Advertisement

ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲಕ್ಕೆ ಡಾ|ಡಿ.ವೀರೇಂದ್ರ ಹೆಗ್ಗಡೆ ಭೇಟಿ

08:48 PM Feb 15, 2022 | Team Udayavani |

ತೆಕ್ಕಟ್ಟೆ : ಕುಂಭಾಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇಗುಲಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಫೆ.15 ರಂದು ಭೇಟಿ ನೀಡಿ, ಶ್ರೀದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪೂಜ್ಯ ಖಾವಂದಿರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇಗುಲಕ್ಕೆ ಭರಮಾಡಿಕೊಂಡರು.

Advertisement

ಇದೇ ಸಂದರ್ಭದಲ್ಲಿ ಧರ್ಮದರ್ಶಿ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರನ್ನು ದೇವಳದ ಧರ್ಮದರ್ಶಿ ದೇವರಾಯ ಎಂ.ಶೇರೆಗಾರ್‌ ಹಾಗೂ ಅನಿತಾ ಶೇರೆಗಾರ್‌ ದಂಪತಿಗಳು ದೇವಳದ ವತಿಯಿಂದ ಸಮ್ಮಾನಿಸಿದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಬದಲಾದ ಆಧುನಿಕತೆಯಲ್ಲಿ ನಗರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗುವುದು ಸಹಜ ಆದರೆ ಇಂತಹ ನೂರಾರು ವರ್ಷಗಳಿಗೊಮ್ಮೆ ನಿರ್ಮಾಣವಾಗುವ ಸುಂದರ ದೇಗುಲಗಳ ನಿರ್ಮಾಣ ಹಾಗೂ ಕ್ಷೇತ್ರಗಳಿಗೆ ಹಣ ಹಾಕಲು ಬಹಳ ಜನ ಹಿಂಜರಿಯುತ್ತಾರೆ. ಆದರೆ ದೇವಳಕ್ಕೆ ವಿನಿಯೋಗಿಸಿದ ಸಂಪತ್ತು ಶಾಶ್ವತವಾಗಿರುತ್ತದೆ. ಈ ನಿಟ್ಟಿನಲ್ಲಿ ದೇವಳದಲ್ಲಿ ಶಿಸ್ತು, ನಿಯಮ, ವ್ಯವಸ್ಥೆಗಳಿದ್ದಾಗ ಮಾತ್ರ ಅಲ್ಲಿ ಸಾನಿಧ್ಯವಿರುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ದೇವಳದ ಅರ್ಚಕ ನಾಗರಾಜ್‌ ಭಟ್‌, ಉದ್ಯಮಿ ಚಂದ್ರಶೇಖರ್‌ ಕಲ್ಪತರು, ನಾಗರಾಜ್‌ ಕಾಮಧೇನು, ಉದ್ಯಮಿ ಸುರೇಶ್‌ ಬೆಟ್ಟಿನ್‌, ವಾಸ್ತುತಜ್ಞ ಬಸವರಾಜ್‌ ಶೆಟ್ಟಿಗಾರ್‌, ಶಿಲ್ಪಿಗಳಾದ ಸತೀಶ್‌ ಆಚಾರ್ಯ ಕಾರ್ಕಳ, ಕಾಷ್ಠ ಶಿಲ್ಪಿ ಶ್ರೀಪತಿ ಆಚಾರ್ಯ , ಗೋಪುರದ ಶಿಲ್ಪಿ ಪ್ರಭಾಕರ, ಹಿರಿಯ ಪತ್ರಕರ್ತ ಯು.ಎಸ್‌.ಶೆಣೈ , ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್‌ ,ಜಿಲ್ಲೆಯ ಹಿರಿಯ ನಿರ್ದೇಶಕ‌ ಗಣೇಶ್‌ ಬಿ ,ಪೂಜ್ಯರ ಆಪ್ತರಾದ ಮಹಾವೀರ ಅಜ್ರಿ ಮತ್ತು ವೀರು ಶೆಟ್ಟಿ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ತಾಲೂಕಿನ ಹಿರಿಯ ಯೋಜನಾಧಿಕಾರಿ ಮುರಳೀದರ್‌ ಶೆಟ್ಟಿ , ಸುಧಾಕರ ಶೆಟ್ಟಿ ತೆಕ್ಕಟ್ಟೆ , ದೇವಳದ ಆಡಳಿತ ಮಂಡಳಿಯ ಸದಸ್ಯರು ಮತ್ತು ತಾಲೂಕಿನ ಜನಜಾಗೃತಿ ವೇದಿಕೆ ಸದಸ್ಯರಾದ ಸುಧಾಕರ ಶೆಟ್ಟಿ ಮತ್ತು ತೆಕ್ಕಟ್ಟೆ ವಲಯದ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.


ದೇವಳದ ವ್ಯವಸ್ಥಾಪಕ ರಾಜಶೇಖರ್‌ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವನೆಗೈದು, ಗಂಗಾಧರ್‌ ಹೊಸ್ಮನೆ ಸಹಕರಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next