ಉಳ್ಳಾಲ: ನಗರಸಭೆಯ ಮಹಾತ್ಮಾ ಗಾಂಧಿ ರಂಗಮಂದಿರದಲ್ಲಿ ಶನಿವಾರ ಜರಗಿದ ವೀರ ರಾಣಿ ಅಬ್ಬಕ್ಕ ಉತ್ಸವ 2023-24ರ ಸಮಾರೋಪ ಸಮಾರಂಭದಲ್ಲಿ ಲೇಖಕಿ ಡಾ| ಪ್ರಮೀಳಾ ಮಾಧವ್ ಮತ್ತು ಪದ್ಮಶ್ರೀ ಪುರಸ್ಕೃತ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಡಾ| ಮಾಲತಿ ಕೆ. ಹೊಳ್ಳ ಅವರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಗಳೂರು ವಿ.ವಿ. ಕುಲಪತಿ ಡಾ| ಜಯರಾಜ್ ಅಮೀನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ವಿ.ವಿ.ಯಲ್ಲಿರುವ ವೀರ ರಾಣಿ ಅಬ್ಬಕ್ಕ ಪೀಠ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಜಂಟಿಯಾಗಿ ಅಬ್ಬಕ್ಕಳ ವಿಚಾರದಲ್ಲಿ ಸಂಶೋಧನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಹಾವೇರಿ ವಿ.ವಿ.ಯ ವಿಶ್ರಾಂತ ಕುಲಪತಿ ಡಾ| ಚಿನ್ನಪ್ಪ ಗೌಡ ಅಭಿನಂದನ ಮಾತುಗಳನ್ನಾಡಿ, ಅಬ್ಬಕ್ಕ ಉತ್ಸವ ಸಮಿತಿ 27 ವರ್ಷಗಳಿಂದ 25,000 ರೂ. ನಗದು ಸಹಿತವಾಗಿ ಪ್ರಶಸ್ತಿ ನೀಡುತ್ತಾ ಬಂದಿದೆ. ಇದು ಶ್ಲಾಘನೀಯ ಎಂದು ಹೇಳಿದರು.ಇದೇ ವೇಳೆ ಪ್ರೊ| ಅಮೃತ ಸೋಮೇಶ್ವರ ಅವರ ಸಂಸ್ಮರಣೆ ನಡೆಯಿತು.
ಸಂತ ಸೆಬಾಸ್ತಿಯನ್ನರ ಧರ್ಮಕೇಂದ್ರದ ವಂ| ಸಿಪ್ರಿಯನ್ ಪಿಂಟೋ, ಹಿಂದುಳಿದ ವರ್ಗದ ಆಯೋಗದ ಸದಸ್ಯ ಕೆ.ಟಿ. ಸುವರ್ಣ, ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ, ಭಾರತೀಯ ತೀಯಾ ಸಮಾಜದ ಅಧ್ಯಕ್ಷ ಸದಾಶಿವ ಉಳ್ಳಾಲ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಉದ್ಯಮಿ ಪ್ರಕಾಶ್ ಕುಂಪಲ, ಸೋಮೇಶ್ವರ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಚಂದ್ರಶೇಖರ ಉಚ್ಚಿಲ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಕೃಷ್ಣಪ್ಪ ಸಾಲಿಯಾನ್, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಹಿರಿಯರಾದ ಸೀತಾರಾಮ ಬಂಗೇರ, ಉಳ್ಳಾಲ ನಗರಸಭೆಯ ಮಾಜಿ ಉಪಾಧ್ಯಕ್ಷ ಆಯೂಬ್ ಮಂಚಿಲ, ಸದಸ್ಯರಾದ ಸಪ್ನ ಹರೀಶ್, ನಮಿತಾ ಗಟ್ಟಿ, ಸೋಮೇಶ್ವರ ಪುರಸಭಾ ಸದಸ್ಯೆ ಸಪ್ನಾ ಗಟ್ಟಿ, ಉತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಕೆ. ಜಯರಾಮ ಶೆಟ್ಟಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಧನಲಕ್ಷಿ$¾à ಗಟ್ಟಿ ಮತ್ತು ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ವಂದಿಸಿದರು.