7 ರಿಂದ ಪ್ರಾರಂಭಗೊಂಡಿದ್ದು, ಈ ಶಾಸ್ತ್ರೋಕ್ತ ವೈದಿಕ ಶಿಬಿರದಲ್ಲಿ ಸುಮಾರು 35ಕ್ಕೂ ಹೆಚ್ಚು ಜಂಗಮವಟುಗಳು
ಸದುಪಯೋಗ ಪಡೆದುಕೊಳ್ಳುತ್ತಿದ್ದು, ಸಿಂಧನೂರಿನ ವಿದ್ವಾನ್ ಶರಣಯ್ಯ ಹಿರೇಮಠ ವಟುಗಳಿಗೆ ವೈದಿಕ ಪಾಠ
ಬೋಧಿಸುತ್ತಿದ್ದಾರೆ.
Advertisement
ಈ ಶಾಸ್ತ್ರೋಕ್ತ ವೈದಿಕ ಶಿಬಿರವು ಮೇ 20ರಂದು ಕಸಬಾಜಂಬಗಿಯ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾರೋಪಗೊಳ್ಳಲಿದ್ದು, ಈ ಪ್ರಯುಕ್ತ ಅಂದು ಬ್ರಾಹ್ಮಿ ಮುಹೂರ್ತದಲ್ಲಿ ಯೋಗ್ಯ ವಯಸ್ಸಿನ ಜಂಗಮವಟುಗಳಿಗೆ, ಮಂಡ್ಯ ಜಿಲ್ಲೆಯ ಹಲಗೂರಿನ ಬ್ರಹನ್ಮಠಧ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳುಇವರಿಂದ ಉಚಿತ ಅಯ್ನಾಚಾರ, ಮಂತ್ರೋಪದೇಶ ಹಾಗೂ ಲಿಂಗದೀಕ್ಷಾ ಸಮಾರಂಭವು ನೆರವೇರಲಿದೆ. ಆಸಕ್ತ
ಜಂಗಮರು ವಟುಗಳೊಂದಿಗೆ ನಂದೇಶ್ವರ ಆಶ್ರಮ, ಮಂಟೂರ ರೋಡ, ಮುಧೋಳ ಇಲ್ಲಿಗೆ ಒಂದು ದಿನ
ಮುಂಚಿತವಾಗಿ ಬರಬೇಕು ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಸಬಾಜಂಬಿಯ ರಾಜಶೇಖರ ದೇವರು, ಲೋಕಾಪುರದ ಹಿರೇಮಠದ ಚಂದ್ರಶೇಖರ ಸ್ವಾಮಿಗಳು, ಸಿದ್ದು ಗೋವಿಂದಪೂರಮಠ ಹಾಗೂ ಮಹಾದೇವಯ್ನಾ ವಸ್ತ್ರದ 974048945- 9945380921 ಸಂಪರ್ಕಿಸಬಹುದಾಗಿದೆ.