Advertisement

ಮೇಲ್ಸೇತುವೆಗೆ ವೀರ ಸಾವರ್ಕರ್‌ ಹೆಸರಿಗೆ ತೀರ್ಮಾನ

06:25 AM Jul 01, 2020 | Team Udayavani |

ಬೆಂಗಳೂರು: ರಾಜ್ಯ ಮಟ್ಟದಲ್ಲಿ ರಾಜಕೀಯ ಪಕ್ಷಗಳ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಯಲ ಹಂಕ ವೃತ್ತದ ಮೇಲ್ಸೇತುವೆಗೆ ಸ್ವಾತಂತ್ರ್ಯ ಹೋರಾಟಗಾರ “ವೀರ ಸಾವರ್ಕರ್‌’ ಹೆಸರಿಡುವ ಗೊಂದಲಕ್ಕೆ ಬಿಬಿಎಂಪಿ  ನಿರ್ಣಯದ ಮೂಲಕ ತೀರ್ಮಾನ ಕೈಗೊಂಡಿದೆ. ಮಂಗಳವಾರ ಯಲಹಂಕ ವೃತ್ತದ ನೂತನ ಮೇಲ್ಸೇತುವೆಗೆ ಸ್ವಾತಂತ್ರ ಹೋರಾಟಗಾರ ವೀರ ಸಾವರ್ಕರ್‌ ನಾಮಕರಣ ಮಾಡುವ ಸಂಬಂಧ ಪಾಲಿಕೆ ಸಭೆ ಸರ್ವಾನುಮತದ ನಿರ್ಣಯ  ತೆಗೆದುಕೊಂಡಿತು.

Advertisement

ಮೇಲ್ಸೇತುವೆಗೆ ವೀರ ಸಾವರ್ಕರ್‌ ಹೆಸರು ನಾಮಕರಣದ ನಿರ್ಣಯವನ್ನು ಪಾಲಿಕೆ ಸರ್ಕಾರಕ್ಕೆ ಸಲ್ಲಿಸಲಿದ್ದು, ಸರ್ಕಾರವು ಪಾಲಿಕೆಯ ಪ್ರಸ್ತಾವನೆಯನ್ನು ಪರಿಶೀಲಿಸಿ ಅಂತಿಮ ಆದೇಶ ಹೊರಡಿಸಲಿದೆ. ಮೇ 28ರಂದು  ಯಲಹಂಕದ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ರಸ್ತೆಯ ಡೈರಿ ವೃತ್ತದಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆಗೆ ವೀರ ಸಾವರ್ಕರ್‌ ಹೆಸರು ನಾಮಕರಣಕ್ಕೆ ಸರ್ಕಾರ ಮುಂದಾದ ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ  ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು.

ಮೌನಕ್ಕೆ ಜಾರಿದ ವಿರೋಧ ಪಕ್ಷ!: ಈ ಹಿಂದೆ ಹೆಸರು ನಾಮಕರಣಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿ ದ್ದ ವಿರೋಧ ಪಕ್ಷದ ಸದಸ್ಯರು ಮಂಗಳವಾರ ಆಡಳಿತ ಪಕ್ಷ ತೆಗೆದುಕೊಂಡ ನಿರ್ಣಯಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಮೇ  20ಕ್ಕೆ ಪಾಲಿಕೆ ಮೇಲ್ಸೇತುವೆಗೆ ವೀರ ಸಾವರ್ಕರ್‌ ಹೆಸರು ನಾಮಕರಣಕ್ಕೆ ಸಂಬಂಧಿಸಿದಂತೆ 30 ದಿನ ಕಾಲಾವಕಾಶ ನೀಡಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಈ ಕುರಿತು ಎರಡು ಆಕ್ಷೇಪಣೆ ಬಂದಿದ್ದು, ಒಂದು ಆಕ್ಷೇಪಣೆ  ಮಾತ್ರ ವೀರ ಸಾವರ್ಕರ್‌ ಹೆಸರು ಬೇಡ ಎಂದು ಸಲ್ಲಿಕೆ ಯಾಗಿದೆ. ಮತ್ತೂಂದು ಬದಲಿ ಹೆಸರಿಗೆ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next