Advertisement

ವೀರರಾಣಿ ಅಬ್ಬಕ್ಕ  ಉತ್ಸವದ ಜನಪದ ದಿಬ್ಬಣಕ್ಕೆ  ಚಾಲನೆ 

05:48 AM Mar 03, 2019 | |

ಉಳ್ಳಾಲ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಡೊಳ್ಳು ಬಾರಿಸುವುದರ ಮೂಲಕ 2019ನೇ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ ಜನಪದ ದಿಬ್ಬಣಕ್ಕೆ ಚಾಲನೆ ನೀಡಿದರು. ದಿಬ್ಬಣದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು. ವೀರ ರಾಣಿ ಅಬ್ಬಕ್ಕನ ಟ್ಯಾಬ್ಲೋ, ಚೆಂಡೆ, ಕೊಡೆ, ಕೀಲುಕುದುರೆ, ದಫ್‌, ಕೊರಗರ ಗಜ ಕುಣಿತ, ಹಾಲಕ್ಕಿ ಕುಣಿತ, ವೀರಗಾಸೆ, ಪೂಜಾ ಕುಣಿತ, ಕಂಗೀಲು, ಯಕ್ಷಗಾನ ವೇಷಗಳಿಂದ ಮೆರವಣಿಗೆ ಕಳೆಗಟ್ಟಿತು.

Advertisement

ಚೆನ್ನ ಮರಕಾಲ ದಿಬ್ಬಣ ವಿಶೇಷತೆ
ಉಳ್ಳಾಲ ಮೊಗವೀರಪಟ್ಣದಲ್ಲಿ ನಡೆಯುತ್ತಿರುವ ಅಬ್ಬಕ್ಕ ಉತ್ಸವದ ಹಿನ್ನಲೆ ಯಲ್ಲಿ ಈಬಾರಿ ವಿಶೇಷವಾಗಿ ಉಳ್ಳಾಲ ಮೊಗವೀರರಿಂದ ವೀರರಾಣಿ ಅಬ್ಬಕ್ಕಳ ಸೇನೆಯ ಮುಖ್ಯಸ್ಥರಾಗಿದ್ದ ಚೆನ್ನ ಮರಕಾಲ ಮೆರವಣಿಗೆ ನಡೆಯಿತು. ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆಯ ಬಳಿಕ ಚೆನ್ನ ಮರಕಾಲ ಮೆರವಣಿಗೆ, ಭಜನೆಯ ಮೂಲಕ ಉಳ್ಳಾಲ ಅಬ್ಬಕ್ಕ ಸರ್ಕಲ್‌ವರೆಗೆ ಸಂಚರಿಸಿ ಕಾರ್ಯಕ್ರಮ ಕಡಲ ಕಿನಾರೆಯವರೆಗೆ ಸಾಗಿತು.

Advertisement

Udayavani is now on Telegram. Click here to join our channel and stay updated with the latest news.

Next