Advertisement

Veerappa Moily; “ಒಂದು ದೇಶ, ಒಂದು ಚುನಾವಣೆ’ಯ ಹಿಂದೆ ದುರುದ್ದೇಶ

12:22 AM Apr 22, 2024 | Team Udayavani |

ಮಂಗಳೂರು: “ಒಂದು ದೇಶ, ಒಂದು ಚುನಾವಣೆ’ ತೀರ್ಮಾನದ ಹಿಂದೆ ಪ್ರಧಾನಮಂತ್ರಿ ಮೋದಿಯವರ ದುರುದ್ದೇಶವಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ| ಎಂ. ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದೆ ಲೋಕಸಭೆಯ ಜತೆಗೆ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಮೋದಿಯವರು ತೀರ್ಮಾನಿಸಿದ್ದಾರೆ. ಎಲ್ಲ ಮತಗಳು ಅವರ ಪಕ್ಷಕ್ಕೆ ಸಿಗುವಂತಾಗಲಿ ಎಂಬುದು ಅವರ ಉದ್ದೇಶ. ಇದರಲ್ಲಿ ಏಕಚಕ್ರಾಧಿಪತ್ಯ ಸ್ಥಾಪಿಸುವ ಹುನ್ನಾರವಿದೆ. ಇದು ಸಂವಿಧಾನದ ಮೂಲ ಆಶಯವನ್ನು ಸದೆಬಡಿಯಲಿದೆ. ಒಂದು ವೇಳೆ “ಒಂದು ದೇಶ, ಒಂದು ಚುನಾವಣೆ’ ಜಾರಿಯಾದರೆ ಚುನಾವಣೆ ನಡೆಯಲು ಒಂದು ವರ್ಷ ಬೇಕಾಗಬಹುದುಎಂದರು.

ತಂತ್ರಜ್ಞಾನಗಳು ಬೆಳೆದಂತೆ ಚುನಾವಣೆಯ ಅವಧಿ ಕಡಿಮೆಯಾಗಬೇಕಿತ್ತು. ಆದರೆ ಅವಧಿ ಹೆಚ್ಚಾಗುತ್ತಿದೆ. ಈ ರೀತಿ ವಿಳಂಬವಾಗಿ ಚುನಾವಣೆ ನಡೆಸುವುದರಿಂದ ಅಕ್ರಮಗಳಿಗೆ ಅವಕಾಶ ನೀಡಿದಂತ ಆಗುತ್ತದೆ. ಈ ಬಗ್ಗೆ ಚುನಾವಣ ಆಯೋಗ ಮತ್ತು ಮೋದಿ ಉತ್ತರಿಸಬೇಕು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next