Advertisement

ತರಕಾರಿ ಚಿತ್ರಗಳು

03:24 PM Apr 22, 2017 | |

ಮೆಣಸಿಕಾಯಲ್ಲಿ ಕೊಕ್ಕರೆ, ಕಲ್ಲಂಗಡಿಯಲ್ಲಿ ಸಾಹಿತಿಗಳು, ಸಿನೆಮಾ ತಾರೆಯರು, ರಾಜಕಾರಣಿ ಗಳನ್ನು ನೋಡುವುದೇ ಒಂದು ಚೆಂದ.  ಇನ್ನು ವಿವಿಧ ಕಾಯಿಪಲ್ಲೆಗಳಲ್ಲಿ ಅಡಗಿ ಕುಳಿತುಕೊಳ್ಳುವ ಮೊಸಳೆ, ಮೀನು, ಆನೆ, ಕುಂಬಳಕಾಯಿಯಲ್ಲಿ ಮೂಡುವ ವಿವಿಧ ಪ್ರಾಣಿಗಳು, ಒಂದೇ ಎರಡೇ.. ಥರಹೇವಾರಿ ಚಿತ್ರಗಳು. ಅಚ್ಚರಿ ಎಂದರೆ ಇವುಗಳ ಆಯಸ್ಸು ಮಾತ್ರ ಎರಡು. ಅಬ್ಬಬ್ಟಾ.. ಎಂದರೆ ಮೂರು ದಿನಗಳಷ್ಟೆ. 

Advertisement

ಇದೇನಿದು.. ತರಕಾರಿ ನಾ.. ಅನ್ನಬೇಡಿ. ಇದು ಹುಬ್ಬೇರಿಸುವ ಮಾತಾದರೂ ಸತ್ಯ. ತರಕಾರಿಯಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ವರೈಟಿಯ  ಕರ ಕುಶಲತೆಯ ವೈಯ್ನಾರಗಳು ರೂಪಗೊಂಡು ನಿಲ್ಲುತ್ತವೆ.

ಹಾಗಲಕಾಯಿ ಮೊಸಳೆ ಚಿತ್ರಕ್ಕೆ   ಹೇಳಿ ಮಾಡಿಸಿದಂತಿದೆ. ಹಾಗಲಕಾಯಿ ಮೇಲೆ ಮುಳ್ಳಿನ ರೀತಿ ಇರುವುದರಿಂದ ಮೊಸಳೆ ನಿರ್ಮಾಣ ಮಾಡಲು ಅನುಕೂಲ. ಉದ್ದ  ಮತ್ತು  ಗುಂಡನೆ  ಬದನೆಕಾಯಿಯಿಂದ ಬಾತುಕೋಳಿ, ಗರುಡ, ಆನೆ ಸೇರಿದಂತೆ ಇತರೆ ಪಕ್ಷಿಗಳನ್ನು ಮಾಡಬಹುದು. ಅವುಗಳ ರೆಕ್ಕೆ ಮಾಡಲು ಬಣ್ಣ ಬಣ್ಣದ ದೊಡ್ಡೆ ಮೆಣಸಿನಕಾಯಿಗಳನ್ನು ಬಳಕೆ ಮಾಡುತ್ತವೆ.  ಕಲ್ಲಂಗಡಿಯಲ್ಲಂತೂ ನೂರಾರು ರೀತಿಯ ಚಿತ್ರಗಳನ್ನು ಕೊರೆಯಬಹುದು. ಏಕೆಂದರೆ ಒಳಭಾಗದಲ್ಲಿ ಕೆಂಪು ಬರುವುದರಿಂದ ಪ್ರಮುಖವಾಗಿ ಎಲ್ಲಾ ಬಗೆಯ ಹೂವುಗಳು, ಸಾಹಿತಿಗಳ ಚಿತ್ರಗಳು ಹಾಗೂ ಮೆಣಸಿನಕಾಯಿಯಿಂದ ಪಕ್ಷಿಗಳ ಮೂಗು ಮಾಡಬಹುದು. ಎಲೆ ಕೋಸು, ಗಡ್ಡೆ ಕೋಸು 

ಇವೆಲ್ಲವುಗಳನ್ನುಬಳಸಿ
ಕೊಳ್ಳುತ್ತಾರೆ.    ಪ್ರಮುಖವಾಗಿ ಕ್ವಿಂಟಾಲ್‌ಗ‌ಟ್ಟಲೇ ಕುಂಬಳ ಹಾಗೂ ಕಲ್ಲಂಗಡಿಯನ್ನು ಬಳಕೆ ಮಾಡಲಾಗುವುದು. ನೂರಕ್ಕೆ ಶೇ. 70 ರಷ್ಟು ಕಲಾಕೃತಿಗಳು ರೂಪಗೊಳ್ಳುತ್ತವೆ. ಯಾವ ಪ್ರಾಣಿ, ಪಕ್ಷಿ, ಮತ್ತು ಮನುಷ್ಯರ ಚಿತ್ರಗಳು ಯಾವ ತರಕಾರಿಯಲ್ಲಿ ಮೂಡುತ್ತವೆ ಎನ್ನುವುದು ನಮಗೆ ಗೊತ್ತಿರುವುದರಿಂದ ಅಂತಹ ತರಕಾರಿಗಳನ್ನೇ ಹೆಚ್ಚಾಗಿ ಖರೀದಿಸಲು ಇಷ್ಟ ಪಡುತ್ತೇವೆ. ಇಂತಿಂಥದಕ್ಕೆ  ಈ ತರಕಾರಿ ಎಂದು ನಾವು ಮೊದಲೇ ನಿಗದಿ ಮಾಡಿರುತ್ತೇವೆ.  ಡೆಕೋರೇಷನ್‌ಸಲುವಾಗಿ ಪಾಲಕ್‌, ಕೊತ್ತಂಬರಿ, ಪುದಿನಾ ಎಲೆಗಳನ್ನು ಬಳಸುತ್ತೇವೆ. ಕೆಲವೊಮ್ಮೆ ಸಮಯ ಹೆಚ್ಚಿದ್ದರೆ ಬಾಳೆ ಹಣ್ಣಿನಲ್ಲಿ ಸಣ್ಣ ಪಕ್ಷಿಗಳನ್ನೂ ನಿರ್ಮಾಣ ಮಾಡ್ತಿವಿ ಎನ್ನುತ್ತಾರೆ ಹರೀಶ ಬ್ರಹ್ಮಾವರ.

Advertisement

ಅದರಲ್ಲೂ ನಮ್ಮ ಉತ್ತರ ಕರ್ನಾಟಕದ ಬಿಸಿಲಿಗೆ ಒಂದೇ ದಿನಕ್ಕೆ ಇವುಗಳ ಆಯಸ್ಸು ಮುಗಿಯುತ್ತೆ.  ಮಾರಿ ಬಾಡಿಸಿಕೊಂಡು ಜೋತು ಬೀಳುತ್ತವೆ. ಆದರೆ, ಮೊದಲ ದಿನದ ಅವುಗಳ ವೈಯ್ನಾರವನ್ನು ಕಣ್ಣಾರೆ.. ಮನಸಾರೆ.. ಸವಿದವನೇ ಬಲ್ಲ.. ಕಲಾವಿದ ಕಲ್ಪನೆಯ ಕೈಚಳಕ.. 

ಉಡುಪಿ ಮೂಲದ ಹರೀಶ ಬ್ರಹ್ಮಾವರ ಒಂದು ತಂಡವನ್ನು ಕಟ್ಟಿಕೊಂಡು ರಾಜ್ಯದೆಲ್ಲಡೆಗಳಲ್ಲಿ ಇಂತಹ ತರಕಾರಿ ಚಿತ್ರಕಲೆಯ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಅವರೊಂದಿಗೆ 8 ಜನರ ತಂಡವಿದೆ. ತಂಡಕ್ಕೆ ತುಂಬಾ ಖುಷಿಯಿಂದ ಕ್ಯಾಟೈಸ್‌ ಗ್ರೂಪ್‌ ಅಂತಾ ಹೆಸರಿಟ್ಟಿದ್ದಾರೆ. ಒಬ್ಬಬ್ಬರೋ.. ಕೈಯಲ್ಲಿ ಚಾಕು ಹಿಡಿದರೆಂದರೆ ಹತ್ತೇ ನಿಮಿಷದಲ್ಲಿ ಒಂದು ಪ್ರಾಣಿ, ಪಕ್ಷಿ, ಸಾಹಿತಿಗಳ ಕಲಾಕೃತಿ ಮೂಡಿ ನಿಲ್ಲುತ್ತದೆ.

ಹೋಟೆಲ್‌  ಮ್ಯಾನೇಜಮೆಂಟ್‌ನ ಭಾಗವಾಗಿ ಈ ಕಲೆಯನ್ನು ಕಲಿತಿದ್ದ ಹರೀಶ, ಅದನ್ನೇ ಉದ್ಯಮವನ್ನಾಗಿ ಮಾಡಿಕೊಂಡೆವು. ಅದರಿಂದಲೇ.. ಅನ್ನವನ್ನು ಸಂಪಾದಿಸಬೇಕು ಎನ್ನುವ ಉಮೇದಿಯಿಂದ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಕಬ್ಬನ್‌ಪಾರ್ಕಿನಲ್ಲಿ ಇಂತಹದೊಂದು ಸಾಹಸವನ್ನು ಮಾಡಿದರು. ಒಂದು ಕ್ವಿಂಟಾಲ್‌ ತರಕಾರಿಯಲ್ಲಿ ವಿವಿಧ ಕಲಾಕೃತಿಗಳನ್ನು ಮಾಡಿದರು. ಜನರಿಂದ, ತೋಟಗಾರಿಕೆ ಇಲಾಖೆಯಿಂದ ದೊರೆತ ಪ್ರೋತ್ಸಾಹ, ಭೇಷ್‌ ಎನ್ನುವ ಮಾತೇ ನಮಗೆ ದಾರಿಯಾಯಿತು ಎನ್ನುವ ಹರೀಶ, ಜನರು ನೋಡಿ ವ್ಯಕ್ತ ಪಡಿಸುವ ಖುಷಿಯಲ್ಲಿ ನಮ್ಮ ಶ್ರಮಕ್ಕೆ ಬೆಲೆ ಸಿಗುತ್ತಿದೆ ಎನ್ನುತ್ತಾರೆ.

ತಂಡದಲ್ಲಿ ನವೀನ್‌, ರಾಜೇಶ, ಮಹೇಶ, ಮಂಜುನಾಥ ಹಾಗೂ ಕೃಷ್ಣ ಇದ್ದಾರೆ. ಈಗಾಗಲೇ ಉಡುಪಿ, ಕಾರವಾರ, ರಾಯಚೂರು, ಬೆಂಗಳೂರು, ಕಲಬುರಗಿ, ಧಾರವಾಡ, ಮಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನಾವು ಹಲವಾರು ಪ್ರದರ್ಶನಗಳಲ್ಲಿ ತರಕಾರಿ ಕಲಾಕೃತಿಗಳನ್ನು ಸಿದ್ಧ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ.  ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ನಾವು ಪ್ರದರ್ಶನಗಳನ್ನು ನೀಡಿದ್ದೇವೆ ಎಂಬುದು ಅವರ ಮಾತು. 

ಸಾಧಾರಣವಾಗಿ ನಮಗೆ ಸಿಹಿ ಕುಂಬಳ, ಕಲ್ಲಂಗಡಿ ಅಚ್ಚುಮೆಚ್ಚು. ಹೆಚ್ಚಿನ ಕಲಾಕೃತಿಗಳು ಈ ಎರಡು ಕಾಯಿಗಳಲ್ಲಿ ಮೂಡುತ್ತವೆ. ಹಾಗಲಕಾಯಿ, ಮೆಣಸಿನಕಾಯಿ, ಗಜ್ಜರಿ, ಸೌತೇಕಾಯಿ, ಟೊಮೆಟೊ, ಬದನೆಕಾಯಿ ಜೊತೆಗಿರುತ್ತದೆ. 

ನಮ್ಮ ಓಡಾಟ ಹಾಗೂ ಶ್ರಮಕ್ಕೆ ತಕ್ಕ ಪ್ರತಿಫಲವೇನೋ ಸಿಗುತ್ತಿದೆ. ಆದರೆ, ಇದು ಎಷ್ಟು ದಿನ ನಡೆಯುತ್ತದೆ ನೋಡಬೇಕು ಎನ್ನುತ್ತಾರೆ ಹರೀಶ್‌.

ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next