Advertisement
ಮಳೆ ಕೊರತೆ ಪರಿಣಾಮ ಜಿಲ್ಲೆಯ ವಿವಿಧ ಭಾಗದಲ್ಲಿ ರೈತರು ಬೆಳೆದಿದ್ದ ತರಕಾರಿ, ಹಣ್ಣು ಮತ್ತು ಸೊಪ್ಪು ಹೊಲದಲ್ಲೇ ಬತ್ತುತ್ತಿದ್ದು, ಇಳುವರಿ ಕುಠಿತವಾಗಿದೆ. ಪರಿಣಾಮ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗದ ಹಿನ್ನೆಲೆ ತರಕಾರಿ ಬೆಲೆ ಗಗನಕ್ಕೇರಿದ್ದು, ಜಿಲ್ಲೆಯ ಜನತೆ ಹೈರಾಣಾಗಿದ್ದಾರೆ.
Related Articles
Advertisement
ಸಗಟು ಮಾರುಕಟ್ಟೆಯಲ್ಲಿ ದಪ್ಪಮೆಣಸಿನಕಾಯಿ, ಕ್ಯಾರೆಟ್, ಬೀನ್ಸ್, ಟೊಮೆಟೊ, ಈರುಳ್ಳಿ ಸೇರಿದಂತೆ ಹಲವು ತರಕಾರಿ ದರ ಹೆಚ್ಚಾಗಿದ್ದು, ರಿಟೇಲ್ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಜನರು ಕಂಗಾಲಾಗಿ¨ªಾರೆ. ಬಹುತೇಕ ಕಡೆ ತರಕಾರಿ ಬೆಳೆ ಒಣಗಿದ್ದು, ಬೀನ್ಸ್ ಸೇರಿದಂತೆ ನಾನಾ ತರಕಾರಿ, ಸೊಪ್ಪುಗಳ ಪೂರೈಕೆ ಕಡಿಮೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಈ ಹಿಂದೆ ಕೆ.ಜಿ.ಗೆ 10-20 ರೂ. ದರವಿದ್ದ ಟೊಮೆಟೊ 40-50ಕ್ಕೆ ಏರಿಕೆಯಾಗಿದೆ. ಒಂದು ಕಂತೆ ದಂಟು, ಮೆಂತ್ಯ, ಪಾಲಕ್, ಸಪ್ಸಿಗೆ, ಕೊತ್ತಂಬರಿ ಸೊಪ್ಪು 10 ರೂ. ಮುಟ್ಟಿದೆ.
ಚಿಲ್ಲರೆ ಅಂಗಡಿಯಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟು
ನಗರದ ವಿವಿಧೆಡೆ ಹಾಗೂ ಸಂತೆಗಳಲ್ಲಿ ತರಕಾರಿ ಸಗಟು ಮಾರಾಟ ಕೇಂದ್ರಗಳಿಗಿಂತ ದುಪ್ಪಟ್ಟು ಬೆಲೆಗೆ ತರಕಾರಿ ಮತ್ತು ಸೊಪ್ಪು ಮಾರಾಟವಾಗುತ್ತಿದ್ದು, ಟೊಮೊಟೊ ಪ್ರತಿ ಕೆ.ಜಿ.ಗೆ 100, ಈರುಳ್ಳಿಗೆ 90, ಕ್ಯಾರೆಟ್‌ಗೆ 80 ರೂ.ನಂತೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಹೊರೆಯಾಗಿದೆ.
ಬೀನ್ಸ್, ಮೆಣಸಿನ ಕಾಯಿ ಬೆಲೆ ದಿಢೀರ್ ಏರಿಕೆ
30-40 ರೂ.ಗೆ ದೊರೆಯುತ್ತಿದ್ದ ಬೀನ್ಸ್ ಈಗ ಬಲು ದುಬಾರಿಯಾಗಿದ್ದು, ಪ್ರತಿ ಕಿಲೋಗೆ 160ರಿಂದ 180ಕ್ಕೆ ಮಾರಾಟ ಮಾಡಲಾಗುತ್ತಿದೆ. ಜತೆಗೆ 40 ರೂ. ಇದ್ದ ಹಸಿ ಮೆಣಸಿನ ಕಾಯಿ ಬೆಲೆ ಸಧ್ಯಕ್ಕೆ 70ರಿಂದ 80 ರೂಪಾಯಿಗೆ ಏರಿಕೆಯಾಗಿದೆ. ಬೆಂಡೆಕಾಯಿಗೆ 60, ಮೂಲಂಗಿ 60, ಕ್ಯಾರೆಟ್-ಬೀಟ್ರೋಟ್ 70, ಸೌತೆಕಾಯಿ 50, ಹಾಗಲಕಾಯಿ 70, ಕೋಸು 40 ರೂಪಾಯಿಗೆ ಮಾರಾಟವಾಗುತ್ತಿದೆ.
-ಸತೀಶ್ ದೇಪುರ