Advertisement

Emmy Award: ವೀರ್‌ದಾಸ್‌ ಮುಡಿಗೆ ಎಮ್ಮಿ ಪ್ರಶಸ್ತಿಯ ಗರಿ

09:06 PM Nov 21, 2023 | Team Udayavani |

ನವದೆಹಲಿ: ಖ್ಯಾತ ಹಾಸ್ಯ ಕಲಾವಿದ ವೀರ್‌ ದಾಸ್‌ ಅವರ ನೆಟ್‌ಫ್ಲಿಕ್ಸ್‌ ಕಾಮಿಡಿ ಶೋ ” ವೀರ್‌ದಾಸ್‌: ಲ್ಯಾಂಡಿಂಗ್‌’ಗೆ ಅತ್ಯುತ್ತಮ ಸ್ಟಾಂಡ್‌ಅಪ್‌ ಕಾಮಿಡಿ ವಿಭಾಗದಲ್ಲಿ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಲಭಿಸಿದ್ದು, ಈ ಮೂಲಕ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯನೆಂಬ ಖ್ಯಾತಿಗೆ ದಾಸ್‌ ಪಾತ್ರರಾಗಿದ್ದಾರೆ. ಅಲ್ಲದೇ ತಮ್ಮ ಚೊಚ್ಚಲ ಎಮ್ಮಿ ಪ್ರಶಸ್ತಿಯನ್ನು ತಾಯಿನೆಲವಾದ ಭಾರತಕ್ಕೆ ಸಮರ್ಪಿಸಿದ್ದಾರೆ.

Advertisement

51ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಸಮಾರಂಭವನ್ನು ನ್ಯೂಯಾರ್ಕ್‌ ನಗರದ ಹಿಲ್ಟನ್‌ ಮಿಡ್‌ಟೌನ್‌ನಲ್ಲಿ ಆಯೋಜಿಸಲಾಗಿತ್ತು. ದಾಸ್‌ ಅವರಿಗೆ ಇದು 2ನೇ ನಾಮನಿರ್ದೇಶನ ಮತ್ತು ಮೊದಲ ಗೆಲುವಾಗಿದ್ದು, ಈ ಗೆಲುವು ನನ್ನ ತಂಡಕ್ಕೆ, ನೆಟ್‌ಫ್ಲಿಕ್ಸ್‌ಗೆ ಮತ್ತು ನನ್ನ ಮಾತೃಭೂಮಿಗೆ ಸಮರ್ಪಿತವೆಂದು ದಾಸ್‌ ಹೇಳಿಕೊಂಡಿದ್ದಾರೆ. 2021ರಲ್ಲಿ “ವೀರ್‌ದಾಸ್‌ ಫಾರ್‌ ಇಂಡಿಯಾ’ ಎನ್ನುವ ಸ್ಟಾಂಡ್‌ಅಪ್‌ ಸ್ಪೆಷಲ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next