Advertisement

ಬಾಟಲಿಯೊಳಗೆ ತರಹೇವಾರಿ ತರಕಾರಿ

12:31 AM Jun 23, 2019 | mahesh |

ನೀರು, ತಂಪು ಪಾನೀಯ ಇನ್ನಿತರ ಪ್ಲಾಸ್ಟಿಕ್‌ ಬಾಟಲಿಗಳ ಮರುಬಳಕೆ ಅಪರೂಪ. ಒಮ್ಮೆ ಉಪಯೋಗಿಸಿದ ಅನಂತರ ಬಿಸಾಡುವ ವಸ್ತುಗಳಾಗಿ ಇವು ಪರಿಸರದ ವಿನಾಶಕ್ಕೆ ಕಾರಣ ವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಶಿರಸಿಯ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಮಾತ್ರ ಈ ಪ್ಲಾಸ್ಟಿಕ್‌ ಬಾಟಲಿಗಳು ಪರಿಸರ ಜಾಗೃತಿ ಸಂದೇಶ ಬೀರುತ್ತಿವೆ.

Advertisement

ಏನಿದು ಮಾದರಿ?
ಇಲ್ಲಿ ಅನುಪಯುಕ್ತ ನೀರಿನ ಬಾಟಲ್ಗಳೇ ತರಕಾರಿ ಸೊಪ್ಪಿನ ಗಿಡಗಳನ್ನು ಬೆಳೆಸುವ ಕುಂಡಗಳಾಗಿವೆ. ಒಂದಲ್ಲ, ಎರಡಲ್ಲ, ಹತ್ತಾರು ಜಾತಿಯ ಸೊಪ್ಪಿನ ಬೀಜಗಳನ್ನು ಬಿತ್ತಿ ಫ‌ಸಲು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಆಸಕ್ತಿಕರವಾಗಿ ತರಕಾರಿ ಅಂತರಿಕ್ಷ ಗಾರ್ಡನ್‌ ನಿರ್ಮಿಸಿದೆ. ತೋಟಗಾರಿಕಾ ವಿದ್ಯಾರ್ಥಿಗಳಿಗೆ ಇದು ವೆಜಿಟೆಬಲ್ ವರ್ಟಿಕಲ್ ಗಾರ್ಡನ್‌ ಆಗಿದೆ!

ಬರೀ ಬಟಾಲಿಗಳಲ್ಲ

ಇಲ್ಲಿ ಬಾಟಲಿಗಳು ಕೇವಲ ಬಾಟಲಿಗಳಲ್ಲ. ಅವು ಕೊಳೆಯದ ತ್ಯಾಜ್ಯಗಳೂ ಅಲ್ಲ . ಸುಮಾರು 65ಕ್ಕೂ ಹೆಚ್ಚು ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಅವುಗಳನ್ನು ಅಡ್ಡಲಾಗಿ ಕೊರೆದು, ದಾರದಲ್ಲಿ ಕಾಲೇಜಿನ ಮುಂಭಾಗದಲ್ಲಿ ಇರುವ ಕಂಬಕ್ಕೆ ಕಟ್ಟಿ ಒಂದು ಆಕಾರ ನೀಡಿದ್ದಾರೆ. ಮನೆ ಮನೆಗಳಲ್ಲಿ ಪ್ರತಿ ಯೊಬ್ಬರೂ ಮಾಡ ಬಹುದಾದ ಮಾದರಿ ಯನ್ನು ಸಿದ್ಧಗೊಳಿಸಿದ್ದಾರೆ.

ಕೊರೆದ ಬಾಟಲಿಗಳ ಒಳಗೆ ನಾರಿನ ಪುಡಿ ಹಾಕಿ ಸೊಪ್ಪಿನ ಬೀಜ ಗಳನ್ನು ಬಿತ್ತಲಾಗಿದೆ. ನಾಲ್ಕು ಬದಿಯಲ್ಲಿ ಕಂಬಗಳನ್ನು ನಿಲ್ಲಿಸಿ ಅದಕ್ಕೆ ಅಡ್ಡಲಾಗಿ ಹಾಕಿದ ಪಟ್ಟಿಗಳಿಗೆ ಎರಡು ಬದಿಯಲ್ಲಿ ಬಳ್ಳಿಗಳನ್ನು ಕಟ್ಟಿದ ಬಾಟಲಿಗಳನ್ನು ತೂಗು ಹಾಕಲಾಗಿದೆ. ನೀರು ತುಂಬದಂತೆ ಬಾಟಲಿಗಳ ಅಡಿ ಭಾಗದಲ್ಲಿ ಸಣ್ಣ ರಂಧ್ರ ಮಾಡಲಾಗಿದೆ. ಹರಿವೆ ಸೊಪ್ಪು, ಮೆಂತೆ, ಸಬ್ಬಸಗಿ, ಕೊತ್ತಂಬರಿ, ಪಾಲಕ್‌, ಈರುಳ್ಳಿ ಸೇರಿದಂತೆ ಹದಿನೈದಕ್ಕೂ ಅಧಿಕ ಸೊಪ್ಪಿನ ಬೀಜ ಹಾಕಲಾಗಿದೆ. ಅವುಗಳಲ್ಲಿ ಈಗ ಎಲೆಗಳೂ ಬಂದಿವೆ.

Advertisement

ಒಂದು ಕಡೆ ನಗರದಲ್ಲಿ ಬೇಕಾಬಿಟ್ಟಿ ಬಾಟಲಿಗಳನ್ನು ಎಸೆಯುವವರು ಇದ್ದಾರೆ. ಜತೆಗೆ ಕೃಷಿ ಮಾಡಲು ಜಮೀನಿಲ್ಲ ಎಂದು ಕೊರಗುವವರೂ ಇದ್ದಾರೆ. ಇಂಥವರು ಈ ಕೃಷಿ ಮಾದರಿಯನ್ನು ಮಾಡಲು ಪ್ರಯತ್ನಿಸಬಹುದು.

••••ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next