Advertisement
ಜಿಲ್ಲೆಯ ಮಠಾಧೀಶರ ಒಕ್ಕೂಟದ ಸುದ್ದಿಗೋಷ್ಠಿಯಲ್ಲಿ ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಈ ಕುರಿತು ಮಾಹಿತಿ ನೀಡಿದರು. “ರಾಜ್ಯದಲ್ಲಿ ವೀರಶೈವರಿದ್ದಾರೆ ಎಂದು ಸಮಾಜಕ್ಕೆ ತೋರಿಸಲು ಜಾಥಾ ನಡೆಸಲಾಗುತ್ತಿದೆ. ಇದು ಶಕ್ತಿ ಪ್ರದರ್ಶನ ಅಲ್ಲ, ಸಾಮರಸ್ಯ ಪ್ರದರ್ಶನ. ವೀರಶೈವ ಹಾಗೂ ಲಿಂಗಾಯತ ಒಂದೇ ಆಗಿದ್ದು, ಇದರಲ್ಲಿ ಗೊಂದಲ ಬೇಡ. ಸ್ವಾರ್ಥ ಸಾಧನೆಗಾಗಿ ಸಮಾಜ ಒಡೆಯುವ ಕೆಲಸ ಬಿಡಬೇಕು’ ಎಂದರು.
Related Articles
ಅನಿವಾರ್ಯ. ಈ ಸಂಬಂಧ ಕಲಬುರಗಿ, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ಸಮಾವೇಶ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Advertisement
ಹೋರಾಟದ ನೇತೃತ್ವಕ್ಕೆ ತೋಂಟದ ಶ್ರೀಗೆ ಮನವಿಬೀದರ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟದ ನೇತೃತ್ವ ವಹಿಸಿಕೊಳ್ಳುವಂತೆ ಗದಗ ತೋಂಟದಾರ್ಯ ಮಠದ ಡಾ|ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಜಿಲ್ಲಾ ಸ್ವತಂತ್ರ ಧರ್ಮ ಸಮನ್ವಯ ಸಮಿತಿ ಕೋರಿದೆ. ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರ ನೇತೃತ್ವದ ಪ್ರಮುಖ ನಿಯೋಗ ಕಲಬುರಗಿ ಜಿಲ್ಲೆಯ ಅಫ್ಜಲಪುರದಲ್ಲಿ ಗದಗ ಶ್ರೀಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಜು.19ರಂದು ಬೀದರ್‌ನಲ್ಲಿ ನಡೆದ ಮಹಾ ರ್ಯಾಲಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು, ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಡೆಯಲಿರುವ ಮುಂದಿನ ಹೋರಾಟಗಳ ನೇತೃತ್ವವನ್ನು ತಾವೇ ವಹಿಸಿಕೊಳ್ಳಬೇಕು ಎಂದು ನಿಯೋಗ ಶ್ರೀಗಳಲ್ಲಿ ಮನವಿ ಮಾಡಿದೆ. ನಿಯೋಗದ ಆಮಂತ್ರಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶ್ರೀಗಳು, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ
ಮಾನ್ಯತೆಗೆ ಇದೀಗ ಕಾಲ ಕೂಡಿ ಬಂದಿದೆ. ಶೀಘ್ರ ಸಿಎಂ ಬಳಿ ಪ್ರಮುಖರ ನಿಯೋಗ ತೆರಳುವ ಆಶ್ವಾಸನೆ ನೀಡಿದರು ಎಂದು ಸಮಿತಿ ತಿಳಿಸಿದೆ. ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ: ಚಂಪಾ
ಮೈಸೂರು: “ಲಿಂಗಾಯತ ಧರ್ಮ ಬಂಡಾಯ ಧರ್ಮವಾಗಿದ್ದು, ಅವರಿಗೆ ಪ್ರತ್ಯೇಕ ಧರ್ಮ ಬೇಕಿದೆ. ಆದರೆ, ವೀರಶೈವರು ತಾವು ಹಿಂದೂಗಳೆಂದ ಮೇಲೆ ಅವರಿಗೆ ಪ್ರತ್ಯೇಕ ಧರ್ಮದ ಅವಶ್ಯಕತೆಯಿಲ್ಲ’ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಭಾನುವಾರ ಮಾತನಾಡಿ, ಲಿಂಗಾಯತ ಧರ್ಮ ಸ್ಥಾಪನೆ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹುಟ್ಟಿದ್ದಲ್ಲ. ಹಲವು ವರ್ಷಗಳ ಹಿಂದೆ ಹಿಂದೂ ಧರ್ಮದಲ್ಲಿನ ಲೋಪಗಳನ್ನು ತಿದ್ದಿದ ಬಸವಣ್ಣ ಲಿಂಗಾಯತ ಧರ್ಮದ ಜನಕರಾಗಿದ್ದಾರೆ. ಆದರೆ, ವೀರಶೈವರು ಹಿಂದೂಗಳೆನ್ನುವುದರಿಂದ ಅವರು ಮಾತೃ ಧರ್ಮದಲ್ಲೇ ಇರಬೇಕಿದೆ. ಇದರಿಂದ ಯಾವುದೇ ಸ್ಥಾನ, ಮಾನ ಹೋಗುವುದಿಲ್ಲ. ಆದರೆ, ಬಂಡಾಯ ಧರ್ಮವಾಗಿರುವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ವೀರಶೈವ-ಲಿಂಗಾಯತ ಬೇರೆ- ಬೇರೆಯಲ್ಲ, ಒಂದೇ ನಾಣ್ಯದ ಎರಡು ಮುಖಗಳು. ವೀರಶೈವ ಹಾಗೂ ಲಿಂಗಾಯತ ಎಂಬುದು ಪರ್ಯಾಯ ಪದಗಳಾಗಿವೆ. ಸೌಲಭ್ಯ ದೊರೆಯುತ್ತದೆ ಎನ್ನುವ ನಿಟ್ಟಿನಲ್ಲಿ ಧರ್ಮ ಬೇರ್ಪಡೆ ಆಗುವುದು ಬೇಡ. ವೀರಶೈವ-ಲಿಂಗಾಯತ ವ್ಯಕ್ತಿ ಆಧಾರಿತ ಧರ್ಮವಲ್ಲ.
– ಡಾ| ಶರಣಬಸವಪ್ಪ ಅಪ್ಪ,ಶರಣಬಸವೇಶ್ವರ ಮಹಾದಾಸೋಹಿ
ಸಂಸ್ಥಾನದ ಎಂಟನೇ ಪೀಠಾಧಿಪತಿ ನೂರಾರು ವರ್ಷಗಳಿಂದ ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಂಡು ಬಂದ ವೀರಶೈವ ಲಿಂಗಾಯತ ಸಮಾಜದಲ್ಲಿ ಕೆಲವರು ಪ್ರತ್ಯೇಕ ಧರ್ಮ ಕುರಿತು ರಾಜಕೀಯ ಹುಳಿ ಹಿಂಡಲು ಹೊರಟಿದ್ದಾರೆ.
– ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ತೊಸನನಳ್ಳಿ(ಎಸ್)ನ ಸಂಗಮೇಶ್ವರ ಸಂಸ್ಥಾನಮಠದ ಪೀಠಾಧಿ ಪತಿ ಪಂಚಪೀಠಗಳಲ್ಲಿ ಕೂಡ ಕೆಲವು ನ್ಯೂನತೆಗಳಿರುವುದು ನಿಜ. ಹಾಗಂತ ವೀರಶೈವವು ಶೈವ ಧರ್ಮದ ಶಾಖೆಯಲ್ಲ. ಬಸವಣ್ಣನನ್ನು ಮಹಾ ಮಾನವ ತಾವಾದಿಯನ್ನಾಗಿಸಿದ್ದೇ ವೀರಶೈವರು. ಬಸವಣ್ಣನನ್ನು ವೀರಶೈವರು ಗುರುವಾಗಿ ಸ್ವೀಕರಿಸಿಲ್ಲ ಎಂಬ ಕೆಲವರ ವಾದ ಪೂರ್ವಾಗ್ರಹ ಪೀಡಿತವಾದದ್ದು. ಲಿಂಗಾಯತ-ವೀರಶೈವ ಧರ್ಮದ ಬಗ್ಗೆ ಉಂಟಾಗಿರುವ ವಿವಾದ ಕುರಿತು ಚರ್ಚಿಸಲು ಆ.5ರಂದು ಬಾದಾಮಿ ತಾಲೂ ಕಿನ ಶಿವಯೋಗ ಮಂದಿರದಲ್ಲಿ ವೀರಶೈವ ಮಠಾಧಿಧೀಶರ ಸಭೆ ನಡೆಯಲಿದೆ.
– ಡಾ|ಅಭಿನವ ಅನ್ನದಾನ
ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠ ಪ್ರತ್ಯೇಕ ಧರ್ಮಕ್ಕಾಗಿ ವೀರಶೈವರು ಲಿಂಗಾಯತರು ಶತಮಾನದಿಂದ ಬೇಡಿಕೆ ಇಟ್ಟಿದ್ದಾರೆ. ಈಗ ಇದೇ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಇಟ್ಟಿದ್ದು, ಆ ಮನವಿಯನ್ನು ಮುಖ್ಯಮಂತ್ರಿಗಳು
ಸ್ವೀಕರಿಸಿದ್ದಾರೆ.
– ಎಚ್.ಆಂಜನೇಯ
ಸಮಾಜಕಲ್ಯಾಣ ಇಲಾಖೆ ಸಚಿವ ಲಿಂಗಾಯತ-ವೀರಶೈವಧರ್ಮದ ಹೆಸರಿನಲ್ಲಿ ಜಾತಿ ಒಡೆಯುವ ಅಥವಾ ಗೊಂದಲ ಸೃಷ್ಟಿಸುವ ಯಾವ ಕೆಲಸವನ್ನೂ ಕಾಂಗ್ರೆಸ್ ಮಾಡುತ್ತಿಲ್ಲ. ಒಡೆದು ಆಳುವ ನೀತಿ ಕಾಂಗ್ರೆಸ್‌ನಲ್ಲಿಲ್ಲ.
– ಬಿ.ಕೆ.ಹರಿಪ್ರಸಾದ್
ರಾಜ್ಯಸಭಾ ಸದಸ್ಯ