Advertisement

ತರಕಾರಿ ಬೆಳೆ ಖುಷಿಯ ಕಳೆ

10:21 AM Mar 17, 2020 | mahesh |

63 ವರ್ಷ ವಯಸ್ಸಿನ ರೈತ ನಾರಾಯಣರಾವ್‌ ಭಂಗಿ ತರಹೇವಾರಿ ತರಕಾರಿಗಳನ್ನು ಬೆಳೆದು ವರ್ಷಕ್ಕೆ ಸುಮಾರು 5.50 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

Advertisement

“ಮೈ ಬೆವರು ಉಕ್ಕಿದರ ಮನೆ ಮನ ನಕ್ಕೀತ, ತೆನೆ ತೆನೆ ಕೂಡಿ ಹಾಡ್ಯಾವ…’ ಕಷ್ಟಪಟ್ಟು ವ್ಯವಸಾಯ ಮಾಡಿದರೆ ಲಾಭ ಗ್ಯಾರಂಟಿ ಎಂಬರ್ಥವನ್ನು ಹೊಮ್ಮಿಸುತ್ತದೆ ಈ ಸಾಲು. ಅದರ ಮಹತ್ವವನ್ನು ಅರಿತ ರೈತ ಬೀದರ ಜಿಲ್ಲೆಯ ಚಿಟಗುಪ್ಪ ಸಮೀಪ ಉಡಬಾಳ ಗ್ರಾಮದ 63 ವರ್ಷ ವಯಸ್ಸಿನ ರೈತ ನಾರಾಯಣರಾವ್‌ ಭಂಗಿ, ತರಹೇವಾರಿ ತರಕಾರಿಗಳನ್ನು ಬೆಳೆದು ಪ್ರತಿ ವರ್ಷ ನಿರಂತರವಾಗಿ ಸುಮಾರು 5.50 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ನಾರಾಯಣ ರಾವ್‌ ತಮ್ಮ 25ನೇ ವಯಸ್ಸಿನಿಂದ ಸಮಾಜಸೇವೆಯಲ್ಲಿ ತೊಡಗಿದ್ದರು. ಕಳೆದ 5 ವರ್ಷಗಳ ಹಿಂದೆ ಒಂದು ಎಕರೆಯಲ್ಲಿ ತರಕಾರಿ ಬೆಳೆಯಲು ಪ್ರಾರಂಭಿಸಿದರು. ಮೊದಲನೇ ವರ್ಷ ಎರಡು ಬೆಳೆಯಿಂದ 8- 10 ಟನ್‌ ಟೊಮ್ಯಾಟೋ ಉತ್ಪಾದಿಸಿ 1.20 ಲಕ್ಷ ರೂ. ಆದಾಯ ಪಡೆದಿದ್ದಾರೆ. ಇದರ ಲಾಭದಿಂದಲೇ ಇನ್ನೂ 6 ಎಕರೆ ಹೊಲ ಖರೀದಿಸಿ ತರಕಾರಿ ಬೆಳೆಯನ್ನು ಈಗ 5 ಎಕರೆಯವರೆಗೆ ವಿಸ್ತರಿಸಿದ್ದಾರೆ.

ಅಧಿಕಾರಿ ಮತ್ತು ರೈತ ವರ್ಗದಿಂದ ಸಹಾಯ
ತರಕಾರಿ ಬೆಳೆಯಲು ಯೋಗ್ಯವಾದಂಥ ಕಪ್ಪು ಭೂಮಿಯಿದೆ. ತೆರೆದ ಬಾವಿಯಿಂದ ನಾಲ್ಕು ದಿನಕ್ಕೊಮ್ಮೆ ಬೆಳೆಗಳಿಗೆ ಹನಿ ನೀರಾವರಿಯಿಂದ ನೀರುಣಿಸುತ್ತಿದ್ದಾರೆೆ. ಬೆಳೆಗಳಿಗೆ ತಿಪ್ಪೆಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಬಳಸುತ್ತಿದ್ದು, ತರಕಾರಿಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗ ರುಜಿನಗಳ ಹತೋಟಿಗಾಗಿ ಸಕಾಲಕ್ಕೆ ಔಷಧಿ ಸಿಂಪಡಿಸುವರು. ಇದಕ್ಕೂ ಮೊದಲು ಕಬ್ಬು, ಜೋಳ, ಕಡಲೆ ಮುಂತಾದವನ್ನು ಮಾತ್ರ ಬೆಳೆಯುತ್ತಿದ್ದರು. ಖರ್ಚು- ಲಾಭ ಅಷ್ಟಕ್ಕಷ್ಟೇ ಆಗುತ್ತಿತ್ತು. ಇದರಿಂದ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸ ಕಷ್ಟಸಾಧ್ಯವಾಗಿತ್ತು. ಹೆಚ್ಚಿನ ಹಣ ಗಳಿಸುವ ದೃಢಸಂಕಲ್ಪ ಮಾಡಿ ತರಕಾರಿ ಬೆಳೆದ ರೈತರ ಹೊಲಗಳಿಗೆ ಭೇಟಿ ಕೊಟ್ಟು ಮಾಹಿತಿ ಪಡೆದರು. ತೋಟಗಾರಿಕೆ ಅಧಿಕಾರಿಗಳು ಮತ್ತು ಪ್ರಗತಿಪರ ರೈತ‌ರಿಂದ ಪ್ರೇರಣೆಯನ್ನೂ ಪಡೆದು ತರಕಾರಿ ಬೆಳೆಯಲು ನಿರ್ಧರಿಸಿದರು.

ಕಲ್ಲಂಗಡಿಯಿಂದ ಗರಿಷ್ಠ ಲಾಭ
ಈಗ ಒಂದು ಎಕರೆಯಲ್ಲಿ ಹೂಕೋಸು ಮತ್ತು ಎಲೆಕೋಸು, ಹೀರೆಕಾಯಿ ಮತ್ತು ತುಪ್ಪದ ಹೀರೆಕಾಯಿ, ಹಾಗಲಕಾಯಿ, ಒಂದೂವರೆ ಎಕರೆಯಲ್ಲಿ ಟೊಮ್ಯಾಟೋ ಮತ್ತು ಅರ್ಧ ಎಕರೆಯಲ್ಲಿ ಬದನೆಕಾಯಿ ಬೆಳೆಯುತ್ತಿದ್ದಾರೆ. ಉಳಿದೆರಡು ಎಕರೆಯಲ್ಲಿ ಕಲ್ಲಂಗಡಿ, ಕಬ್ಬು, ಸೋಯಾ ಮತ್ತು ತೊಗರಿ ಬೆಳೆದಿದ್ದಾರೆ. ಕಳೆದ 5 ವರ್ಷಗಳಿಂದ ವಿವಿಧ ತರಕಾರಿ ಬೆಳೆಗಳಿಂದ ದಿನಕ್ಕೆ 1500- 2000 ರೂ.ಯಂತೆ ವರ್ಷಕ್ಕೆ ಸುಮಾರು 5.50 ಲಕ್ಷ ರೂ. ಗಳವರೆಗೆ ಆದಾಯ ಗಳಿಸುತ್ತಿದ್ದಾರೆ. ವರ್ಷಕ್ಕೆ 2- 3 ಲಕ್ಷ ರೂಪಾಯಿ ಖರ್ಚು ಬರುತ್ತದೆ. ಕಳೆದ ವರ್ಷ ಒಂದು ಎಕರೆಯಲ್ಲಿ ಕಲ್ಲಂಗಡಿಯೊಂದರಿಂದಲೇ 1.65 ಲಕ್ಷ ರೂ. ಗಳಿಸಿದ್ದಾರೆ. ತಾವು ಬೆಳೆದ ತರಕಾರಿಯನ್ನು ಚಿಟಗುಪ್ಪಾ, ಮನ್ನಾಯೆಖೆಳ್ಳಿ, ಕಲಬುರಗಿ ಮತ್ತು ಹೈದ್ರಾಬಾದ್‌ನ ತರಕಾರಿ ಮಾರುಕಟ್ಟೆಗಳಲ್ಲಿ ಮಾರುತ್ತಿದ್ದಾರೆ.

Advertisement

ಮಲಚಿಂಗ್ ಮತ್ತು ಹನಿ ನೀರಾವರಿ
ತೋಟಗಾರಿಕಾ ಇಲಾಖೆಯಿಂದ 2015- 16ರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ 7 ಎಕರೆ ಭೂಮಿಯಲ್ಲಿ ಹನಿ ನೀರಾವರಿ ಮತ್ತು ಮಲಿcಂಗ್‌ ಪದ್ಧತಿ ಅಳವಡಿಸಿಕೊಳ್ಳಲು 90,000 ರೂ. ಸಹಾಯಧನ, 2016- 17ರಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಒಂದು ಹೆಕ್ಟೇರ್‌ ಪಪ್ಪಾಯ ಬೆಳೆಗೆ 86,000 ರೂ. ಮತ್ತು ಯಾಂತ್ರೀಕರಣ ಯೋಜನೆಯಡಿ ಸ್ಪ್ರೆàಯರ್‌ ಯಂತ್ರಕ್ಕಾಗಿ 36,000 ರೂ. ಸಹಾಯಧನ ಪಡೆದಿದ್ದಾರೆ. “ಮಲಚಿಂಗ್ ಮತ್ತು ಹನಿ ನೀರಾವರಿಯಿಂದ ತರಕಾರಿ ಬೆಳೆಗಳ ಖರ್ಚು ಕಡಿಮೆ. ಬಹುಬೆಳೆ ಪದ್ಧತಿಯಿಂದ ಉತ್ಪಾದನೆ ಹೆಚ್ಚು. ಆಕಳು, ಎಮ್ಮೆಗಳಿಂದ ಹೊಲಕ್ಕೆ ಗೊಬ್ಬರ, ಮನೆಗೆ ಹಾಲು ಸಿಗುತ್ತಿದೆ.
ಸಂಪರ್ಕ: 9448584932

– ಜಿ. ಚಂದ್ರಕಾಂತ

Advertisement

Udayavani is now on Telegram. Click here to join our channel and stay updated with the latest news.

Next