Advertisement

ಆಯುರ್ವೇದ ವರ್ಸಸ್‌ ಅಲೋಪತಿ ವಿಜಯ ವೀರ ಹೋರಾಟ

03:21 PM Sep 11, 2020 | Suhan S |

ನಟ ವಿಜಯ್‌ ಸೂರ್ಯ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ಬಿಝಿಯಾಗುತ್ತಿದ್ದಾರೆ. ಸದ್ದಿಲ್ಲದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ವೀರಪುತ್ರ’.

Advertisement

ಹೌದು, ಇದು ವಿಜಯ್‌ ಸೂರ್ಯ ನಟನೆಯ ಹೊಸ ಸಿನಿಮಾ. ಇತ್ತೀಚೆಗೆ ನಡೆದ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಫ‌ಸ್ಟ್‌ಲುಕ್‌ ಹಾಗೂ ಟೀಸರ್‌ ಬಿಡುಗಡೆಯಾಗಿದೆ. ಡಾ.ದೇವರಾಜ್‌ ನಿರ್ದೇಶನದ ಎರಡನೇ ಚಿತ್ರವಿದು. ಈ ಹಿಂದೆ “ಸಪ್ಲಿಮೆಂಟರಿ’ ಚಿತ್ರ ನಿರ್ದೇಶಿಸಿದ್ದ ದೇವರಾಜ್‌ ಈ ಬಾರಿ ಹೊಸ ಕಥೆಯೊಂದಿಗೆ ಬಂದಿದ್ದಾರೆ.

ಆಯುರ್ವೇದ ಮತ್ತು ಅಲೋಪತಿ ಔಷಧಗಳ ನಡುವಿನ ಸಂಘರ್ಷದ ಕಥೆಯನ್ನು “ವೀರಪುತ್ರ’ದಲ್ಲಿ ಹೇಳಲಿದ್ದಾರೆ. ಗುಲ್ಬರ್ಗದಲ್ಲಿ ನಡೆದ ನೈಜಘಟನೆ ಈ ಚಿತ್ರಕ್ಕೆ ಪ್ರೇರಣೆ. ಗುರು ಬಂಡಿ ಈ ಚಿತ್ರದ ನಿರ್ಮಾಪಕರು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ದೇವರಾಜ್‌, ಹಿಂದೆ ಗುಲ್ಬರ್ಗದಲ್ಲಿ ನಡೆದ ಈ ಕಥೆಯನ್ನು ನಿರ್ಮಾಪಕರು ಹೇಳಿ ಇದಕ್ಕೆ ಸ್ಕ್ರಿಪ್ಟ್ ಮಾಡುವಂತೆ ಹೇಳಿದರು. ಒಂದಷ್ಟು ಸಿನಿಮೇಟಿಕ್‌ ಅಂಶಗಳನ್ನು ಸೇರಿಸಿ ಕಥೆ ಮಾಡಿದ್ದೇವೆ. ಕಥೆ ರೆಡಿಯಾದ ನಂತರ ವಿಜಯ್‌ ಸೂರ್ಯ ಅವರಿಗೆ ಹೇಳಿದಾಗ ಕಥೆ ಕೇಳಿ ಅವರೂಖುಷಿಯಾಗಿ ಒಪ್ಪಿಕೊಂಡರು. ಚಿತ್ರದಲ್ಲಿ ಅವರು ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲೋಪತಿ ಔಷಧ ಬಂದ ಮೇಲೆ ಆಯುರ್ವೇದ ಚಿಕಿತ್ಸೆ ಹೇಗೆ ಮರೆಯಾಗುತ್ತಾ ಹೋಯಿತು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ಜೊತೆಗೆ ವೈದ್ಯರನ್ನು ದೇವರು ಅನ್ನುತ್ತೇವೆ. ಆದರೆ ಆತನೇ ತನ್ನ ಕರ್ತವ್ಯಲೋಪ ಎಸಗಿದಾಗ ಏನಾಗಬಹುದು ಎಂಬ ಅಂಶವನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ.

ತಮ್ಮ ಪಾತ್ರದ ಬಗ್ಗೆ ಮಾತನಾಡುವ ವಿಜಯ್‌ ಸೂರ್ಯ, ಚಿತ್ರದಲ್ಲಿನ ನನ್ನ ಪಾತ್ರ ಮೂರು ಶೇಡ್‌ ಗಳಲ್ಲಿದೆ. ನಾನು ಈವರೆಗೆ ಕಾಯುತ್ತಿದ್ದ ಪಾತ್ರ ನನಗೆ ಈ ಚಿತ್ರದಲ್ಲಿ ಸಿಕ್ಕಿದೆ. ಅಗ್ನಿಸಾಕ್ಷಿ ನಂತರ ನನಗೆ ಪಾಸಿಟಿವ್‌ ಫೀಲ್‌ ನೀಡುತ್ತಿರುವ ಚಿತ್ರವಿದು ಸಮಾಜದಲ್ಲಿ ಅನ್ಯಾಯ ನಡೆದಾಗ ಅದರ ವಿರುದ್ಧ ಹೋರಾಡುವ ಪಾತ್ರ ನನ್ನದು ಎಂದರು. ನಿರ್ಮಾಪಕ ಗುರು ಬಂಡಿ, ನಾಯಕ ವಿಜಯ್‌ ಅವರಿಗಾಗಿಯೇ ಈ ಕಥೆ ಮಾಡಿದ್ದೇವೆ. ಈ ಕಥೆಯ ಉದ್ದೇಶ ಚೆನ್ನಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next