ಕೆಂಗೇರಿ: ರೈತರು ಬೆಳೆದ ತರಕಾರಿಗಳನ್ನುನೇರವಾಗಿ ಖರೀದಿಸಿ ಕೊರೊನಾಸಂಕಷ್ಟದಲ್ಲಿ ಸಿಲುಕಿ ಪರಿತಪಿಸುತ್ತಿರುವಜನರಿಗೆ ವಿತರಿಸಲಾಗುತ್ತಿದೆ ಎಂದುಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಕೆಂಗೇರಿ ಉಪನಗರದ ಗಣೇಶ ದೇವಾಲಯ ಸಂಕೀರ್ಣದ ಬಿಡಿಎ ಆಟದಮೈದಾನದಲ್ಲಿ ಸುಮಾರು 10 ಸಾವಿರಜನರಿಗೆ ಉಚಿತ ತರಕಾರಿ ವಿತರಿಸುವಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ಬೆಳೆದ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟವಾಗದೆ ಪರದಾಡುತ್ತಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿನಾಗರಿಕರು ಕೆಲಸವಿಲ್ಲದೆ ಸಂಕಷ್ಟವನ್ನುಅನುಭವಿಸುತ್ತಿದ್ದು ನೇರವಾಗಿ ರೈತರಿಂದತರಕಾರಿಗಳನ್ನು ಖರೀದಿಸಿ ಉಚಿತವಾಗಿನೀಡಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯಮಾಡುವ ನಿಟ್ಟಿನಲ್ಲಿ ಸುಮಾರು 50 ಟನ್‌ತರಕಾರಿಯನ್ನು ವಿತರಿಸಲಾಯಿತುಎಂದರು.
ಇದೇ ವೇಳೆ ಕೆಂಗೇರಿ ಸಮುದಾಯಆರೋಗ್ಯ ಕೇಂದ್ರದಲ್ಲಿ ಸಮರ್ಥನಂ ಟ್ರಸ್ಟ್‌ವತಿಯಿಂದ ನೀಡಲಾದ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಆಸ್ಪತ್ರೆಗೆ ಹಸ್ತಾಂತರಿಸಿದರು.ನಂತರ ಸೂಲಿಕೆರೆ ಗ್ರಾಮ ಪಂಚಾಯತಿಯರಾಮಸಂದ್ರ ವೃತ್ತದಲ್ಲಿ ಬಡವರು, ಕೂಲಿಕಾರ್ಮಿಕರಿಗೆ ದಿನಸಿಕಿಟ್ ಹಾಗೂ ತರಕಾರಿ ವಿತರಿಸಿದರು.
ಹೇರೋಹಳ್ಳಿ ವಾಡ್ìನ ಬ್ಯಾಡರಹಳ್ಳಿ ಪೋಲೀಸ್ ಠಾಣೆಯಬಳಿ ಆಟೋ ಚಾಲಕರಿಗೆ ಲಸಿಕೆ ನೀಡುವಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬೆಂಗಳೂರು ದಕ್ಷಿಣ ವಿಭಾಗದವಿಭಾಗಾಧಿಕಾರಿ ಡಾ.ಶಿವಣ್ಣ, ಕೆಂಗೇರಿಸಮುದಾಯ ಆರೋಗ್ಯ ಕೇಂದ್ರದವೈದ್ಯಾಧಿಕಾರಿ ಡಾ.ಗಿರಿಜಾ, ಡಾ.ಶ್ರೀನಿವಾಸ್ ಮೂರ್ತಿ, ಪಾಲಿಕೆ ಸದಸ್ಯರಾದವಿ.ವಿ.ಸತ್ಯನಾರಾಯಣ, ರ.ಆಂಜೀನಪ್ಪ,ಬಿಜೆಪಿ ಮುಖಂಡರಾದ ಎಂ.ಹರೀಶ್‌ಕುಮಾರ್, ಜಿ.ವಿ.ಸುರೇಶ್, ಎನ್.ಸತ್ಯನಾರಾಯಣ, ಟಿ.ಪ್ರಭಾಕರ್, ಆಶೋಕ್,ಮುರಳೀಧರ್ ಇತರರು ಇದ್ದರು