Advertisement

ಪ್ರಳಯದ ಸರಿಗಮ

03:22 PM Oct 13, 2018 | Team Udayavani |

ಬೆಂಗಳೂರಿನಲ್ಲಿ ಪ್ರಳಯ ನೋಡಿದ್ದೀರಾ? ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಇದು ಹವಾಮಾನ ಮುನ್ಸೂಚನೆಯ ವರದಿಯಲ್ಲ. ಚಾಮರಾಜಪೇಟೆಯ ಭಂಡಾರಿ ಜೈನ್‌ ಕಾಲೇಜಿನಲ್ಲಿ ಉಪ ಪ್ರಾಂಶುಪಾಲೆಯಾಗಿರುವ ವೀಣಾ ರವೀಂದ್ರನಾಥ್‌ ಮನೆಯಲ್ಲೇ ಪ್ರಳಯವನ್ನು ರೂಪಿಸಿದ್ದಾರೆ. ದಸರಾ ಹಬ್ಬಕ್ಕೆ ಗೊಂಬೆ ಕೂರಿಸುತ್ತಿರುವ ವೀಣಾ ಅವರು ಪ್ರತಿ ವರ್ಷ ಹೊಸ ಹೊಸ ಪರಿಕಲ್ಪನೆಯಡಿ ಗೊಂಬೆಗಳನ್ನು ಕೂರಿಸುತ್ತಾರೆ. ಈ ಬಾರಿ ಭಾಗವತ ಪುರಾಣದ ದೃಶ್ಯಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಮನೆಯಲ್ಲೇ ಸೃಷ್ಟಿಸಿದ್ದಾರೆ. ಸಿನಿಮಾಗಳಲ್ಲಿ, ಅÂನಿಮೇಷನ್‌ಗಳಲ್ಲಿ ದೃಶ್ಯಗಳನ್ನು ಸ್ಟೋರಿಬೋರ್ಡ್‌ ಸಹಾಯದಿಂದ ಹೇಗೆ ಪ್ರಸ್ತುತ ಪಡಿಸುತ್ತಾರೋ ಅದೇ ಮಾದರಿಯಲ್ಲಿ ಭಾಗವತ ಪುರಾಣ ವೀಣಾ ಅವರ ಮನೆಯಲ್ಲಿ ಜೀವ ತಳೆದಿದೆ. ಸುಮಾರು 70 ದೃಶ್ಯಗಳನ್ನು ಗ್ಯಾಲರಿ ಮಾದರಿಯಲ್ಲಿ ಅವರು ಸಾದರಪಡಿಸಿದ್ದಾರೆ. ಗೆಳೆಯರು, ನೆಂಟರಿಷ್ಟರಿಗೆ ಪುರಾಣ ಕತೆಗಳನ್ನು ಜ್ಞಾಪಿಸುವ ಸಲುವಾಗಿ ಶುರುಮಾಡಿಕೊಂಡ ಹವ್ಯಾಸ ಇಂದು ದೊಡ್ಡರೂಪ ಪಡೆದಿದೆ. ಇದನ್ನು ನೋಡಲು ಸಾರ್ವಜನಿಕರೂ ಬರಬಹುದು. 

Advertisement

ಕಳೆದ ಬಾರಿ ಏನಿಲ್ಲವೆಂದರೂ ಸಾವಿರ ಮಂದಿ ಮನೆಗೆ ಬಂದಿದ್ದರು. ಬಂದವರಿಗೆ ಮಗಳು ಪುರಾಣ ಕತೆ ವಿವರಿಸುತ್ತಾಳೆ, ಆಮೇಲೆ ಶಾಸ್ತ್ರ  ಪ್ರಕಾರ ತಾಂಬೂಲ ಕೊಟ್ಟು ಕಳಿಸುತ್ತೇವೆ. ಸುಮಾರು 2 ತಿಂಗಳುಗಳ ಕಾಲ ಕುಟುಂಬದ ನಾಲ್ಕೂ ಮಂದಿ ಗೊಂಬೆ ತಯಾರಿಯಲ್ಲಿ ತೊಡಗುತ್ತೇವೆ. ನೋಡಿದವರು ಚೆನ್ನಾಗಿದೆ ಅಂದಾಗ ಮಾಡಿದ್ದಕ್ಕೂ ಸಾರ್ಥಕ ಅನ್ನಿಸುತ್ತೆ.

● ವೀಣಾ ರವೀಂದ್ರನಾಥ್‌

ಎಲ್ಲಿ?: ನಂ.8, ಕಾಳಪ್ಪ ಬ್ಲಾಕ್‌, ಗಾಂಧಿ ಬಜಾರ್‌ ಬಳಿ, ಬಸವನಗುಡಿ

Advertisement

Udayavani is now on Telegram. Click here to join our channel and stay updated with the latest news.

Next