Advertisement

ಸಂಭ್ರಮದ ವೀರಭದ್ರೇಶ್ವರ ಅಗ್ಗಿ ಉತ್ಸವ

11:58 AM Jan 02, 2020 | Suhan S |

ಬಾಗಲಕೋಟೆ: ಕಾರ್ತಿಕೋತ್ಸವದ ಅಂಗವಾಗಿ ಹಳೆ ನಗರದ ಮುಚಖಂಡಿ ಕ್ರಾಸ್‌ದಲ್ಲಿರುವ ವೀರಭದ್ರೇಶ್ವರ ಅಗ್ಗಿ ಉತ್ಸವ ಸಂಭ್ರಮದಿಂದ ಜರುಗಿತು. ಕಾರ್ತಿಕೋತ್ಸವ ಹಾಗೂ ಅಗ್ಗಿ ಉತ್ಸವ ನಿಮಿತ್ತ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದ ಪೂಜಾ ಕೈಂಕರ್ಯ ನಡೆಸಲಾಯಿತು.

Advertisement

ಅಗ್ಗಿ ಉತ್ಸವಕ್ಕೂ ಮುನ್ನ ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಹಾಗೂ ಕಳಸದ ಮೆರವಣಿಗೆ ನಡೆಯಿತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಮಹಿಳೆಯರು ಬೆಳಗ್ಗೆಯೇ ರಂಗೋಲಿಯ ಚಿತ್ತಾರವನ್ನು ಬಿಡಿಸಿದ್ದರು.

ಗುಳೇದಗುಡ್ಡ ಮರಡಿಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಜಾತ್ರಾ ಕಾರ್ಯಕ್ರಮಗಳು ನಡೆದವು. ಹಳೆ ನಗರ, ವಿದ್ಯಾಗಿರಿ, ನವನಗರ ಸೇರಿದಂತೆ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರ ಸಮ್ಮುಖದಲ್ಲಿ ಸಂಜೆ ದೇವಸ್ಥಾನದ ಆವರಣದಲ್ಲಿ ಅಗ್ಗಿ ಉತ್ಸವ ನಡೆಯಿತು. ಪಲ್ಲಕ್ಕಿಯನ್ನು ಹೊತ್ತುಕೊಂಡವರು ಮೊದಲು ಅಗ್ಗಿ ಕುಂಡದಲ್ಲಿ ಹಾಯ್ದ ಬಳಿಕ ನಂತರ ಪುರವಂತರು, ಭಕ್ತರು ಅಗ್ಗಿ ಹಾಯ್ದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ದೇವರಲ್ಲಿ ಪ್ರಾರ್ಥಿಸಿದರು.

ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ಪ್ರಭುಸ್ವಾಮಿ ಸರಗಣಾಚಾರಿ,ಬಾಗಲಕೋಟೆ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಮೀಟಿಯವರು ನೇತೃತ್ವದಲ್ಲಿ ಅಗ್ಗಿ ಉತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next