ಚಿಂಚೋಳಿ: ವೀರಶೈವ ಮತ್ತು ಲಿಂಗಾಯತ ಒಂದೇ ಬಳ್ಳಿಯ ಹೂವುಗಳು ಇಲ್ಲವೇ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕಾಶಿ ಜ್ಞಾನಪೀಠ ಸಿಂಹಾಸನಾ ಧೀಶ್ವರ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯರು ನುಡಿದರು. ತಾಲೂಕಿನ ಎಂಪಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರಾವಣ ಮಾಸದ ನಿಮಿತ್ತ ಗುಡ್ಡಾಪುರ ದಾನಮ್ಮದೇವಿ ಪುರಾಣ, ಅಡ್ಡಪಲ್ಲಕ್ಕಿ ಮಹೋತ್ಸವ, ತುಲಾಭಾರ, ಧರ್ಮಸಭೆ ದಿವ್ಯ ಸಾನ್ನಿಧ್ಯ ವಹಿಸಿ ಭಕ್ತರನ್ನುದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು. ಧರ್ಮ ಒಡೆಯುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಹೀಗಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ವಿಶ್ವಗುರು ಬಸವಣ್ಣ ಎಲ್ಲಿಯೂ ಲಿಂಗಾಯತ ಪದ ಪ್ರಯೋಗ ಮಾಡಿಲ್ಲ, ವೀರಶೈವ ಎಂದೇ ಪ್ರಚಾರ ಮಾಡಿದ್ದಾರೆ ಎಂದು ಹೇಳಿದರು. ಧರ್ಮ ಒಡೆದು ಹೊಸ ಧರ್ಮ ಹುಟ್ಟು ಹಾಕಿ ಸರಕಾರದ ಸೌಲಭ್ಯ ಪಡೆದುಕೊಳ್ಳಲು ಯತ್ನಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲಾಗುತ್ತಿದೆ. ಯಾರು ಧರ್ಮ ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಲೋಕ ಕಲ್ಯಾಣಕ್ಕಾಗಿ ತ್ಯಾಗ ಮಾಡಿದ ಪಂಚಪೀಠಗಳು ಎಂದರೆ ಪಂಚ ಪ್ರಾಣ ಇದ್ದ ಹಾಗೆ. ವೀರಶೈವರಲ್ಲಿ 73 ಪ್ರಕಾರಗಳಿವೆ. ಅವುಗಳಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಸರಕಾರ ಶೇ.15ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ತಪೋರತ್ನ ವಿಜಯ ಮಹಾಂತೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಗುರುಲಿಂಗ ಶಿವಾಚಾರ್ಯರು, ಕರುಣೇಶ್ವರ ಸ್ವಾಮೀಜಿ, ತುಮಕುಂಟಾದ ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯರು, ಜೈನಾಪುರದ ರೇಣುಕಾಚಾರ್ಯ ಶಿವಾಚಾರ್ಯರು, ಶಾಸಕ ಡಾ| ಉಮೇಶ ಜಾಧವ್, ಭೀಮಶೆಟ್ಟಿ ಎಂಪಳ್ಳಿ, ಸಿದ್ಧಲಿಂಗಯ್ಯಸ್ವಾಮಿ, ಚಂದ್ರಶೇಖರ ಗುತ್ತೇದಾರ ಗಾರಂಪಳ್ಳಿ, ಸುಶೀಲಾಬಾಯಿ ಕೊರವಿ, ಸಿದ್ದಪ್ಪ ಬೇಡರ, ಪಿಡಿಒ ಪವನ ಮೇತ್ರಿ, ರಾಜೇಂದ್ರ ಗೋಸುಲ್, ನಿವೃತ್ತ ಆರಟಿಒ ಪ್ರಭಾಕರ ದೇಗಲಮಡಿ, ಮಹೇಶ ಗುತ್ತೇದಾರ, ವೀರಭದ್ರ ಮಲಕೂಡ, ಅಕºರ್ ಪಟೇಲ್, ಶರಣಪ್ಪ ತಳವಾರ, ಆರಟಿಒ ಮಂಜುನಾಥ ಕೊರವಿ, ಬಸವರಾಜ ಪಟಪಳ್ಳಿ, ಚೆನ್ನಶೆಟ್ಟಿ ಪಾಟೀಲ ಬಂಡೆಪ್ಪ ತಿಮ್ಮ ಇದ್ದರು. ಶಾಮರಾವ್ ಯಾದವ ಸ್ವಾಗತಿಸಿದರು. ಧರ್ಮವೀರ ಶಿವಶರಣಪ್ಪ ಸರಸಂಬಾ ನಿರೂಪಿಸಿದರು. ನಾಗಭೂಷಣ ವಂದಿಸಿದರು.