Advertisement

ಲೇಡಿಗೋಷನ್‌ ನೂತನ ಕಟ್ಟಡ ಮಾದರಿ ಸಿಎಸ್‌ಆರ್‌ ಯೋಜನೆ: ವೀರಪ್ಪ ಮೊಯ್ಲಿ 

01:24 PM Jul 15, 2018 | |

ಮಂಗಳೂರು: ಎಂಆರ್‌ ಪಿಎಲ್‌ ಒಎನ್‌ಜಿಸಿ ಕಂಪೆನಿಯ ಸಾಮಾಜಿಕ ಹೊಣೆಗಾರಿಕೆ ಕಾರ್ಯ ಕ್ರಮದ (ಸಿಎಸ್‌ಆರ್‌) ಅಡಿಯಲ್ಲಿ ಕೈಗೊಂಡಿರುವ ಲೇಡಿಗೋಷನ್‌ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಯೋಜನೆ, ದೇಶದಲ್ಲೇ ಮಾದರಿ ಸಿಎಸ್‌ಆರ್‌ ಯೋಜನೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಸಂಸತ್‌ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ಹೇಳಿದರು12 ಮಂದಿ ಸಂಸದರು ಇರುವ ಸಮಿತಿ ಹಳೆಯ ಲೇಡಿಗೋಷನ್‌ ಆಸ್ಪತ್ರೆಗೆ ಭೇಟಿ ನೀಡಿ ಶಿಶುಗಳ ಆರೈಕೆ, ತೀವ್ರ ನಿಗಾ ಘಟಕ, ಗರ್ಭಿಣಿ ಯರ ವಿಭಾಗ ಸೇರಿದಂತೆ ನಾನಾ ವಿಭಾಗಗಳಿಗೆ ತೆರಳಿ ಅಲ್ಲಿನ ಮೂಲ ಭೂತ ಸವಲತ್ತುಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. 

Advertisement

ನೂತನ ಕಟ್ಟಡದ ಉದ್ಘಾಟನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಟ್ಟಡದ ಕೆಲವು ಕಾಮಗಾರಿಗಳು ಬಾಕಿ ಇವೆೆ. ಅಲ್ಲದೆ ಸಲಕರಣೆಗಳು ಆಗಬೇಕಾಗಿವೆ. ಮಳೆ ಹಾಗೂ ಜಾಗದ ಸಮಸ್ಯೆ ಕಾರಣ ಹಳೆ ಕಟ್ಟಡದಿಂದ ಕೆಲವು ಗರ್ಭಿಣಿಯರು, ಶಿಶುಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಕಟ್ಟಡದ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳಾದ ಬಳಿಕ ಕೇಂದ್ರ ಪೆಟ್ರೋಲಿಯಂ ಸಚಿವ, ಆರೋಗ್ಯ ಸಚಿವ, ಉಸ್ತುವಾರಿ ಸಚಿವರ ದಿನ ನಿಗದಿ ಮಾಡಿ ಶೀಘ್ರವೇ ಉದ್ಘಾಟನಾ ಸಮಾರಂಭ ಮಾಡಲಿದ್ದೇವೆ ಎಂದರು. ಸಿಬಂದಿ ಕೊರತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಬಂದಿ ಕೊರತೆ ನೀಗಿಸಲು ಸರಕಾರದಿಂದ ಮಾತ್ರ ಅಲ್ಲ ಕೆಎಂಸಿಯಿಂದಲೂ ಸಹಕಾರ ಒದಗಿಸಲಾಗಿದೆೆ. ಈಗಾಗಲೇ ಕೆಎಂಸಿ ಯಿಂದ 100 ಮಂದಿ ಹೆಚ್ಚುವರಿ ವೈದ್ಯರು, 53 ನರ್ಸ್‌, ಭದ್ರತಾ ಸಿಬಂದಿ, ಸ್ವತ್ಛತಾ ಸಿಬಂದಿಗಳನ್ನು ನಿಯೋಜಿಸಲಾ ಗುವುದು ಎಂದು ತಿಳಿಸಿದರು.

ಜಿಎಸ್‌ಟಿ ಬಗ್ಗೆ ಚರ್ಚೆ
ಸಮಿತಿ ಸದಸ್ಯರು ಕೆನರಾ ಛೇಂಬರ್ಸ್‌ ಆಫ್‌ ಕಾಮರ್ಸ್‌ ಅವರೊಂದಿಗೆ ಜಿಎಸ್‌ಟಿ ಬಗ್ಗೆ ಚರ್ಚೆ, ಎಂಆರ್‌ಎ ಸಿಆರ್‌ಎಸ್‌ ಕಾರ್ಯ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸೋಮವಾರ ಆದಾಯ ತೆರಿಗೆ, ಜಿಎಸ್‌ಟಿ ಅಧಿಕಾರಿಗಳೊಂದಿಗೆ ಮಾತುಕತೆ, ಎಸ್‌ಇಝೆಡ್‌, ಹೆದ್ದಾರಿ ಪ್ರಾಧಿಕಾರ ವಿಮರ್ಶೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದೇವೆ ಎಂದರು. ಎಂಆರ್‌ಪಿಎಲ್‌ ಎಂಡಿ ಎಂ. ವೆಂಕಟೇಶ್‌, ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ಸಂಸತ್‌ ಹಣಕಾಸು ಸ್ಥಾಯಿ ಸಮಿತಿ ಸದಸ್ಯರಾದ ನಿಶಿಕಾಂತ್‌ ದುಬೆ, ವೆಂಕಟೇಶ್‌ ಬಾಬು ಟಿ.ಜಿ, ಪಿ.ಸಿ. ಗದ್ದಿ ಗೌಡರ್‌, ಶ್ಯಾಮ್‌ ಚರಣ್‌ ಗುಪ್ತ, ರತನ್‌ ಲಾಲ್‌ ಕಟಾರಿಯಾ, ಚಂದ್ರಕಾಂತ್‌ ಕೈರೇ, ಭಾತ್ರುಹರಿ ಮಹ¤ಬ್‌, ಪ್ರೊ| ಸೌಗತ್‌ ರಾಯ್‌, ಶಿವಕುಮಾರ್‌ ಉದಾಸಿ, ಕುನ್ವಾರ್‌ ಪುಷ್ಪೇಂದ್ರ ಸಿಂಗ್‌ ಚಂಡೆಲ್‌, ಡಾ| ಮಹೇಂದ್ರ ಪ್ರಸಾದ್‌, ಅನಿಲ್‌ ದೇಸಾಯಿ, ಲೇಡಿಗೋಷನ್‌ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ ಉಪಸ್ಥಿತರಿದ್ದರು.

ಎಂಆರ್‌ಪಿಎಲ್‌ ಒಎನ್‌ಜಿಸಿ ಕಂಪೆನಿಯಿಂದ 21.7 ಕೋಟಿ ರೂ. 
ಲೇಡಿಗೋಷನ್‌ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಯೋಜನೆಯ ಪರಿಶೀಲನೆಗೆ ಸದಸ್ಯರು ಅಪೇಕ್ಷೆ ಪಟ್ಟಿದ್ದರಿಂದ ಇಂದು ಭೇಟಿ ನೀಡಿದ್ದೇವೆ. ನೂತನ ಕಟ್ಟಡಕ್ಕೆ ಎಂಆರ್‌ಪಿಎಲ್‌ ಒನ್‌ಎನ್‌ಜಿಸಿ ಕಂಪೆನಿ 21.7 ಕೋಟಿ ರೂ. ನೀಡಿದೆ. ಅದರೊಂದಿಗೆ 1.5 ಕೋಟಿ ರೂ. ಸಲಕರಣೆಯನ್ನು ಸಂಸ್ಥೆ ನೀಡಿದೆ. ಇನ್ನೂ ಐದು ಕೋಟಿ ರೂ. ಸಲಕರಣೆಗಳನ್ನು ನೀಡುವ ಭರವಸೆ ನೀಡಿದ್ದಾರೆ. ಎಂಆರ್‌ಪಿಎಲ್‌ನೊಂದಿಗೆ ಕೆಎಂಸಿ ಆಸ್ಪತ್ರೆ ಹಾಗೂ ಬೇರೆ ಸ್ವಯಂಸೇವಾ ಸಂಸ್ಥೆಗಳು ಈ ಯೋಜನೆಗೆ ಸಹಕಾರ ನೀಡಿದ್ದಾರೆ. ಲೇಡಿಗೋಷನ್‌ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದರಿಂದ ಪಕ್ಕದ 8 ಜಿಲ್ಲೆಗಳ ಜನರಿಗೆ ಉಪಕಾರವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next