Advertisement
ಜಾತ್ರೆಗಾಗಿ ಸುಮಾರು 25 ಪೌರಕಾರ್ಮಿಕರನ್ನು ನೇಮಕ ಮಾಡಿಕೊಂಡು ಪಟ್ಟಣದಲ್ಲಿ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡು ಪ್ರತಿನಿತ್ಯ ನೀರು ಪೂರೈಕೆ ಮಾಡಬೇಕು. ಜಾತ್ರೆಯ ಪಲ್ಲಕಿ ಮೆರವಣಿಗೆ ವೇಳೆ ಮಹಿಳೆಯರು ರಂಗೋಲಿ ಹಾಕುವ ಸಂಪ್ರದಾಯವಿದ್ದು, ಈ ವರ್ಷ ಉತ್ತಮ ರಂಗೋಲಿಗೆ ಪುರಸಭೆಯಿಂದ ಬಹುಮಾನ ನೀಡುವ ಕುರಿತು ಚರ್ಚಿಸಲಾಯಿತು.
ಪಟ್ಟಣ ಹೊರವಲಯದ ರಾಷ್ಟ್ರಯ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರಣ ಅನೇಕ ಅಡಚಣೆಗಳು ಉಂಟಾಗುತ್ತಿವೆ. ಚಿದ್ರಿ ಬೈಪಾಸ್‌ನಿಂದ ರಾಮ ಮತ್ತು ರಾಜ ಕಾಲೇಜು ವರೆಗೆ ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ನಡುವಳಿ ಬರೆದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ್ಳಿಗೆ ಸಲ್ಲಿಸಬೇಕು ಎಂದರು. ಪಟ್ಟಣದ ತೇರು ಮೈದಾನದ ತೇರು ಸಾಗುವ ರಸ್ತೆ ದುರಸ್ಥಿ ಹಾಗೂ ಟೆಂಡರ್ ಕರೆದು ಪಟ್ಟಣದಲ್ಲಿ ವಿದ್ಯುತ್ ದೀಪ
ಅಳವಡಿಸಲು ಅನುಮೋದನೆ ನೀಡಲಾಯಿತು. ಪುರಸಭೆ ಅಧ್ಯಕ್ಷೆ ರಾಧಾ ಮಾಳಪ್ಪ, ಉಪಾಧ್ಯಕ್ಷೆ ಪಾವರ್ತಿ ಶೇರಿಕಾರ್, ಪುರಸಭೆ ಸದಸ್ಯರಾದ ಮಹೇಶ ಅಗಡಿ, ಅಫರ್ ಮಿಯ್ನಾ, ಕಲಿಮೂಲಾ, ನಾಸೀರ್, ವಿನಾಯಕ ಯಾದವ, ತಿರುಮಲ ರೆಡ್ಡಿ, ಪ್ರಭುರೆಡ್ಡಿ, ಆಜಾಮ್, ಇಸ್ಮಾಯಿಲ್, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಮೀನಾಕುಮಾರಿ ಬೊರಳಕರ್ ಇದ್ದರು.