Advertisement

ರೇಡಿಯೋ ಮೈದಾನದಲ್ಲಿ ತರಕಾರಿ ವ್ಯಾಪಾರ

12:56 PM Dec 01, 2019 | Suhan S |

ವಿಜಯಪುರ: ರಸ್ತೆ ಅಗಲೀಕರಣಕ್ಕಾಗಿ ನೆಹರು ಮಾರುಕಟ್ಟೆಯಿಂದ ತೆರವುಗೊಳಿಸಿದ್ದ ಬೀದಿಬದಿ ವ್ಯಾಪಾರಿಗಳಿಗೆ ಶನಿವಾರ ರೇಡಿಯೋ ಮೈದಾನದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಪರಿಣಾಮ ಕಳೆದ ಒಂದುವಾರದಿಂದ ಸಂಪೂರ್ಣ ಸ್ಥಗಿತಗೊಂಡಿದ್ದತರಕಾರಿ-ಹಣ್ಣು ವ್ಯಾಪಾರ ಅರಂಭಗೊಂಡಿದೆ. ನೆಹರು ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮಹಾನಗರ ಪಾಲಿಕೆಯಿಂದ ಬೀದಿ ಬದಿಯಲ್ಲಿ ತರಕಾರಿ-ಹಣ್ಣು ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು. ಇದರಿಂದ ಪ್ರತಿಭಟನೆಗೆ ಇಳಿದಿದ್ದ ಬೀದಿ ವ್ಯಾಪಾರಿಗಳು ನ. 21ರಿಂದ ಸಂಪೂರ್ಣ ವಹಿವಾಟು ಸ್ಥಗಿತೊಳಿಸಿದ್ದರು. ಈ ಹೋರಾಟಕ್ಕೆ ಎಪಿಎಂಸಿ ತರಕಾರಿ-ಹಣ್ಣು ಮಾರುಕಟ್ಟೆಯ ಸಗಟು ವ್ಯಾಪಾರಿಗಳು, ಬಾಗವಾನರು ಕೂಡ ಬೆಂಬಲ ನೀಡಿ ಅವರೂ ವಹಿವಾಟು ನಿಲ್ಲಿಸಿದ್ದರು.

ನಗರದ ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿದ್ದ ವಾರದ ಸಂತೆಯ ತರಕಾರಿ-ಹಣ್ಣು ಮಾರಾಟ ಹೊರತುಪಡಿಸಿ ನಗರದಲ್ಲಿ ಪ್ರಮುಖ ತರಕಾರಿ-ಹಣ್ಣು ವ್ಯಾಪಾರಿ ಕೇಂದ್ರವಾಗಿದ್ದ ನೆಹರು ಮಾರುಕಟ್ಟೆಯಲ್ಲಿವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದ್ದವು.ಇದರಿಂದ ತರಕಾರಿ-ಹಣ್ಣುಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿತ್ತು. ಜಿಲ್ಲಾಡಳಿತದೊಂದಿಗೆ ನಡೆದ ಮಾತುಕತೆ ಬಳಿಕ ತೆರವುಗೊಂಡಿದ್ದ ವ್ಯಾಪಾರಿಗಳಿಗೆ ರೇಡಿಯೋ ಕೇಂದ್ರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ಆರಂಭಗೊಂಡಿತ್ತು.

ಮತ್ತೂಂದೆಡೆ ಬಬಲೇಶ್ವರ ಕಾಂಗ್ರೆಸ್‌ ಶಾಸಕ ಎಂ.ಬಿ. ಪಾಟೀಲ ಎರಡು ದಿನಗಳ ಹಿಂದೆ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ವ್ಯಾಪಾರಿಗಳ ಸಮಸ್ಯೆ ಆಲಿಸಿದ್ದರು. ಅಲ್ಲದೇ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ಭರವಸೆಯನ್ನೂ ನೀಡಿದ್ದರು. ಇದರ ಬೆನ್ನಲ್ಲೇ ರೇಡಿಯೋ ಕೇಂದ್ರದಲ್ಲಿ ತರಕಾರಿ-ಹಣ್ಣು ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಚಿಂತನೆ ಆರಂಭಗೊಳ್ಳುತ್ತಲೇ ಬೀದಿ ಬದಿ ವ್ಯಾಪಾರಿಗಳು ಪರ್ಯಾಯ ಸ್ಥಳದಲ್ಲಿ ತಮ್ಮ ವ್ಯಾಪಾರ ಆರಂಭಿಸಲು ಸಿದ್ದತೆ ಮಾಡಿಕೊಂಡಿದ್ದರು.

ಬೀದಿ ಬದಿ ತರಕಾರಿ ವ್ಯಾಪಾರಸ್ಥರು ಹಾಗೂ ರೈತರ ಹಿತರಕ್ಷಣೆಗಾಗಿ ಹೋರಾಟ ಹಿಂಪಡೆದು, ರೇಡಿಯೋ ಮೈದಾನದಲ್ಲಿ ತರಕಾರಿ ವ್ಯಾಪಾರ-ವಹಿವಾಟು ಆರಂಭಿಸಿದ್ದಾಗಿ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರು ಸಮಾಜಯಿಷಿ ನೀಡಿದರು. ಪರಿಣಾಮ ನೆಹರು ಮಾರುಕಟ್ಟೆಯಿಂದ ಒಕ್ಕಲೆದ್ದಿದ್ದ ತರಕಾರಿ-ಹಣ್ಣು ಮಾರಾಟ ವ್ಯಾಪಾರ ಶನಿವಾರ ಬೆಳಗ್ಗೆಯಿಂದ ಸುಮಾರು 50ಕ್ಕೂ ಹೆಚ್ಚು ವ್ಯಾಪಾರಿಗಳಿಂದ ಮತ್ತೆ ಆರಂಭಗೊಂಡಿತು. ಹೊಸ ಸ್ಥಳದಲ್ಲಿ ತರಕಾರಿ-ಹಣ್ಣು ಮಾರಾಟ ಆರಂಭಗೊಂಡ ಸುದ್ದಿ ತಿಳಿಯುತ್ತಲೇ ಗ್ರಾಹಕರು ಕೂಡ ರೇಡಿಯೋ ಕೇಂದ್ರಕ್ಕೆ ಅಗಮಿಸಿ ಖರೀದಿಯಲ್ಲಿ ತೊಡಗಿದ್ದರು.

Advertisement

ವಿವಿಧ ಬಡಾವಣೆಗಳಲ್ಲಿ ನಡೆಯುವ ವಾರದ ಸಂತೆ ಹೊರತುಪಡಿಸಿ ದೈನಂದಿನ ಸಂತೆ ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಿತ್ತು.ಹೀಗಾಗಿ ಸಹಜವಾಗಿಯೇ ತರಕಾರಿ ದರಗಗನಕ್ಕೇರಿತ್ತು. ಹೀಗಾಗಿ ಗ್ರಾಹಕರಿಗೂ ಸಹ ಬಿಸಿ ತಟ್ಟಿತ್ತು. ಎಪಿಎಂಸಿಯಲ್ಲಿ ವಹಿವಾಟು ಇಲ್ಲದೇ, ಇತ್ತ ತರಕಾರಿ ಮಾರುಕಟ್ಟೆಯೂಇಲ್ಲದೇ ರೈತರು ಸಹ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರೇಡಿಯೋ ಕೇಂದ್ರದಲ್ಲಿ ತರಕಾರಿಮಾರಾಟ ಆರಂಭಗೊಳ್ಳುವ ಜೊತೆಗೆ ನೆಹರುಮಾರುಕಟ್ಟೆಯಲ್ಲಿ ಮಳಿಗೆ ಅಂಗಡಿಗಳಲ್ಲಿ ನಡೆಯುತ್ತಿದ್ದ ತರಕಾರಿ-ಹಣ್ಣು ವ್ಯಾಪಾರವೂ ಆರಂಭಗೊಂಡಿದೆ. ಇದರಿಂದ ನೆಹರುಮಾರುಕಟ್ಟೆಯಲ್ಲೂ ಜನಜಂಗುಳಿ ಆರಂಭಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next