Advertisement
ಮದುವೆ ಸೇರಿದಂತೆ ಶುಭ ಕಾರ್ಯ ಮಾಡುವವರು ತರಕಾರಿ ಬೆಲೆ ಕೇಳಿ ಬೆಚ್ಚಿ ಬೀಳುತ್ತಿದ್ದಾರೆ. ಹುಳಿಯಾರು ಮಾರುಕಟ್ಟೆಗೆ ಹಾಸನದಿಂದ ತರಕಾರಿ ಬರುತ್ತದೆ. ಆದರೆ, ಹಾಸನ ದಲ್ಲೇ ತರಕಾರಿ ಬೆಳೆ ಕುಸಿದಿದ್ದು, ಬೆಲೆ ಹೆಚ್ಚಳವಾಗಿದೆ. ಇದರ ಪರಿಣಾಮ ಹುಳಿಯಾರಿನಲ್ಲೂ ಬೆಲೆ ಗಗನ ಮುಖೀಯಾಗಿದೆ. ಇದಕ್ಕೆ ಮಳೆ ಕೊರತೆ, ಬಿಸಿಲಿನ ಝಳ ಹೆಚ್ಚಳ ಹಾಗೂ ಅಂತರ್ಜಲ ಕುಸಿತದಿಂದ ಕೃಷಿಗೆ ನೀರಿನ ಕೊರತೆ ಎದುರಾಗಿ ಸದ್ಯ ತರಕಾರಿ ಬೆಳೆಯು ವವರ ಸಂಖ್ಯೆ ಕಡಿಮೆಂಯಾಗಿರುವುದು ಕಾರಣ ಎನ್ನಲಾಗಿದೆ.
Related Articles
Advertisement
ವ್ಯಾಪಾರಗಳಿಗೆ ನಷ್ಟವಾಗುವ ಸಾಧ್ಯತೆ: ತರಕಾರಿ ಬೆಲೆ ಜಾಸ್ತಿಯಾಗಿರುವ ಕಾರಣ ಹಿಂದೆಲ್ಲ ಕೆ.ಜಿಗಟ್ಟಲೇ ಖರೀದಿಸುತ್ತಿದ್ದವರು ಈಗ ಅರ್ಧ, ಕಾಲು ಕೆ.ಜಿ ಸಾಕೆನ್ನುತ್ತಿದ್ದಾರೆ. ಅಲ್ಲದೆ, ಬೆಲೆಗಳು ಹೆಚ್ಚಾದ ಪರಿಣಾಮ ತರಕಾರಿ ಕೊಳ್ಳುವವರ ಸಂಖ್ಯೆ ಕಡಿಮೆ ಯಾಗುತ್ತಿದೆ. ಮಾಂಸಹಾರಿಗಳಂತೂ ಕೆ.ಜಿ.ತರಕಾರಿಗೆ ಕೆ.ಜಿ.ಕೋಳಿ ಬರುತ್ತದೆ ಎಂದು ಗೇಲಿ ಮಾಡುತ್ತಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರು ಬೀನ್ಸ್, ಮೆಣಸಿನ ಕಾಯಿ, ಟೊಮೊಟೋ ಖರೀದಿಸಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮ್ಮ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ ಎಂದು ತರಕಾರಿ ವ್ಯಾಪಾರಿ ಖಾಜಾಪೀರ್ ಹೇಳುತ್ತಾರೆ.
ಒಟ್ಟಾರೆ ಬೆಲೆ ಏರಿಕೆಯ ಬಿಸಿ ಮಧ್ಯಮ ಮತ್ತು ಬಡ ವರ್ಗದ ಮೇಲೆ ತಟ್ಟುತ್ತಿದೆ. ಅಲ್ಲದೆ, ಹೋಟೆಲ್ ಉದ್ಯಮದ ಮೇಲೂ ತರಕಾರಿ ಏರಿಕೆಯ ಬಿಸಿ ತಟ್ಟಿದೆ. ಈಗ ಮಳೆ ಬಂದು ರೈತರು ತರಕಾರಿ ಬೆಳೆಯಲು ಮುಂದಾದರೂ ಅವು ಮಾರುಕಟ್ಟೆಗೆ ಬರುವುದು ಕನಿಷ್ಠ ಎಂದರೂ ಎರಡು- ಮೂರು ತಿಂಗಳು ಬೇಕಾ ಗುತ್ತದೆ. ಅಲ್ಲಿಯವರೆವಿಗೂ ತರಕಾರಿ ಬೆಲೆ ಎಲ್ಲಿಗೆ ಹೋಗಿ ಮುಟ್ಟುತ್ತದೋ ಊಹಿಸಲಾಗದಾಗಿದೆ.
ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರು, ಈಗ ನಿತ್ಯ ಬಳಕೆಯ ತರಕಾರಿ ಬೆಲೆಯೂ ಗಗನಕ್ಕೇರುತ್ತಿ ರುವಕಾರಣ ಹೈರಾಣಾಗಿ ದ್ದಾರೆ. ಮುಂಗಾರು ಪೂರ್ವ ಮಳೆ ಕೈಕೊಟ್ಟಿರುವ ಕಾರಣ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎನ್ನಲಾಗುತ್ತಿದ್ದು, ಮಹಿಳೆ ಯರಂತೂ ದಿನನಿತ್ಯ ಯಾವ ಅಡುಗೆ ಮಾಡು ವುದು ಎಂಬ ಚಿಂತೆಗೀಡಾಗಿ ಹೆಚ್ಚಾಗಿ ಸೊಪ್ಪಿನ ಸಾರು ಮಾಡಲು ಮುಂದಾಗುತ್ತಿದ್ದಾರೆ.
●ಪುಟ್ಟರಾಜು, ಗ್ರಾಹಕ, ಹುಳಿಯಾರು ● ಎಚ್.ಬಿ.ಕಿರಣ್‌ಕುಮಾರ್