Advertisement

ವೀರಭದ್ರೇಶ್ವರ ರಥೋತ್ಸವ

07:45 AM Jan 23, 2019 | |

ಹೂವಿನಹಡಗಲಿ: ತಾಲೂಕಿನ ಸೋಗಿ ಗ್ರಾಮದಲ್ಲಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತಾದಿಗಳು ಅಗಮಿಸಿ ಸ್ವಾಮಿ ದರ್ಶನ ಪಡೆದರು.

Advertisement

ಹೂವು ಹಾಗೂ ವಿವಿಧ ರೀತಿಯಿಂದ ಸರ್ವಾಲಂಕೃತವಾಗಿರುವ ರಥೋತ್ಸವಕ್ಕೆ ಸೋಗಿ ಗ್ರಾಮದ ಸುತ್ತ ಮುತ್ತಲ ಗ್ರಾಮದವರು ಅಲ್ಲದೆ ತಾಲೂಕಿನ ವಿವಿಧ ಭಾಗದಿಂದಲೂ ಭಕ್ತರು ಅಗಮಿಸಿದ್ದರು. ಭಕ್ತರು ವಿವಿಧ ಹರಕೆ ತೀರಿಸಿದರು. ರಥೋತ್ಸವಕ್ಕೂ ಮುನ್ನ ವೀರಭದ್ರೇಶ್ವರ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಕರೆ ತಂದು ರಥೋತ್ಸವದಲ್ಲಿರಿಸಿದರು. ನಂತರದಲ್ಲಿ ರಥೋತ್ಸವ ಸಾಗುತ್ತಿದ್ದಂತೆ ಭಕ್ತರು ಹರ್ಷೋದ್ಘಾರದಿಂದ ಸ್ವಾಮಿ ರಥೋತ್ಸವಕ್ಕೆ ಬಾಳೆ ಹಣ್ಣು-ಉತ್ತತ್ತಿ ಎಸೆದು ಹರಕೆ ಹರಿಸಿದರು.

ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಲಾಗಿತ್ತು. ರಥೋತ್ಸವಕ್ಕೆ ರಾಜ್ಯ ಮುಜರಾಯಿ ಇಲಾಖೆಯ ಸಚಿವರಾದ ಪಿ.ಟಿ. ಪರಮೇಶ್ವರನಾಯ್ಕ, ಸೋಗಿ ಗ್ರಾಮದ ಮುಖಂಡರಾದ ಗಡ್ಡಿ ಬಸಣ್ಣ, ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ವೀರಭದ್ರಪ್ಪ, ಎಂ.ಬಿ. ಬಸಣ್ಣ ಇತರೆ ಮುಖಂಡರು, ಅಧಿಕಾರಿಗಳು ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next