Advertisement
ಐತಿಹಾಸಿಕ ಮಧ್ಯಯುಗೀನ ಕಾಲದಿಂದ ಹಿರಿಯಡಕವು ಧಾರ್ಮಿಕ ಮಾನ್ಯತೆ ಪಡೆದಿದೆ. ದೈವ-ದೇವರ ಸನ್ನಿಧಾನಗಳಿಂದ ಗಮನ ಸೆಳೆದ ವೀರಭದ್ರ ದೇವಸ್ಥಾನವು ಬಹುಮಾನ್ಯ. ಸಿರಿ-ಅಬ್ಬಗ-ದಾರಗ ಆರಾ ಧನಾ ವಿಧಾನವೂ ಇಲ್ಲಿನ ಅವಿಭಾಜ್ಯ ಅಂಗ. ಪೂರ್ವದಲ್ಲಿ ಹಿರಿಯಡಕವು ಬ್ರಹ್ಮಸ್ಥಾನ (ಆಲಡೆ, ಬೆರ್ಮಸ್ಥಾನ)ವೇ ಆಗಿದ್ದು ಕಾಲಾಂತರದಲ್ಲಿ ಆಗಮೋಕ್ತ ದೇವಾಲಯವಾಯಿತು ಎಂದು ಇತಿಹಾಸ ಸಂಶೋಧಕ ದಿ|ಡಾ| ಗುರುರಾಜ ಭಟ್ಟ ಅವರ “ಆ್ಯಂಟಿ ಕ್ಯುಟೀಸ್ ಆಫ್ ಸೌತ್ ಕೆನರಾ’ಎಂಬ ಗ್ರಂಥದಲ್ಲಿ ಉಲ್ಲೇಖೀತವಾಗಿದೆ.ಈ ಆಧಾರದಲ್ಲಿ ಹಿರಿಯಡಕ ವೀರಭದ್ರ ದೇವರ ದರ್ಶನ, ಒಳಾಂಗಣದಲ್ಲಿ ಒಂದು ಪ್ರದಕ್ಷಿಣೆ ಮತ್ತು ಹೊರಾಂಗಣದಲ್ಲಿ ಒಂದು ಸುತ್ತು ಬಂದಾಗ ಇಲ್ಲಿಯ ಉಪಾಸನಾ ಶೈಲಿಯ ವೈಶಾಲ್ಯ, ಬಹುದೇವತಾ ಶ್ರದ್ಧೆ ಹಾಗೂ ಆದಿಮ-ವೈದಿಕಗಳ ಸುಗಮ ಸಮಾಗಮ ನಡೆದ ಚರಿತ್ರೆಯ ದರ್ಶನವಾಗುತ್ತದೆ.
ಕೂಡುಕಟ್ಟಿನ ವ್ಯಾಪ್ತಿ, ದೇವಾಲಯದ ಸಾಮಾಜಿಕ ಸ್ವೀಕಾರದ ವಿಧಾನಗಳು, ದೂರು – ನ್ಯಾಯ ತೀರ್ಮಾನಗಳಿಗಿರುವ ಅವಕಾಶ (ಇಲ್ಲಿಯ ಪ್ರಮಾಣ ಚಾವ ಡಿಯು ನಿದರ್ಶನ ವಾಗುತ್ತದೆ). ಆಗಮ ದೇವಾಲಯಗಳ ಅನುಷ್ಠಾನ ಕ್ರಮದಂತೆ ವಿಸ್ತಾರವಾದ ನಿತ್ಯಪೂಜೆ- ಪಂಚಪರ್ವ- ಉತ್ಸವಗಳ ವೈಭವ ಮುಂತಾದ ಸಾಂಪ್ರ ದಾಯಿಕ ನಡವಳಿಕೆಗಳ ನೆಲೆಯಲ್ಲಿ “ಮಹತೋಭಾರ’ ಮಾನ್ಯತೆ ಎಂಬುದು ಒಂದು ಆಯಾಮದ ವಿವರಣೆ.
Related Articles
ಗರ್ಭಗುಡಿಯಲ್ಲಿ ವೀರಭದ್ರ ಮೂಲ ಸ್ಥಾನ ಸನ್ನಿಧಾನವಾದರೆ, ಅಬ್ಬಗ – ದಾರಗ, ಖಡೆYàಶ್ವರಿ, ನರಸಿಂಹ ಸಾಲಿಗ್ರಾಮ, ವಾಂಚಿತಾರ್ಥ ಶ್ರೀಚಕ್ರ ಹಾಗೂ ಈಶ್ವರ ಪ್ರತೀಕಗಳು ಮೂಲಸ್ಥಾನ ಪೀಠದಲ್ಲೇ ಸ್ಥಾನ ಪಡೆದಿವೆ. ಇಲ್ಲಿಯೇ ಬಹುದೇವತಾ ಆರಾಧನೆಯ ವಿವರ ಕಾಣಬಹುದು. ಇದು ಇಲ್ಲಿಯ ವೈಶಿಷ್ಟ್ಯ.
Advertisement
ವಿಶೇಷ ಪರಿಕಲ್ಪನೆಗರ್ಭಗುಡಿಯ ಹಿಂಬದಿಯಲ್ಲೇ ನಾಗ ಸಂಕಲ್ಪ, ಪಕ್ಕದÇÉೆ ಬ್ರಹ್ಮಲಿಂಗೇಶ್ವರ ಗುಡಿ. ಇವೆಲ್ಲವೂ ಸುತ್ತುಪೌಳಿಯಿಂದ ಆವೃತವಾಗಿದೆ. ಇಂತಹ ಪರಿಕಲ್ಪನೆಯೂ ವಿಶೇಷವೇ. ಈ ಸಮೂಹವನ್ನು ಆಗಮವು ಒಪ್ಪಿ ಒಳಗೊಂಡದ್ದು ನಮ್ಮ ಶಾಸ್ತ್ರಗಳ ವೈಚಾರಿಕ ವೈಶಾಲ್ಯಕ್ಕೆ ಸಾಕ್ಷಿ. ಅದು ಹಿರಿಯಡಕದ ಹಿರಿಮೆ. ಈ ಮೂಲಕ ಪುರಾತನ ಸಮೂಹ ಪೂಜಾ ವಿಧಾನವನ್ನು ಮತ್ತೂಮ್ಮೆ ನೆನಪಿಸಿಕೊಳ್ಳುವಂತಾಗುತ್ತದೆ. ಹೊರಾಂಗಣದಲ್ಲಿ ಮುಖ್ಯವಾಗಿ ಪಿಲಿಚಾಮುಂಡಿ, ಬೊಬ್ಬರ್ಯ, ಕ್ಷೇತ್ರಪಾಲ, ಪರಿವಾರ ಗಣಗಳೆಂದು ಹೆಸರಿಸಲಾಗುವ ಮರದ ಮೂರ್ತಿಗಳು, ಭೂತರಾಜ, ಅಡ್ಕತ್ತಾಯ, ಮಾಲಿ – ಸುಮಾಲಿ, ಗಜ ಕರ್ಣ – ಘಂಟಾಕರ್ಣ ಹಾಗೂ ಪ್ರೇತ ಸಂಕಲ್ಪಗಲಿವೆ. ಈ ಶಕ್ತಿ ಸಾನ್ನಿಧ್ಯಗಳಿಗೆ ಸೊಗಸಾದ ಗುಡಿಗಳನ್ನು, ಸಂಕಲ್ಪಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ದಾರು – ಶಿಲಾ ಶಿಲ್ಪಗಳು ಪಲ್ಲವಿಸಿವೆ. ಅಡ್ಕತ್ತಾಯ ಮುಂಡಿಗೆಯಂತೂ ಪಾರಂಪರಿಕ ಸೊಬಗಿನ ಪುನಾರಚನೆ. ಚಾರಿತ್ರಿಕ ಮಹತ್ವ ಒದಗಬಹುದಾದ ನಗಾರಿಗೋಪುರ ಮತ್ತು ರಾಜಗೋಪುರಗಳ ನಿರ್ಮಾಣ ಕಾರ್ಯ ಸಂಪೂರ್ಣವಾಗಿದ್ದು ಅರ್ಪಣಾ ಕಾರ್ಯವೂ ನಡೆದಿದೆ. ಕರಾವಳಿ ಶೈಲಿಯ ಪುನರುತ್ಥಾನ ಕಾರ್ಯವಾಗಿ ಇವು ಕಂಗೊಳಿಸುತ್ತಿವೆ. ಸಿರಿಜಾತ್ರೆಗೆ ಪ್ರಸಿದ್ಧ
ಸಿರಿಗಳಿಗೆ ನಂದಳಿಕೆಯಲ್ಲಿ ಜನನ, ಹಿರಿಯಡಕದಲ್ಲಿ ಬೆಳವಣಿಗೆ, ಕವತ್ತಾರಿನಲ್ಲಿ ಅವತಾರ ಎಂಬುದೊಂದು ಆಡು ಮಾತು. ಇದರಂತೆಯೇ ಹಿರಿಯಡಕವೂ ಪ್ರಸಿದ್ಧ ಸಿರಿಕ್ಷೇತ್ರ. ಇಲ್ಲಿ ನಡೆಯುವ ಸಿರಿಜಾತ್ರೆಯಿಂದಲೇ ಗುರುತಿಸಲ್ಪಡುತ್ತದೆ. ಘಟ್ಟದ ಮೇಲಿನಿಂದ ಹಾಗೂ ಉಭಯ ಜಿಲ್ಲೆಗಳಿಂದಲೂ ಸಿರಿಗಳು ಆಗಮಿಸಿ ದಲ್ಯಸೇವೆ ಸಮರ್ಪಿಸುತ್ತಾರೆ. ಸಿರಿಪಾಡªನದಂತೆ ತಮ್ಮ ಜೀವನ ಶೈಲಿಯಿಂದ, ಸತ್ಯ ಪ್ರತಿಪಾದನೆಯಿಂದ ಪೂಜಾರ್ಹರಾದ ಸಿರಿಗಳನ್ನು ಆಲಡೆಗಳೆಂದು ಗುರುತಿಸಲ್ಪಡುತ್ತಿದ್ದ ಪಂಚದೈವಸ್ಥಾನಗಳಲ್ಲಿ (ಬ್ರಹ್ಮಸ್ಥಾನ – ಬೆರ್ಮಸ್ಥಾನ ಗಳಲ್ಲಿ ) ನೆಲೆಗೊಳಿಸಲಾಯಿತು. ಅಂತೆಯೇ ಹಿರಿಯಡಕದಲ್ಲಿ ಮೂಲ ಬ್ರಹ್ಮಸ್ಥಾನಕ್ಕೆ (ಆಲಡೆಗೆ) ಸಿರಿಗಳು ಸೇರ್ಪಡೆಗೊಂಡಿರಬೇಕು. ಹೀಗೆ ಸಾಂಸ್ಕೃತಿಕ ಬಹುತ್ವಕ್ಕೆ ಪೂರಕವಾಗಿ ಬಹು ಸೊಗಸಾದ, ವಿಸ್ತೃತ ವಿಧಾನದ ಜೀರ್ಣೋದ್ಧಾರ ಕಾರ್ಯ ಸಂಪನ್ನಗೊಂಡು ಹಿರಿಯಡಕ ಕ್ಷೇತ್ರ ಪುಣೊÂàತ್ಸವಕ್ಕೆ ಸಜ್ಜಾಗುತ್ತಿದೆ. – ಕೆ.ಎಲ್. ಕುಂಡಂತಾಯ