Advertisement
ಗೋವಾದಲ್ಲಿ ಕಾಂತಾರ ಚಲನಚಿತ್ರ ವೀಕ್ಷಿಸಿದ ನಂತರ ಮುಖ್ಯಮಂತ್ರಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಾಡೆ, ಬಿಜೆಪಿ ಮುಖಂಡರಾದ ದಾಮು ನಾಯ್ಕ್, ನರೇಂದ್ರ ಸಾವಾಯಿಕರ್ ಮತ್ತಿತರರು ಉಪಸ್ಥಿತರಿದ್ದರು.
ಗೋವಾದ ಸಾಖಳಿ ಬಳಿಯ ಶ್ರೀ ವಿಟ್ಠಲ ದೇವಸ್ಥಾನದ ಪರಿಸರದಲ್ಲಿ ವೀರಭದ್ರ ನೃತ್ಯ ಸಂಪ್ರದಾಯ.ಕಾರಾಪುರದ ಶ್ರೀ ವಿಟ್ಠಲ ದೇವಸ್ಥಾನವು ವಿಟ್ಠಲಾಪುರದಲ್ಲಿ 1392 ರಲ್ಲಿ ಸ್ಥಾಪನೆಯಾಯಿತು ಎಂದು ಉಲ್ಲೇಖವಿದೆ. ಶ್ರೀ ವಿಟ್ಠಲ ದೇವರು ವಿಷ್ಣುವಿನ ಅವತಾರವಾಗಿದ್ದು , ಗೋವಾ, ಮಹಾರಾಷ್ಟ್ರ, ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಭಕ್ತಿ ಪಂಥದಿಂದ ಜನಪ್ರಿಯವಾಗಿದೆ. ಶ್ರೀ ವಿಟ್ಠಲರು ಮುಖ್ಯವಾಗಿ ಶೈವ ಮತ್ತು ವೈಷ್ಣವ ಎರಡು ಪಂಗಡಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಿದರು. ಪ್ರತಿ ವರ್ಷ ಈ ದೇವಸ್ಥಾನದಲ್ಲಿ ವೀರಭದ್ರ ನೃತ್ಯದ ಪದ್ಧತಿ ಕೂಡ ನಡೆದುಬಂದಿದೆ.