Advertisement

ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹ

12:17 PM Jan 03, 2020 | Team Udayavani |

ಶ್ರೀನಿವಾಸಪುರ: ನೂರಾರು ಕೋಟಿ ರೂ. ಖರ್ಚು ಮಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಪಡಿಸಿದರೂ ನಗರ ದಲ್ಲಿ ನಡೆಯುವ ತರಕಾರಿ ಹಾಗೂ ಇತರೆ ವಹಿವಾಟನ್ನು ಇಲ್ಲಿಗೆ ಸ್ಥಳಾಂತರಿಸುವಲ್ಲಿ ತಾಲೂಕು ಆಡಳಿತ ಹಾಗೂ ಮಾರುಕಟ್ಟೆ ಅಧಿಕಾರಿಗಳು ಸಂಪೂರ್ಣ ವಿಫ‌ಲವಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೆ.ನಾಡ ಆರೋಪಿಸಿದರು.

Advertisement

ತಾಲೂಕು ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತರಕಾರಿ ಯನ್ನು ಉಚಿತವಾಗಿ ಜನರಿಗೆ ವಿತರಿಸಿ ಮಾತನಾಡಿದ ಅವರು, ತಾಲೂಕು ಸಮಿತಿ ನೇತೃತ್ವದಲ್ಲಿ ಪಟ್ಟಣದ ತರಕಾರಿ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಲು, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು, ಸ್ವಾಮಿನಾಥನ್‌ ವರದಿ ಜಾರಿ ಮಾಡ  ಬೇಕೆಂದು ಹಾಗೂ ಪ್ರತಿ ಹಳ್ಳಿಯಲ್ಲಿ ಜಾನುವಾರುಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗೆ 10 ಎಕರೆ ಗೋಮಾಳ ಮೀಸಲಿಡಬೇಕೆಂದು ಒತ್ತಾಯಿಸಿದರು.

ಅಧಿಕಾರಿಗಳ ಧೋರಣೆ ಜೊತೆಗೆ ದೇಶಕ್ಕೆ ಅನ್ನ ನೀಡುವ ಅನ್ನದಾತನ ಬದುಕು ದಿನೇದಿನೆ ದುಸ್ತರವಾಗುತ್ತಿದೆ. ಸರ್ಕಾರಗಳ ಬೇಜವಾಬ್ದಾರಿಯಿಂದ ಕೃಷಿ ಕಾರ್ಪೊರೇಟ್‌ ಕಂಪನಿಗಳ ಪಾಲಾಗು ತ್ತಿದೆ. ಕೃಷಿ ಕ್ಷೇತ್ರದಿಂದ ರೈತರು ನಿವೃತ್ತಿ ಯಾಗುತ್ತಿದ್ದಾರೆ. ಮತ್ತೂಂದಡೆ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ ಜೊತೆಗೆ ಬೆಲೆಯೂ ಇಲ್ಲದೇ ಹಾಕಿದ ಬಂಡವಾಳ ಬಾರದೇ ರೈತರು ಖಾಸಗಿ ಸಾಲಕ್ಕೆ ಸಿಲುಕಿತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಮರಗಲ್‌ ಶ್ರೀನಿವಾಸ್‌, ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ, ಜಿಲ್ಲಾ ಮುಖಂಡ ರಾಯಲ್ಪಾಡು ಹರೀಶ್‌, ಆಚಂಪಲ್ಲಿ ಗಂಗಾಧರ್‌, ಕೊಳ ತೂರು ಸಹದೇವಪ್ಪ, ಮುರಳಿ, ಶ್ರೀರಾಮ, ಆಲವಾಟ ಶಿವ, ಷಪಿ, ವಕ್ಕಲೇರಿ ಹನುಮಪ್ಪ, ಮುದುವಾಡಿ ಚಂದ್ರಪ್ಪ, ತೆರ್ನಹಳ್ಳಿ ಮದು, ಸುಪ್ರೀಂ ಚಲಪತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next