Advertisement
ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ರವಿವಾರ ಹಮ್ಮಿಕೊಂಡ 51ನೇ ವರ್ಷದ ಪುರಾಣಕಾವ್ಯ ವಾಚನ – ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾರಾಯಣ ಆಸ್ರಣ್ಣರು ಮಾತನಾಡಿ, ಲೋಕದ ಹಿತವೇ ಶ್ರದ್ಧಾ- ಭಕ್ತಿಯಿಂದ ಧರ್ಮದ ಮರ್ಮವನ್ನರಿತು, ಸಾತ್ವಿಕ ರಾಗಿ, ಸಭ್ಯ – ಸುಸಂಸ್ಕೃತ ನಾಗರಿಕರಾಗಿ ಬಾಳಬೇಕೆಂಬುದು. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ನಿತ್ಯವೂ ಅಷ್ಟಾವಧಾನ ನಡೆಸುವ ಸಂಪ್ರದಾಯವಿದೆ. ಮುಂದುವರಿದ ಭಾಗವಾಗಿ ಮುಂದೆ ಎಲ್ಲ ತೀರ್ಥ ಕ್ಷೇತ್ರಗಳಲ್ಲಿಯೂ ಪುರಾಣ ವಾಚನ – ಪ್ರವಚನ ನಡೆಯಬೇಕು ಎಂದು ಆಶಿಸಿದರು.
Related Articles
Advertisement
ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣರು ಮತ್ತು ನಿವೃತ್ತ ಕಲಾವಿದ ಕೆ.ಗೋವಿಂದ ಭಟ್ ಅವರನ್ನು ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಸಮ್ಮಾನಿಸಿದರು. ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ವಂದಿಸಿದರು.
ಸೆ. 17ರ ವರೆಗೆ ವಾಚನ – ಪ್ರವಚನಪ್ರತಿಯೊಬ್ಬರಿಗೂ ಜ್ಞಾನದಾಹವಿರಬೇಕು. ಧರ್ಮಸ್ಥಳದಲ್ಲಿ ಭಕ್ತರ ಜ್ಞಾನದಾಹ ನಿವಾರಣೆಗಾಗಿ ವಸ್ತು ಸಂಗ್ರಹಾಲಯ, ಕಾರು ಮ್ಯೂಸಿಯಂ, ಉದ್ಯಾನವನ, ತಾಳೆಗರಿ ಸಂಗ್ರಹ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಸೆ. 17ರ ವರೆಗೆ ಪ್ರತಿದಿನ ಸಂಜೆ 6.30ರಿಂದ 8ರ ವರೆಗೆ ಧರ್ಮಸ್ಥಳದಲ್ಲಿ ಪುರಾಣಕಾವ್ಯ ವಾಚನ – ಪ್ರವಚನ ನಡೆಯುತ್ತದೆ ಎಂದು ಡಾ|ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.