Advertisement
ಕುಂದಾಪುರದಲ್ಲಿ ಕೆಲವೇ ಕೆಲವು ಹಣ್ಣು, ತರಕಾರಿ ವ್ಯಾಪಾ ರಿಗಳಿರುವುದರಿಂದ ಇಲ್ಲಿಗೆ ಯಾವುದೇ ಹೋಲ್‌ಸೇಲ್ ಹಣ್ಣು, ತರಕಾರಿ ಸಾಗಾಟ ವಾಹನಗಳು ಬರುತ್ತಿಲ್ಲ. ಇಲ್ಲಿನ ವರ್ತಕರು ಪ್ರತೀ ದಿನ ಬೆಳಗ್ಗೆ ಬೇಗ ಆದಿ ಉಡುಪಿಯ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಅಲ್ಲಿಂದ ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
Related Articles
Advertisement
ಕುಂದಾಪುರದ ವರ್ತ ಕರು ಉಡುಪಿಗೆ ಹೋಗಿ ತರಕಾರಿ, ಹಣ್ಣು ತರಬೇಕಿದ್ದು, ಅದರ ಸಾಗಾಟ, ಕೂಲಿಯಾಳುಗಳು, ವೇಸ್ಟೇಜ್ ವೆಚ್ಚ ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಕಳೆದ ಒಂದು ವಾರದಿಂದ ವಿವಿಧ ತರಕಾರಿ ಬೆಲೆಯನ್ನು ಏರಿಸಲಾಗಿದೆ. ಇನ್ನು ಹಸಿ ಮೆಣಸು, ಕ್ಯಾರೆಟ್, ಕ್ಯಾಲಿಫÉವರ್, ಕ್ಯಾಬೇಜ್‌ಗಳೆಲ್ಲ ಮಳೆ ಬಿದ್ದ ತತ್‌ಕ್ಷಣ ಕೊಳೆತು ಹೋಗುತ್ತಿದ್ದು, ಅಗತ್ಯದಷ್ಟು ಇಲ್ಲದ್ದರಿಂದ ಏಕಾಏಕಿ ಬೆಲೆ ಏರಿಕೆಯಾಗುತ್ತದೆ. ಇದಲ್ಲದೆ ಹಿಂದೆ ಉಡುಪಿಗೆ ಬೇರೆ ಬೇರೆ ಜಿಲ್ಲೆಗಳಿಂದ 15-20 ಮಂದಿ ಹೋಲ್‌ಸೇಲ್ ವ್ಯಾಪಾರಿಗಳು ಹಣ್ಣು, ತರಕಾರಿ ತರುತ್ತಿದ್ದರು. ಆದರೆ ಈಗ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ 4-5 ಮಂದಿ ಮಾತ್ರ ಬರುತ್ತಿದ್ದು, ಕಡಿಮೆ ಸಾಮಗ್ರಿಯಿಂದಾಗಿ ಬೇಡಿಕೆ ಹೆಚ್ಚಿದ್ದು, ಅವರಿಂದಲೇ ನಾವು ದುಬಾರಿ ಬೆಲೆ ಕೊಟ್ಟು ಖರೀದಿಸಬೇಕಾಗಿದೆ ಎನ್ನುತ್ತಾರೆ ವರ್ತಕರು.
ಹಳ್ಳಿಗಳಿಂದಲೂ ಬರುತ್ತಿಲ್ಲ : ಕುಂದಾಪುರ ನಗರಕ್ಕೆ ಕುಂದಬಾರಂದಾಡಿ, ನೂಜಾಡಿ, ಹಳ್ಳಿಹೊಳೆ, ಅಮಾಸೆಬೈಲು ಮತ್ತಿತರ ಕಡೆಗಳಿಂದ ರೈತರು ತಾವು ಬೆಳೆದ ತರಕಾರಿಗಳನ್ನು ತರುತ್ತಿದ್ದರು. ಆದರೆ ಈಗ ಪ್ರಮುಖವಾಗಿ ಅವರಿಗೆ ಬರಲು ಬಸ್ ಇಲ್ಲ. ಕುಂದಾಪುರದಿಂದ ತುಂಬಾ ದೂರ ಇರುವುದರಿಂದ ಬಾಡಿಗೆ ಮಾಡಿಕೊಂಡು ಬಂದರೆ ಅದರಲ್ಲೇನು ಲಾಭವೂ ಇಲ್ಲ. ಹೀಗಾಗಿ ರೈತರು ತಾವು ಬೆಳೆದ ಬೆಂಡೆ, ತೊಂಡೆ, ಅಲಸಂಡೆ, ಬಸಳೆ, ಸೌತೆಕಾಯಿ, ಬದನೆ, ಮತ್ತಿತರ ತರಕಾರಿಗಳನ್ನು ಕುಂದಾಪುರಕ್ಕೆ ತರಲಾಗದೇ, ಮನೆ ಅಕ್ಕ- ಪಕ್ಕ ಮಾತ್ರ ಮಾರುವಂತಾಗಿದ್ದು, ಕೆಲವೆಲ್ಲ ಕೊಳೆತು ಹೋಗುವಂತಹ ಸ್ಥಿತಿ ಇದೆ. ಹಳ್ಳಿಗಳಿಂದ ಊರ ತಾಜಾ ತರಕಾರಿಗಳ ಪೂರೈಕೆಯಾಗದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇದು ಎಲ್ಲರಿಗೂ ಕಷ್ಟದ ಸಮಯವಾಗಿದ್ದು, ಆದಷ್ಟು ಎಲ್ಲ ವರ್ತಕರಲ್ಲಿಯೂ ಭಾರೀ ಪ್ರಮಾಣದಲ್ಲಿ ಬೆಲೆ ಏರಿಸದಂತೆ ಮನವಿ ಮಾಡಿಕೊಳ್ಳಲಾಗಿದೆ. ಅದಾಗಿಯೂ ದರ ಮಿತಿಗಿಂತ ಗರಿಷ್ಠ ಪ್ರಮಾಣದಲ್ಲಿ ತರಕಾರಿ, ಹಣ್ಣು ಬೆಲೆ ಏರಿಸುತ್ತಿದ್ದರೆ, ಆ ಬಗ್ಗೆ ನಿಗಾ ವಹಿಸಲಾಗುವುದು. – ಕೆ. ರಾಜು, ಕುಂದಾಪುರ