Advertisement

ಸಮಾನತೆ, ಶಾಂತಿ ಬಯಸುವುದೇ ವೀರಶೈವ ಧರ್ಮ

02:34 PM Sep 12, 2022 | Team Udayavani |

ಬಂಗಾರಪೇಟೆ: ಸಮಾಜದಲ್ಲಿ ಜಾತಿ, ಮತ, ಧರ್ಮ, ಗಂಡು-ಹೆಣ್ಣು, ಬಡವ-ಶ್ರೀಮಂತ ಎಂಬ ಭೇದ ಭಾವವಿಲ್ಲದೆ ಮಾನವಧರ್ಮಕ್ಕೆ ಜಯವಾಗಲಿ, ವಿಶ್ವ ಸಮುದಾಯ ಶಾಂತಿಯಿಂದ ಜೀವಿಸುವಂತಾಗಲಿ ಎಂದು ಹಾರೈಸುವ ಏಕೈಕ ಧರ್ಮ ವೀರಶೈವ ಎಂದು ಬ್ರಾಹ್ಮಿಶ್ರೀ ತೇಜೇಷಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಯಳಬುರ್ಗಿ ಗ್ರಾಮದಲ್ಲಿ ಗ್ರಾಮೀಣ ವೀರೇಶೈವ ಲಿಂಗಾಯತ ಸಂಘದಿಂದ ನಡೆದ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿ, ಪರಮಶಿವನ ಪ್ರತಿರೂಪವಾಗಿ ಲಿಂಗಾಯುತ ಧರ್ಮ ಭೂಮಂಡಲದಲ್ಲಿ ಸ್ಥಾಪಿತವಾಗಿದೆ ಎಂದರು.

3 ಶತಮಾನಗಳ ಹಿಂದೆ ಸ್ಥಾಪಿತವಾದ ವೀರಶೈವ ಲಿಂಗಾಯತ ಧರ್ಮ ತನ್ನದೆ ಆದ ಇತಿಹಾಸ ಹೊಂ ದಿದೆ. ಭೂಮಂಡಲದಲ್ಲಿ ಕೊಲೆ, ಸುಲಿಗೆ, ದರೋಡೆ, ಅಂಧಕಾರ, ಮೂಢನಂಬಿಕೆ, ಲಿಂಗ ತಾರತಮ್ಯ, ಜಾತಿ ವ್ಯವಸ್ಥೆ, ಹೀಗೆ ಅನಿಷ್ಠ ಪದ್ಧತಿಗಳು ತಾಂಡವಾಡುತ್ತಿವೆ. ಇದರಿಂದ ರೋಸಿ ಹೋಗಿದ್ದ ಭೂದೇವಿ ಸಾಕ್ಷಾತ್‌ ಪರಶಿವನನ್ನು ಜಗತ್ತನ್ನು ರಕ್ಷಿಸುವಂತೆ ಬೇಡಿಕೊಂಡಳು. ಆಗ ಪರಮಶಿವರು ರೇಣುಕಾಧಿ ಪಂಚಾಚರ್ಯರ ರೂಪದಲ್ಲಿ ಜನಿಸಿದರು ಎಂದು ಹೇಳಿದರು.

ಸಾಮರಸ್ಯ ಬದುಕಿಗೆ ನಾಂದಿ: ಇವರಲ್ಲಿ ಮೊದಲನೆ ಯವರು ರೇಣುಕಾಚಾರ್ಯ, ಏಕೋರಾದಯಾಚಾರ್ಯ, ಆಗ್ರಾಚಾರ್ಯ, ಪಂಡಿತಾರಾಧ್ಯರು ಹಾಗೂ ವಿಶ್ವಾರಾಧ್ಯರ ರೂಪದಲ್ಲಿ ಅವತಾರ ಎತ್ತಿ ಅಂಧಕಾರದಲ್ಲಿ ಮುಳುಗಿದ ಮನುಕುಲವನ್ನು ಸನ್ಮಾರ್ಗವೆಂಬ ಬೆಳಕಿನ ಕಡೆಗೆ ಕರೆದುಕೊಂಡು ಬರುವ ಕೆಲಸವನ್ನು ಮಾಡಿ ಸಾಮರಸ್ಯ ಬದುಕಿಗೆ ನಾಂದಿ ಹಾಡಿದರು ಎಂದು ವಿವರಿಸಿದರು.

ಜಾತಿ ಪದ್ಧತಿ ವಿರುದ್ಧ ಹೋರಾಟ: ವೀರಶೈವ ಎಂದರೆ ಲಿಂಗ, ಅಂಗ ಸಾಮರಸ್ಯ ಅಳವಡಿಸಿಕೊಂಡು ಲಿಂಗ ಧಾರಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವವನೇ ವೀರಶೈವ ಲಿಂಗಾಯತ, ಬಸವಣ್ಣನವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಅವರ ಸಹೋದರಿಗೆ ಸಮಾನ ಸ್ಥಾನ ಮಾನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಲಿಂಗ ತಾರತಮ್ಯ, ಅಸ್ಪೃಶ್ಯತೆ ದೂರ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಕ್ರಾಂತಿಯನ್ನೇ ಉಂಟು ಮಾಡಿ, ಜಾತಿ ಪದ್ಧತಿ ವಿರುದ್ಧ ಹೋರಾಡಿದ ಮಹಾನ್‌ ಚೇತನರಾಗಿದ್ದಾರೆ ಎಂದು ಹೇಳಿದರು.

Advertisement

ವಿಶ್ವಕ್ಕೆ ಮಾದರಿಯಾಗಬೇಕು: ಬಸವಣ್ಣರನ್ನು ವಚನ ದಂತೆ ಜಗತ್ತಿನಲ್ಲಿ ಕುಲ ಎಂಬುವುದೇ ಇಲ್ಲ, ಪ್ರತಿ ಯೊಬ್ಬರೂ ನಮ್ಮವರೇ ಆಗಿದ್ದಾರೆ. ಪರಮೇಶ್ವರನನ್ನು ಆರಾಧಿಸುವವರಾಗಿದ್ದಾರೆ. ವೀರಶೈವ ಲಿಂಗಾಯತ ಧರ್ಮವು ಅನೇಕ ಮಠಗಳನ್ನು ಸ್ಥಾಪಿಸಿ ವಿದ್ಯಾದಾನ, ಅನ್ನದಾನ ಮಾಡುವುರೊಂದಿಗೆ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಉದ್ಯೋನ್ಮುಖವಾಗಿ ಪ್ರಜ್ವಲಿಸುತ್ತಿದೆ. ಇಂತಹ ಸಮಾಜದಲ್ಲಿ ಜನಿಸಿದ ನಾವು ಒಗ್ಗಟ್ಟಿನಿಂದ ಇಡೀ ವಿಶ್ವಕ್ಕೆ ಮಾದರಿಯಾಗಬೇಕು ಎಂದು ಆಶೀ ರ್ವಚನ ನೀಡಿದರು.

ಐಕ್ಯಮತದೊಂದಿಗೆ ಒಟ್ಟಾಗಿ ನಿಲ್ಲಿ: ಇತ್ತೀಚಿನ ದಿನಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಲಿಂಗಾಯತ ಧರ್ಮದಲ್ಲಿ ಅನೇಕ ಉಪ ಜಾತಿಗಳನ್ನಾಗಿ ವಿಂಗಡಿಸಿ ಧರ್ಮ ಒಡೆ ಯುವ ಕೆಲಸ ಮಾಡುವುದರೊಂದಿಗೆ ನಮ್ಮಲ್ಲಿಯೇ ದ್ವೇಷ ಮತ್ತು ಅಸೂಯೆ ಹುಟ್ಟಿಸುತ್ತಿದ್ದಾರೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಸಮುದಾಯದ ಯಾರೊ ಬ್ಬರೂ ಧೃತಿಗೆಡದೆ ಐಕ್ಯಮತದೊಂದಿಗೆ ಒಟ್ಟಾಗಿ ನಿಲ್ಲಬೇಕು ಎಂದು ಹೇಳಿದರು.

ಧರ್ಮದ ಉನ್ನತಿಗೆ ಕೊಡುಗೆ: ಪ್ರತಿಯೊಬ್ಬರು ಬಸವಣ್ಣನವರ ಹಾದಿಯಂತೆ ಒಂದೇ ಕುಲ, ಧರ್ಮ, ಜಾತಿ ಎಂಬಂತೆ ಸಾಗೋಣ ಎಂದು ಕರೆ ನೀಡಿದ ಅವರು, ತಾಲೂಕಿನಲ್ಲಿ ವೀರಶೈವ ಲಿಂಗಾಯತ ಸಮು ದಾಯವು ಧರ್ಮದ ಉನ್ನತಿಗಾಗಿ ತನ್ನದೇ ಆದಂತಹ ಕೊಡುಗೆ ನೀಡುತ್ತಿರುವುದು ಪ್ರಶಂಸನೀಯ ಎಂದು ಸ್ವಾಮೀಜಿ ತಿಳಿಸಿದರು. 2021-22ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯ ಕ್ರಮದಲ್ಲಿ ಉಪತಹಶೀಲ್ದಾರ್‌ ಮುಕ್ತಾಂಭಾ, ಎಪಿಎಂಸಿ ಮಾಜಿ ನಿರ್ದೇಶಕ ಜಿ.ಎಸ್‌.ಶಿವಶಂಕರ್‌, ಪುರಸಭೆ ಮಾಜಿ ಸದಸ್ಯ ಶಿವಕುಮಾರ್‌, ಮಾಗೇರಿ ನಟರಾಜ್‌, ರಾಜಶೇಖರ್‌, ತಿಮ್ಮಾಪುರ ನಂಜಪ್ಪ, ಚಂದ್ರಯ್ಯ, ಲೋಕೇಶ್‌ ರಾಜೇಂದ್ರ, ಆನಂದ್‌, ಮಂಜುನಾಥ್‌, ಕಾಂತರಾಜು, ಕಿರಣ್‌, ಬಸವರಾಜು, ಶಿವಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next