ಚಾಮರಾಜನಗರ: ನಗರದ ದೊಡ್ಡ ಅಂಗಡಿ,ಚಿಕ್ಕ ಅಂಗಡಿ ಬೀದಿ, ನಗರಸಭೆ, ಚಾಮರಾಜೇಶ್ವರ ದೇವಾಲಯದ ಸುತ್ತಲಿನ ಪ್ರದೇಶದಲ್ಲಿತರಕಾರಿ ಮಾರಾಟ ಮಾಡುವ ಬೀದಿ ಬದಿವ್ಯಾಪಾರ ಸ್ಥಳವನ್ನು ನಗರದ ಮಾರಿಗುಡಿ ಬೀದಿಹಾಗೂ ಹಳೇ ತರಕಾರಿ ಮಾರುಕಟ್ಟೆಗೆ ಸ್ಥಳಾಂತರಿಸಿರುವ ಸಂಬಂಧ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ ಪರಿಶೀಲಿಸಿದರು.
ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ,ನಗರಸಭೆ ಆಯುಕ್ತ ಕರಿಬಸವಯ್ಯ, ಇತರೆಅಧಿಕಾರಿಗಳೊಂದಿಗೆ ಭಾನುವಾರ ಬೆಳಗ್ಗೆಮಾರಿಗುಡಿ ಬೀದಿ ಹಾಗೂ ಹಳೇ ತರಕಾರಿಮಾರುಕಟ್ಟೆಸೇರಿವಿವಿಧಸ್ಥಳಗಳಿಗೆಜಿಲ್ಲಾಧಿಕಾರಿಭೇಟಿ ನೀಡಿ ಸ್ಥಳಾಂತರ ಸಂಬಂಧ ಕೈಗೊಂಡಿರುವ ಸಿದ್ಧತೆ ವೀಕ್ಷಿಸಿದರು.
ಅಂತರವಿರಲಿ: ತಳ್ಳುಗಾಡಿ ಮೂಲಕ ಹಣ್ಣು,ತರಕಾರಿ ಮಾರಾಟ ಮಾಡುವವರಿಗೆ ಈಗಾಗಲೇ ಗುರುತಿಸಲಾಗಿರುವ ಬೀದಿಯಲ್ಲಿ ಗಾಡಿನಿಲ್ಲಲು ಮಾರ್ಕ್ ಮಾಡಬೇಕು. ಗಾಡಿಗಳನಡುವೆ ಹೆಚ್ಚಿನ ಅಂತರವಿರಬೇಕು. ಗ್ರಾಹಕರುಖರೀದಿದಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಕಷ್ಟು ಸ್ಥಳಾವಕಾಶ ಇರುವಂತೆನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಸೂಚಿಸಿದರು.
ಅಡೆತಡೆ ಇಲ್ಲದಿರಲಿ: ತರಕಾರಿ ಮಾರಾಟ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಆಗಬಾರದು. ಗ್ರಾಹಕರ ವಾಹನ ನಿಲ್ಲಲು ಅಲ್ಲಲ್ಲಿತಾತ್ಕಾಲಿಕವಾಗಿ ಪಾರ್ಕಿಂಗ್ ಸ್ಥಳ ನಿಗದಿ ಮಾಡಿಫಲಕ ಅಳವಡಿಸಬೇಕು. ಎಂದಿನಂತೆ ಇತರೆವಾಹನಗಳ ಸಂಚಾರಕ್ಕೂ ಯಾವುದೇ ಅಡೆತಡೆಇಲ್ಲದೆಓಡಾಟಕ್ಕೆಅವಕಾಶವಾಗುವಂತಿರಬೇಕುಎಂದರು.
ಎಚ್ಚರಿಕೆ ವಹಿಸಿ: ಖರೀದಿ ಸ್ಥಳದಲ್ಲಿ ವ್ಯಾಪಾರಿಗಳು, ವರ್ತಕರು, ಗ್ರಾಹಕರು ಕಡ್ಡಾಯವಾಗಿಮಾಸ್ಕ್ ಧರಿಸಿರಬೇಕು. ಗುಂಪುಗೂಡದೇದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಮೈಕ್‌ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು.ಎಲ್ಲಿಯೂ ಜನದಟ್ಟಣೆ ಆಗಬಾರದು.ಕೋವಿಡ್ ನಿಯಮ ಉಲ್ಲಂಘನೆಯಾಗದಂತೆಎಚ್ಚರಿಕೆ ವಹಿಸಬೇಕು ಎಂದು ಸೂಚನೆನೀಡಿದರು.ಸಂಚಾರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನಂದೀಶ್, ನಗರಸಭೆ ಹಿರಿಯ ಆರೋಗ್ಯನಿರೀಕ್ಷಕ ಶರವಣ ಇತರರು ಇದ್ದರು.