Advertisement
ನಾಡಿನ ಖ್ಯಾತ ಕಲಾವಿದರಾದ ನೀಲಾ ರಾಮಗೋಪಾಲ್, ನರಸಿಂಹಲು ವಡವಾಟಿ, ಎಸ್. ಶಂಕರ್, ರುದ್ರಪಟ್ಣಂ ರಮಾಕಾಂತ, ಡಾ|| ಸುಮಾ ಸುಧೀಂದ್ರ, ಬಿ. ಕೆ. ಅನಂತರಾಂ ಹಾಗೂ ಪವನ್‌ರಂಗಾಚಾರ್ ಇವರುಗಳು ಸಂಗೀತ ಕಛೇರಿಗಳನ್ನು ನಡೆಸಿಕೊಡಲಿ¨ªಾರೆ. ಸ್ಥಳೀಯ ಸಂಗೀತಗಾರರಿಗೆ ವೇದಿಕೆಯನ್ನು ಒದಗಿಸುವ ದಿಕ್ಕಿನಲ್ಲಿ ಪ್ರತಿಷ್ಠಾನ ತುಂಬ ಉತ್ತಮ ಕೆಲಸ ಮಾಡುತ್ತಿದೆ. ನಮ್ಮವರನ್ನು ನಾವೇ ಪ್ರೋತ್ಸಾಹಿಸದಿದ್ದರೆ ಹೇಗೆ ಎನ್ನುವ ವಿದ್ವಾನ್ ಬಾಲಕೃಷ್ಣ ವೀಣೆ ದೊರೆಸ್ವಾಮಿಯವರ ಸರಳತೆ, ಸೌಜನ್ಯತೆ, ಸಾಧನೆಯ ಮುಂದುವರಿಕೆಯಾಗಿ¨ªಾರೆ.
Related Articles
Advertisement
ನಾಲ್ಮಡಿ ಕೃಷ್ಣರಾಜ ಒಡೆಯರು ತಮ ¾ಆಸ್ಥಾನದಲ್ಲಿರುವ ಹಿರಿಯ ಸಂಗೀತಗಾರರು ಮುಂದಿನ ತಲೆಮಾರನ್ನು ತಯಾರು ಮಾಡಬೇಕೆಂಬ ಬಗ್ಗೆ ವಿಶೇಷ ಗಮನಕೊಟ್ಟಿದ್ದರು. ಒಮ್ಮೆ ಆ ಸ್ಥಾನ ವೈಣಿಕರಾಗಿದ್ದ ವೆಂಕಟಗಿರಿಯಪ್ಪನವರಿಗೆ ಮಹಾರಾಜರು, “”ನಿಮ್ಮ ಶಿಷ್ಯರನ್ನು ಕರೆದುತನ್ನಿ, ಹೇಗೆ ತಯಾರಾಗಿ¨ªಾರೆ ನೋಡೋಣ” ಎಂದರಂತೆ. ಹನ್ನೆರಡು ವರ್ಷದ ಈ ಹುಡುಗನ ವೀಣೆ ನುಡಿಸಾಣಿಕೆಗೆ ಮಂತ್ರಮುಗ್ಧರಾದ ಮಹಾರಾಜರು ಐವತ್ತು ರೂಪಾಯಿ ಬಹುಮಾನ ನೀಡಿದ್ದರು. ಮಹಾರಾಜರು ಆಗಲೇ ಹೇಳಿದ್ದರು, “ಈತನಿಗೆ ಸರಿಯಾದ ತರಬೇತಿ ಕೊಡಿ, ಇವನು ಮೈಸೂರಿಗೆ ಹೆಸರು ತರುತ್ತಾನೆ’ ಅರಮನೆ ವಾದ್ಯವೃಂದದಲ್ಲಿ ಜ್ಯೂನಿಯರ್ ವಿದ್ವಾನ್ ಆಗಿದ್ದ ಹುಡುಗ 1936ರಲ್ಲಿ ಮೈಸೂರು ಅರಮನೆಯ ಆಸ್ಥಾನ ವಿದ್ವಾನ್ ಆದಾಗ ಕೇವಲ ಹದಿನಾರು ವರ್ಷ. ಅರಸರ ಎಣಿಕೆ ಸುಳ್ಳಾಗಲಿಲ್ಲ. ಮೈಸೂರು ಬಾನಿ ವೀಣೆ ಶೈಲಿಯನ್ನು ಸಮೃದ್ಧಗೊಳಿಸಿದ ಆ ಹುಡುಗ ವೀಣೆ ದೊರೆಸ್ವಾಮಿ ಅಯ್ಯಂಗಾರ್.
ದೊರೆಸ್ವಾಮಿಯವರಿಗೆ ಆರಂಭಿಕ ಸಂಗೀತ ಪಾಠ ಶುರು ವಾಗಿದ್ದು ಮನೆಯಲ್ಲಿಯೇ, ಮೈಸೂರು ಅರಮನೆಯಲ್ಲಿ ಆಸ್ಥಾನ ವಿದ್ವಾಂಸರಾಗಿದ್ದ ತಂದೆ ಮಾದಿಹಳ್ಳಿ ವೆಂಕಟೇಶ ಅಯ್ಯಂಗಾರ್ ಅವರಿಂದ. ಅಂದಿನ ಪ್ರಸಿದ್ಧ ವೈಣಿಕರಾಗಿದ್ದ ವೆಂಕಟಗಿರಿಯಪ್ಪನವರಲ್ಲಿ 1928ರಲ್ಲಿ ವೀಣೆಯ ಶಿಕ್ಷಣವನ್ನು ಆರಂಭಿಸಿದಾಗ ದೊರೆಸ್ವಾಮಿಯವರಿಗೆ ಕೇವಲ ಎಂಟು ವರ್ಷ.
ದೊರೆಸ್ವಾಮಿ ಅಯ್ಯಂಗಾರ್ ಬಿ. ಎ. ಓದುವಾಗ ಖ್ಯಾತ ಛಾಯಾಚಿತ್ರಕಾರ ಟಿ. ಎಸ್. ಸತ್ಯನ್ ಅವರ ಸಹಪಾಠಿ. ಕಾಲೇಜಿನ ಘಟನೆಯೊಂದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಆಗ ಬಿ. ಎಸ್. ಕೇಶವನ್‌ಇಂಗ್ಲಿಶ್ ಕಾವ್ಯ ಬೋಧಿಸುತ್ತಿದ್ದರು. ಕವಿತೆಯನ್ನು ಬೋಧಿಸುವಾಗ ಅವರು ಅದರಲ್ಲಿಯೇ ಮುಳುಗಿಹೋಗುತ್ತಿದ್ದರು, ಯಾರಾದರೂ ತಡವಾಗಿ ಬಂದರೆ ಏಕಾಗ್ರತೆ ಕೆಡುತ್ತಿತ್ತು, ಕೇಶವನ್‌ರಿಗೆ ಕಿರಿಕಿರಿಯೆನ್ನಿಸುತ್ತಿತ್ತು. ಹೀಗಾಗಿ, ವಿದ್ಯಾರ್ಥಿಗಳು ಯಾರೂ ತರಗತಿಗೆ ತಡವಾಗಿ ಬರುವಂತಿರಲಿಲ್ಲ. ಆದರೆ ದೊರೆಸ್ವಾಮಿಯವರು ಆಗಾಗ ತರಗತಿಗೆ ತಡವಾಗಿ ಬರುತ್ತಿದ್ದರು.ಕೇಶವನ್‌ದೊರೆಸ್ವಾಮಿಯವರನ್ನು ಮಾತ್ರ ಬಹಳ ಆದರದಿಂದ ತರಗತಿಗೆ ಬರಮಾಡಿಕೊಳ್ಳುತ್ತಿದ್ದರು, ಉಳಿದ ವಿದ್ಯಾರ್ಥಿಗಳಿಗೆ, “ಏನಪ್ಪ ಹೀಗೆ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಮಾಡುತ್ತಾರಲ್ಲ’ ಎಂದು ಅಸಹನೆ. ಆಗ ಕೇಶವನ್ ಹೇಳಿದರಂತೆ, “ದೊರೆಸ್ವಾಮಿ ತಮ್ಮ ಕ್ಷೇತ್ರದಲ್ಲಿ ಹೊಂದಿರುವ ಪ್ರಭುತ್ವದ ಒಂದು ಭಾಗದಷ್ಟಾದರೂ ನನಗೆ ನನ್ನ ಕ್ಷೇತ್ರದಲ್ಲಿ ಇದ್ದಿದ್ದರೆ ನಾನೊಬ್ಬ ಅದೃಷ್ಟಶಾಲಿ ಎಂದುಕೊಳ್ಳುತ್ತಿ¨ªೆ. ನಾನು ಅವರ ವಿದ್ವತ್ತಿಗೆ ಗೆೌರವ ಸಲ್ಲಿಸುತಿದ್ದೇನೆ’ ಎಂದು. ಮತ್ತೆ ಈ ಶಿಷ್ಯ ದೊರೆಸ್ವಾಮಿಯೇನು ಕಡಿಮೆ… ಅದರ ಮರುವಾರ ಕೇಶವನ್ ಬೆಳಗ್ಗೆ ಕಿಟಕಿಯಲ್ಲಿ ನೋಡುತ್ತಿ¨ªಾರೆ… ಟಾಂಗಾದಿಂದ ವೀಣೆ ಹಿಡಿದು ಕೆಳಗಿಳಿಯುತ್ತಿದ್ದರೆ, ಜೊತೆಯಲ್ಲಿ ಮೃದಂಗ ಹಿಡಿದವರೊಬ್ಬರು, ತಂಬೂರಿ ಹಿಡಿದವರೊಬ್ಬರು. ಗುರುಗಳ ಮನೆಯಲ್ಲಿ ಮೂರು ಗಂಟೆ ಕಾಲ ಸೊಗಸಾಗಿ ವೀಣೆ ನುಡಿಸಿ ಗುರುದಕ್ಷಿಣೆ ಸಲ್ಲಿಸಿದರಂತೆ !
ಹಿರಿಯ ವಾದಕ ಟಿ. ಚೌಡಯ್ಯನವರು ಯುವಕ ದೊರೆಸ್ವಾಮಿಯವರೊಂದಿಗೆ ವೀಣೆ – ಪಿಟೀಲು ಜುಗಲ್‌ಬಂದಿಯನ್ನು ಏರ್ಪಡಿಸುತ್ತಿದ್ದರು. ದೊರೆಸ್ವಾಮಿಯವರ ವೀಣಾ ವಾದನದ ಶಕ್ತಿಗೆ ಮಾರುಹೋದ ಚೌಡಯ್ಯನವರು ಎಷ್ಟೋ ಸಲ ಜುಗಲ್‌ಬಂದಿಯಲ್ಲಿ ಕೊನೆಗೆ ಸೆಂಟರ್‌ಸ್ಟೇಜ್ ಅನ್ನು ದೊರೆಸ್ವಾಮಿಯವರಿಗೆ ಬಿಟ್ಟುಕೊಟ್ಟು, ಎಡಕ್ಕೆ ಸಹವಾದಕನ ಜಾಗಕ್ಕೆ ಸರಿಯುತ್ತಿದ್ದರಂತೆ. ನಂತರದ ವರ್ಷಗಳಲ್ಲಿ ದೊರೆಸ್ವಾಮಿಯವರು ಪಿಟೀಲು ವಾದಕರಾದ ಲಾಲ್‌ಗುಡಿ ಜಯರಾಮನ್, ಟಿ. ಎನ್. ಕೃಷ್ಣನ್ ಮತ್ತು ಎಂ. ಎಸ್. ಗೋಪಾಲಕೃಷ್ಣನ್, ಗಾಯಕರಾದ ಎಂ. ಬಾಲಮುರಳಿಕೃಷ್ಣ ಮತ್ತು ಪಾಲಕ್ಕಾಡ್ ಕೆ. ವಿ. ನಾರಾಯಣಸ್ವಾಮಿ ಇನ್ನಿತರ ಹಿರಿಯ ಕಲಾವಿದರೊಂದಿಗೆ ಜುಗಲ್‌ಬಂದಿ ನೀಡಿದರು.
ಹಿಂದೂಸ್ತಾನಿ ಸಂಗೀತಗಾರರಾದ ಮಲ್ಲಿಕಾರ್ಜುನ ಮನಸೂರ್, ಉಸ್ತಾದ್ ಅಲಿ ಅಕºರ್‌ಖಾನ್ ಮತ್ತು ಉಸ್ತಾದ್ ಅಮ್ಜದ್ ಅಲಿ ಖಾನ್ ಜೊತೆಗೆ ನೀಡಿದ ಜುಗಲ್‌ಬಂದಿ ಕಾರ್ಯಕ್ರಮಗಳು ರಸಿಕರ ಮನಗೆದ್ದಿದ್ದವು. ಅವರ ನಾದಶುದ್ಧತೆ, ಆಕರ್ಷಕ ಸ್ವರಪ್ರಸ್ತಾರ, ಭವ್ಯವಾದ ತಾನಂ, ರಾಗವಿಸ್ತಾರ ಗುಣಗಳನ್ನು ಹಿರಿಯ ವಾದಕರು ಮತ್ತು ಗಾಯಕರು ತುಂಬ ಮೆಚ್ಚಿಕೊಳ್ಳುತ್ತಿದ್ದರು. ಜೊತೆಗೆ ಯಾವುದೇ ಹಮ್ಮುಬಿಮ್ಮಗಳಿರದ, ಪ್ರದರ್ಶನಪ್ರಿಯತೆಯಿಲ್ಲದ ದೊರೆಸ್ವಾಮಿಯವರನ್ನು ಎಲ್ಲರೂ ಅಪಾರವಾಗಿ ಗೌರವಿಸುತ್ತಿದ್ದರು.
ಮುಂದೆ 1955ರಲ್ಲಿ ಬೆಂಗಳೂರು ಆಕಾಶವಾಣಿ ಆರಂಭಗೊಂಡಾಗ ಭಾರತ ಸರ್ಕಾರವು ಮ್ಯೂಸಿಕ್ ಪೊ›ಡ್ನೂಸರ್ ಆಗಿ ಕಾರ್ಯನಿರ್ವ ಹಿಸುವಂತೆ ಕೇಳಿಕೊಂಡಿತು. ಮೈಸೂರಿನ ಆಪ್ತ ಕಲಾವಲಯವನ್ನು ಬಿಟ್ಟು ಹೋಗುವುದು, ಜೊತೆಗೆ ಕೆಲಸದ ಒತ್ತಡವು ಸಂಗೀತ ಸಾಧನೆಯ ಮೇಲೆ ಪರಿಣಾಮ ಬೀರಿದರೆ ಎಂಬ ಆತಂಕ, ಹೀಗೆ ಸ್ವಲ್ಪ ಹಿಂಜರಿಕೆಯೆನಿ °ಸಿದರೂ, ಆ ಕೆಲಸದಿಂದ ದೊರೆಯುವ ಅಪಾರ ಸೃಜನಶೀಲ ಅವಕಾಶಗಳನ್ನು ಮನಗಂಡ ದೊರೆಸ್ವಾಮಿ ಯವರು ಸಂತೋಷದಿಂದಲೇ ಬೆಂಗಳೂರಿಗೆ ಬಂದರು. ಮುಂದೆ 1980ರವರೆಗೂ ಅವರು ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದರು.
ಲೇಖನದ ಆರಂಭದ ಆರ್. ಕೆ. ನಾರಾಯಣ್ ಅವರ ಅನುಭವಕ್ಕೆ ಮತ್ತೆ ಬರೋಣ. ದೊರೆಸ್ವಾಮಿಯವರು ಆರ್‌ಕೆಯವರ ಕಿರಿಯ ಸಹೋದರನ ಸಹಪಾಠಿ. ಆರ್‌ಕೆಯವರು ದೊರೆಸ್ವಾಮಿಯವರ ವೀಣಾವಾದವನ್ನು ಕೇಳಿ, ಮೆಚ್ಚಿಕೊಂಡ ನಂತರ ಅವರ ತಮ್ಮ ಒಮ್ಮೆ ದೊರೆಸ್ವಾಮಿಯವರನ್ನು ಮನೆಗೆ ಕರೆದುಕೊಂಡು ಭೇಟಿ ಮಾಡಿಸುತ್ತಾರೆ.
ದೊರೆಸ್ವಾಮಿಯವರಿಗಿಂತ ಆರ್‌ಕೆಯವರು ಹದಿನಾಲ್ಕು ವರ್ಷ ದೊಡ್ಡವರು. ಇಂಗ್ಲಿಶ್‌ನಲ್ಲಿ ಬರಹಗಾರ ಎಂದು ಛಾಪು ಮೂಡಿಸಲು ಹೆಣಗುತ್ತಿದ್ದ ಸಮಯವದು. ನಂತರದ ವರ್ಷಗಳಲ್ಲಿ ವಯಸ್ಸಿನ ಅಂತರ ಕಾಡದಂತೆ ಇಬ್ಬರೂ ತುಂಬ ಆತ್ಮೀಯ ಸ್ನೇಹಿತರಾದರು.
“”ದೊರೆಸ್ವಾಮಿಯವರು ಮಧ್ಯಾಹ್ನ ಮೂರು ಗಂಟೆಗೆ ನಮ್ಮ ಮನೆಗೆ ಬಂದು ವೀಣೆ ನುಡಿಸ್ತಾಕೂರೋರು, ನಾನು ಬರೀತಾ ಕೂತಿರುತ್ತಿ¨ªೆ. ಆಮೇಲೆ ಸ್ವಲ್ಪ ಹೊತ್ತು ಆತ ನುಡಿಸೋನು, ನಾನು ನನ್ನ ಇಷ್ಟದಂತೆ ನುಡಿಸಾ ¤ಇ¨ªೆ. ಆಮೇಲೆ ನಾನು ಇಂಗ್ಲಿಶ್ ಹೇಳಿಕೊಡ್ತಿ¨ªೆ. ಇಂಗ್ಲಿಶ್ ಅನ್ನು ಭಾರತೀಯ ಭಾಷೆಯಲ್ಲಿ ಹೇಳಿಕೊಡಬೇಕು ಅನ್ನೋದು ನನ್ನ ನಿಲುವು. ನಾನುಆತಂಗೆ ಕಠಿಣ ಎನ್ನಿಸಿದ ಕೀಟ್ಸ್ ಇನ್ನಿತರರ ಪದ್ಯಗಳನ್ನು ತಮಿಳು ಮತು ಕನ್ನಡದಲ್ಲಿ ಹೇಳಿಕೊಡ್ತಿ¨ªೆ. ದೊರೆಸ್ವಾಮಿ ಇಂಗ್ಲಿಶ್ ಪದ್ಯಗಳನ್ನು ಆಸ್ವಾದಿಸಲಿಕ್ಕೆ ಶುರು ಮಾಡಿದ, ಎಷ್ಟರಮಟ್ಟಿಗೆ ಎಂದರೆ ಆಮೇಲೆ ಹೇಳ್ತಿದ್ದ, ಕೀಟ್ಸ್‌ಗೆ ಎಷ್ಟೊಂದು ಮನೋಧರ್ಮವಿದೆ ಅಂತ!” ಎಂದು ಒಮ್ಮೆ ಆರ್‌ಕೆಯವರು ಬರೆದುಕೊಂಡಿದ್ದರು. ಆರ್‌ಕೆಯವರ ಆರಂಭದ ಇಂಗ್ಲಿಶ್ ಕಾದಂಬರಿಗಳ ಮೊದಲ ಓದುಗರು ದೊರೆಸ್ವಾಮಿಯವರಾಗಿದ್ದರು. ಹಾಗೆಯೇ ದೊರೆಸ್ವಾಮಿಯವರಿಂದ ವೀಣೆಯ ಪಾಠಗಳನ್ನು ಹೇಳಿಸಿಕೊಂಡಿದ್ದ ಆರ್‌ಕೆಯವರು ನಂತರ ಮಗಳು ಹೇಮಾಳಿಗೂ ಅವರಿಂದಲೇ ವೀಣೆಯ ಪಾಠ ಹೇಳಿಸಿದ್ದರು.
ವೀಣಾ ನಾದದಲ್ಲಿಯೇ ಅವರು ಎಲ್ಲ ಬಗೆಯ ಸೌಖ್ಯವನ್ನು ಅನುಭವಿಸಿದವರು ಮತ್ತು ಆ ಸೌಖ್ಯವನ್ನು ಕೇಳುಗರಿಗೂ ದಾಟಿಸಿದವರು. ವೀಣೆಗೆ ಇನ್ನೊಂದು ಅನ್ವರ್ಥನಾಮವಿದ್ದರೆ ಅದು ಖಂಡಿತವಾಗಿಯೂ ದೊರೆಸ್ವಾಮಿಯವರೇ… ಮತ್ತು ವೀಣೆಗೆ ನಿಜಾರ್ಥದ ದೊರೆಯೇನಾ ದರೂ ಇದ್ದರೆ ಅದು ಕೂಡ ಖಂಡಿತವಾಗಿಯೂ ದೊರೆಸ್ವಾಮಿಯವರೇ!
– ಸುಮಂಗಲಾ