Advertisement
ರಾವಣನು ಸೀತೆಯನ್ನು ಅಪಹರಿಸಿಕೊಂಡು ಈ ಪ್ರದೇಶದಲ್ಲಿ ಹೋಗುತ್ತಿರುವಾಗ ಬೆಟ್ಟದ ಮೇಲೆ ಜಟಾಯು ಪಕ್ಷಿಯು ಅಡ್ಡಿ ಮಾಡುತ್ತದೆ. ರಾವಣನು ಸಿಟ್ಟಿನಿಂದ ಪಕ್ಷಿಯ ರೆಕ್ಕೆಗಳನ್ನು ತುಂಡರಿಸಿ, ಮುಂದೆ ಹೋಗುತ್ತಾನೆ. ಶ್ರೀರಾಮನು ಸೀತಾನ್ವೇಷಣೆ ಮಾಡುತ್ತಾ ಈ ಸ್ಥಳಕ್ಕೆ ಬಂದಾಗ ಜಟಾಯು ಕೆಳಗೆ ಬಿದ್ದಿರುವುದನ್ನು ನೋಡುತ್ತಾನೆ. ನಂತರ ಪಕ್ಷಿಗೆ ಮೋಕ್ಷ ಕೊಟ್ಟು “ಲೇ-ಪಕ್ಷಿ’ ಎಂದು ಹೇಳುತ್ತಾನೆ. “ಲೇ-ಪಕ್ಷಿ’ ಎಂಬ ಪದವೇ ಕಾಲಕ್ರಮೇಣವಾಗಿ ಲೇಪಾಕ್ಷಿ ಆಗಿದೆ. ಲೇಪಾಕ್ಷಿ ಗ್ರಾಮವನ್ನು ಪ್ರವೇಶಿಸಿದ ಕೂಡಲೇ ಬೆಟ್ಟದಲ್ಲಿ, “ಜಟಾಯು ಪಕ್ಷಿ’ಯು ಸ್ವಾಗತಿಸುತ್ತದೆ. ಅಲ್ಲದೆ, ರಸ್ತೆಯ ಬಲಗಡೆಗೆ ಒಂದೇ ಬಂಡೆಯಲ್ಲಿ ಕೆತ್ತನೆ ಮಾಡಿದ ಸುಂದರವಾದ ನಂದಿ ವಿಗ್ರಹ ಸೆಳೆಯುತ್ತದೆ. 15 ಅಡಿಗಳ ಎತ್ತರ, 27 ಅಡಿ ಉದ್ದವಿರುವ ನಂದಿಯು ಎದ್ದು ಬರಲು ಸಜ್ಜಾಗಿರುವಂತೆ ತೋರುತ್ತದೆ. ನಂದಿಯ ಶರೀರ ಭಾಗದಲ್ಲಿ ಅಲಂಕರಿಸಿದ ಗೆಜ್ಜೆಗಳು, ಘಂಟೆಗಳ ಕೆತ್ತನೆಯ ಕುಸುರಿ ಚೆಂದವೋ ಚೆಂದ. ಭಾರತದ ಅತಿ ದೊಡ್ಡ ಏಕಶಿಲಾ ನಂದಿ ವಿಗ್ರಹವಿದು.
Related Articles
ಈ ಸುಂದರ ದೇಗುಲವನ್ನು ವಿಜಯನಗರದ ಅಚ್ಯುತರಾಯರ ಕಾಲದಲ್ಲಿ ಪೆನುಗೊಂಡ ಸಂಸ್ಥಾನದಲ್ಲಿ ಕೋಶಾಧಿಕಾರಿಯಾಗಿದ್ದ ರೂಪಣ್ಣನು ನಿರ್ಮಿಸಿದನೆಂದು ಪ್ರತೀತಿ. ಇಲ್ಲಿ ಶ್ರೀ ವೀರಭದ್ರನಿಗೆ ನಿತ್ಯ ಪೂಜೆಗಳು ನಡೆಯುತ್ತವೆ. ಶಿವರಾತ್ರಿ ಪೂಜೆಯಂತೂ ಬಹಳ ಪ್ರಸಿದ್ಧ.
Advertisement
ದರುಶನಕೆ ದಾರಿ…ಬೆಂಗಳೂರಿನಿಂದ ಕೇವಲ 120 ಕಿ.ಮೀ. ದೂರದಲ್ಲಿದೆ. ಹಿಂದುಪುರ ರೈಲ್ವೆ ಸ್ಟೇಷನ್ನಿಂದ 10 ಕಿ.ಮೀ. ದೂರದಲ್ಲಿದೆ. – ಸುರೇಶ ಗುದಗನವರ