Advertisement
ಸಮಾಜದ ಮುಂದಿನ ಪೀಳಿಗೆಗೆ ಮೇಲ್ಪಂಕ್ತಿ ಹಾಕುವ ಸಲುವಾಗಿ ಯಡಿಯೂರಪ್ಪನವರು ಹಿರಿಯರೊಂದಿಗೆ ಚರ್ಚಿಸಿ ವೀರಭದ್ರ ಜಯಂತಿಗೆ ಕ್ರಮ ಕೈಗೊಂಡಿದ್ದಾರೆ. ಈ ಜಯಂತಿ ಮಾಡಲು ಸರ್ಕಾರ ಘೋಷಣೆ ಮಾಡುವಲ್ಲಿ ಪ್ರದೀಪ್ ಕಂಕನವಾಡಿಯವರ ಶ್ರಮ ಇದೆ. ಎಲ್ಲಾ ಸಮುದಾಯದವರು ವೀರಭದ್ರನ ಆರಾಧನೆ ಮಾಡುತ್ತಾರೆಂಬ ಕಾರಣಕ್ಕೆ ಆಚರಿಸಲಾಗುತ್ತದೆ. ಮಂಗಳವಾರ ವೀರಭದ್ರ ಹುಟ್ಟಿದ ದಿನವಾಗಿದೆ ಎಂದರು.
Related Articles
Advertisement
ವೀರೇಶ್ ಬಾಬು ವಿಶೇಷ ಉಪನ್ಯಾಸ ನೀಡಿ, ವೀರಭದ್ರನಲ್ಲಿಯೂ ಶಿವ ಶಕ್ತಿ ಇದೆ. ಭದ್ರಕಾಳಿ ಸ್ವರೂಪನಾಗಿ ಉದ್ಭವಾದವನು ವೀರಭದ್ರ. ವೀರಶೈವ ಧರ್ಮದ ಸಾರವನ್ನು ಜಗತ್ತಿಗೆ ಸಾರಿದವನು ವೀರಭದ್ರ. ವೀರಭದ್ರರ ಅವತಾರ ಭಾರತದ ಅಖಂಡತೆಯನ್ನು ಸಾರುತ್ತದೆ. ಬೇರೆ ಬೇರೆ ರೂಪದಲ್ಲಿ ಜನ್ಮ ತಾಳಿ ಲೋಕ ಕಲ್ಯಾಣ ಮಾಡಿದ್ದಾರೆ ಎಂದರು.
ರಂಭಾಪುರಿ ಪೀಠದ ಶ್ರೀ ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಮಳಲಿ ಮಠದ ಶ್ರೀ ಡಾ|ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ, ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ್ ಗೌಡ್ರು, ಎಸ್.ಎಸ್. ಜ್ಯೋತಿ ಪ್ರಕಾಶ್, ಎನ್.ಜೆ. ರಾಜಶೇಖರ್, ಎಸ್.ಪಿ. ದಿನೇಶ್, ಅನಿತಾ ರವಿಶಂಕರ್, ಡಾ| ಧನಂಜಯ ಸರ್ಜಿ, ಇ.ವಿಶ್ವಾಸ್, ರುದ್ರಮುನಿ ಸಜ್ಜನ್, ಈರೇಶ್ ಗೌಡ್ರು, ಟಿ.ವಿ. ವೀರಯ್ಯ, ಬಳ್ಳೆಕೆರೆ ಸಂತೋಷ್, ಎಸ್.ಎನ್. ಚನ್ನಬಸಪ್ಪ, ಧನರಾಜ್ ಬಿ.ಜಿ., ಡಿ.ಎಚ್. ಡಾ| ರಾಜೇಶ್ ಸುರಗಿಹಳ್ಳಿ, ಎಚ್.ವಿ. ಮಹೇಶ್ವರಪ್ಪ, ಬಿಂದುಕುಮಾರ್, ಎನ್.ಜೆ. ನಾಗರಾಜ್, ರೇಖಾ, ಎಚ್.ಸಿ. ಯೋಗೀಶ್ ಮತ್ತಿತರರು ಇದ್ದರು. ಚೌಕಿಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ ರಂಭಾಪುರಿ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.