮಾರಾಟ ಮಾಡಲು ಆಗದೆ ಜಮೀನಿನಲ್ಲಿಯೇ ಕೊಳೆಯುತ್ತಾ ಬಿದ್ದಿದೆ. ಶಿವಳ್ಳಿ ಗ್ರಾಮದ ರೈತ ದೇವರಾಜು, ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದರು. ಆದರೆ ಲಾಕ್‌ಡೌನ್‌ನಿಂದ ಮಾರಾಟವಾಗದೆ ಸುಮಾರು 2 ಲಕ್ಷ ರೂ. ನಷ್ಟವಾಗಿದೆ. ಇದರಿಂದ ಬೇಸತ್ತ ರೈತ ದೇವರಾಜು ದನ, ಕರು, ಕುರಿಗಳನ್ನು ಬಿಟ್ಟು ಎಲೆಕೋಸುಗಳನ್ನು ಮೇಯಿಸಿದ್ದಾನೆ.

ಹೂವು, ಹಣ್ಣು, ತರಕಾರಿ ಹಾಳು
ಲಾಕ್‌ಡೌನ್‌ ಪರಿಣಾಮ ಹೊರ ಜಿಲ್ಲೆಗೆ ಹೋಗುವ ಬೆಳೆಗಳ ಪ್ರಮಾಣ ಕಡಿಮೆಯಾಗಿದೆ. ಸರಾಸರಿ ಶೇ.40ರಷ್ಟು ಬೆಳೆ ವ್ಯಾಪಾರವಾಗದೆ ಮಾರು ಕಟ್ಟೆಯಲ್ಲೇ ಉಳಿಯುತ್ತಿದೆ. ಒಂದೆರಡು ದಿನ ಕಾದು ನೋಡುವ ರೈತರು, ಬಳಿಕ ಸಿಕ್ಕಷ್ಟು ಬೆಲೆಕ್ಕೆ ವ್ಯಾಪಾರಿಗಳಿಗೆ ಬೆಳೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನು ರೈತರಿಂದ ಖರೀದಿಸಿದ ಬೆಳೆಯನ್ನು ಹೊರ ಜಿಲ್ಲೆಗೆ, ಸ್ಥಳೀಯ ಗ್ರಾಹಕರಿಗೆ ತಲುಪಿಸಲಾಗದೆ ಹೋಲ್‌ಸೇಲ್‌ ವ್ಯಾಪಾರಿಗಳೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿ ಲಾಕ್‌ಡೌನ್‌ನಲ್ಲಿ ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡಲು ಯಾವುದೇ ಅಡೆತಡೆ ಇಲ್ಲದೆ ಇರುವುದರಿಂದ ಬೆಳೆ ಹೊಲದಲ್ಲಿಯೇ ಹಾಳಾದ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬಂದಿಲ್ಲ.

Advertisement

ದನಗಳಿಗೆ ಬದನೆ ಹಾಕಿದ ರೈತ
ಕೊಪ್ಪಳದ ರೈತ ಗವಿಸಿದ್ದಪ್ಪ ಡೊಳ್ಳಿನ್‌ ಎರಡು ಎಕರೆಯಲ್ಲಿ ತಲಾ ಒಂದೊಂದು ಎಕರೆ ಬದನೆ ಹಾಗೂ ಟೊಮೆಟೋ ಸಸಿ ನಾಟಿ ಮಾಡಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತರಕಾರಿಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಅದಕ್ಕೆ ತಕ್ಕಂತೆ ಕೋಲ್ಡ್‌ ಸ್ಟೋರೇಜ್‌ ಕೂಡ ಇಲ್ಲ. ಹೀಗಾಗಿ ಜಾನುವಾರುಗಳಿಗೆ ಹಾಕಿದ್ದಾರೆ.

ಹೂ ರಫ್ತು ಸ್ಥಗಿತ
ಜಿಲ್ಲೆಯಲ್ಲಿ ರೈತರು ಸೂಕ್ತ ಬೆಲೆ ಸಿಗದೆ ತಾವು ಬೆಳೆದ ಟೊಮೆಟೋ, ತರಕಾರಿ ರಸ್ತೆಗೆ ಸುರಿದು, ರೋಜಾ ಹೂ ತೋಟಕ್ಕೆ ಬೆಂಕಿಯಿಟ್ಟಿದ್ದಾರೆ. ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ರೋಜಾ ಹೂವು ವಿದೇಶಗಳಿಗೆ ರಫ್ತು ನಿಂತು ಹೋಗಿದೆ. ರೋಝ್, ಜೆರಬೆರಾ, ಗ್ರ್ಯಾಡ್ಸ್‌, ಬರ್ಡ್‌ ಆಫ್‌ ಪ್ಯಾರಡೈಸ್‌, ಗಾರನೇಷನ್‌ ಮಿಡಿಲ್‌ ಈಸ್ಟ್‌ ದೇಶಗಳು ಹಾಗೂ ಅಮೆರಿಕಗೆ ರಫ್ತು ಆಗುತ್ತಿತ್ತು. ಎಲ್ಲವೂ ನಿಂತು ಹೋಗಿದೆ.

ಹೊಲದಲ್ಲಿಯೇ ಬೆಳೆ ನಾಶ
ಜಿಲ್ಲೆಯಲ್ಲಿ ಅತೀ ಹೆಚ್ಚು ತರಕಾರಿ ಬೆಳೆಯುವ ಹಳೆ ಬೀಡು ಭಾಗದ ರೈತರು ಎಲೆಕೋಸು ಮತ್ತು ಟೊಮೆಟೋ ಮಾರಾಟ ಮಾಡಲಾಗದೆ ಹೊಲದ ಲ್ಲಿಯೇ ನಾಶವಾ ಗುತ್ತಿದೆ. ಹಳೆಬೀಡು ಸಮೀಪದ ಸೊಪ್ಪಿನಹಳ್ಳಿಯ ರೈತ ಪರ್ವತೇಗೌಡ ಅವರು 1.5 ಎಕರೆಯಲ್ಲಿ ಎಲೆಕೋಸು ಬೆಳೆಯಲು 75 ಸಾವಿರ ರೂ. ಖರ್ಚು ಮಾಡಿದ್ದರು. ಕಟಾವಿಗೆ ಬಂದಿದ್ದ ಕೋಸನ್ನು ಹೊಲದ ಬಳಿ ಬಂದ ವರ್ತಕರು ಕೇವಲ 10 ಸಾವಿರಕ್ಕೆ ಕೇಳಿದ್ದರು. ಆದರೆ ಖರೀದಿಗೆ ಬರಲೇ ಇಲ್ಲ. ಈಗ ಟ್ರ್ಯಾಕ್ಟರ್‌ನ ರೋಟರ್‌ ಓಡಿಸಿ ನಾಶಪಡಿಸಿದ್ದಾರೆ.

ಕೊಳೆಯುತ್ತಿದೆ ತರಕಾರಿ
ಜಿಲ್ಲೆ ಯಲ್ಲಿ ಬೆಳೆದ ಕೊತ್ತಂಬರಿ, ಮೆಣಸಿನಕಾಯಿ, ಹಾಗಲಕಾಯಿ, ಟೊಮೆಟೋ, ಬೀನ್ಸ್‌, ಬದನೆಕಾಯಿ ಸೇರಿದಂತೆ ಇತರ ಬೆಳೆಗಳಿಗೆ ಬೆಲೆ ಇಲ್ಲವಾಗಿದೆ. ಜಿಲ್ಲೆಯಲ್ಲಿ ಮಾವಿನ ಹಣ್ಣು ಯಾರೂ ಕೇಳುತ್ತಿಲ್ಲ. ತರಕಾರಿ, ಹಣ್ಣು ಬೇರೆ ಕಡೆಗೆ ರಫ್ತಾಗುತ್ತಿಲ್ಲ ಎಂದು ವ್ಯಾಪಾರಸ್ಥರು ನೆಪ ಹೇಳುತ್ತಿದ್ದಾರೆ. ಬೆಳಗಾವಿ ತಾಲೂಕಿನ ಬಸವನ ಕುಡಚಿಯಲ್ಲಿ ರೈತನೊಬ್ಬ ಕೊತ್ತಂಬರಿ ಬೆಳೆಗೆ ದರ ಸಿಗದಿದ್ದಕ್ಕೆ ಇಡೀ ಹೊಲವನ್ನೇ ಕಿತ್ತು ಸ್ವತ್ಛಗೊಳಿಸಿದ್ದಾನೆ.

ದನಗಳಿಗೆ ಬೆಂಡೆಕಾಯಿ ಆಹಾರ!
ಜಿಲ್ಲೆಯ ಅಫಜಲಪುರ ತಾಲೂಕಿನ ಬಳ್ಳೂರ್ಗಿ ಗ್ರಾಮದಲ್ಲಿ ರೈತ ಮನೋಹರ ರಾಠೊಡ, ಮೂರು ಎಕರೆಯಲ್ಲಿ ಬೆಂಡೆಕಾಯಿ, ಸೌತೆಕಾಯಿ ಮತ್ತು ಚವಳಿಕಾಯಿ ಉತ್ತಮವಾಗಿ ಬೆಳೆದಿದ್ದರು. ಲಾಕ್‌ಡೌನ್‌ನಿಂದ ಮಾರಾಟ ಸಮಸ್ಯೆಯಿಂದಾಗಿ ಮನೆಯಲ್ಲಿನ ದನಗಳಿಗೆ ತಿನ್ನಲು ಹಾಕುತ್ತಿದ್ದಾರೆ. ಕಮಲಾಪುರ ತಾಲೂಕಿನ ಮುದ್ದಡಗಾ ಗ್ರಾಮದ ಶಿವರಾಜ ದಣ್ಣೂರ ಎನ್ನುವ ರೈತ 100 ಕ್ವಿಂಟಲ್‌ ಈರುಳ್ಳಿ ಮಾರಲಾಗದೆ ಹೊಲದಲ್ಲೇ ಶೇಖರಣೆ ಮಾಡಿದ್ದಾರೆ.

2 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ ಸಂಕಷ್ಟ
ಜಿಲ್ಲೆಯಲ್ಲಿ ಸುಮಾರು 2 ಸಾವಿರ ಹೆಕ್ಟೇರ್‌ ತೋಟ ಗಾರಿಕೆ ಬೆಳೆಗಳಿಗೆ ಸಂಕಷ್ಟ ಎದುರಾಗಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದರಿಂದ ಹಣ್ಣು ಹಾಗೂ ತರಕಾರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕವಂತಾಗಿದೆ. 800-900 ಹೆಕ್ಟೇರ್‌ ತರಕಾರಿ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಬೇಸಗೆಯಲ್ಲಿ ಬೆಳೆದ ಈರುಳ್ಳಿ, ಬದನೆ ಕಾಯಿ, ಮೆಣಸಿನಕಾಯಿ, ಟೊಮೆಟೊ ಬೆಳೆಗಳಿಗೆ ಪರಿಣಾಮ ಬೀರಿದೆ. ಜತೆಗೆ 1,200ಕ್ಕೂ ಅ ಧಿಕ ಹೆಕ್ಟೇರ್‌ ಪ್ರದೇಶದ ಹಣ್ಣಿನ ಬೆಳೆಗಳಿಗೂ ಸಂಕಷ್ಟ ಎದುರಾಗಿದೆ. ಮಾವು, ಪಪ್ಪಾಯಿ, ದಾಳಿಂಬೆ, ಅಂಜೂರ, ಮೋಸಂಬಿಗೆ ಸಮರ್ಪಕ ಮಾರುಕಟ್ಟೆ ಸಿಕ್ಕಿಲ್ಲ. ತೋಟಗಾರಿಕೆ ಬೆಳೆಗಳ ಜತೆಗೆ ಜಿಲ್ಲೆಯ ಭತ್ತ ಬೆಳೆಗಾರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಾರ್‌ ರೂಂ
ಲಾಕ್‌ ಡೌನ್‌ ಸಮಯದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಪ್ರತ್ಯೇಕವಾಗಿ ವಾರ್‌ ರೂಂ ವ್ಯವಸ್ಥೆ ಮಾಡಿವೆ. ಕೃಷಿ ಹಾಗೂ ತೋಟಗಾರಿಕೆ ವಿಶ್ವ ವಿದ್ಯಾನಿಲಯ ಮೂಲಕವೂ ರೈತರಿಗೆ ಅಗತ್ಯ ಸಲಹೆ ನೀಡುವ ವ್ಯವಸ್ಥೆ ಮಾಡಿವೆ. ಅಲ್ಲದೆ ರೈತರು ಹಾಪ್‌ಕಾಮ್ಸ…ಗೆ ನೇರವಾಗಿ ತರಕಾರಿ, ಹಣ್ಣು ಮಾರಾಟ ಮಾಡ ಲು ತೋಟಗಾರಿಕೆ ಇಲಾಖೆ ಅವಕಾಶ ಕಲ್ಪಿಸಿದೆ. ಹೀಗಾಗಿ, ಕಳೆದ ವರ್ಷ ಕ್ಕಿಂತ ಈ ವರ್ಷವೇ ಉತ್ತಮ ಎಂಬುದು ಕೃಷಿ ಮತ್ತು ತೋಟ ಗಾ ರಿಕೆ ಇಲಾಖೆ ಅಧಿ ಕಾ ರಿ ಗಳ ಹೇಳಿ ಕೆ.

ಅಗ್ರಿವಾರ್‌ ರೂಂ. ನಂಬರ್‌ : 08022212818, 08022210237

Advertisement

Udayavani is now on Telegram. Click here to join our channel and stay updated with the latest news.

Next