Advertisement

ಸೈಕಲ್‌ನಲ್ಲೇ ಏಕಾಂಗಿಯಾಗಿ ವಿಶ್ವ ಸುತ್ತುವಳು ವೇದಾಂಗಿ

06:00 AM Jan 01, 2018 | Team Udayavani |

ಮುಂಬೈ: ಪುಣೆಯ 19 ವರ್ಷದ ಈ ಹುಡುಗಿ 2018ರಲ್ಲಿ ನೂತನ ದಾಖಲೆ ಬರೆಯಲು ಸಜ್ಜಾಗಿದ್ದಾಳೆ. ತನ್ನ ಕನಸಿನ ಬೆನ್ನು ಹತ್ತಿ ಈಕೆ ಬರೋಬ್ಬರಿ 29 ಸಾವಿರ ಕಿ.ಮೀ.ನಷ್ಟು ಪ್ರಯಾಣ ಬೆಳೆಸಲಿದ್ದಾಳೆ. ಅದರಲ್ಲೇನು ವಿಶೇಷ ಎಂದು ಕೇಳುತ್ತೀರಾ? ಇವಳು ಈ ದೀರ್ಘ‌ ಪ್ರಯಾಣ ನಡೆಸುತ್ತಿರುವುದು ಸೈಕಲ್‌ನಲ್ಲಿ!

Advertisement

ಹೌದು, ವೇದಾಂಗಿ ಕುಲಕರ್ಣಿ ಏಕಾಂಗಿಯಾಗಿ ಬೈಸಿಕಲ್‌ನಲ್ಲಿ ಇಡೀ ವಿಶ್ವವನ್ನೇ ಸುತ್ತಲಿದ್ದಾಳೆ. ಇದೇ ವರ್ಷದ ಜೂನ್‌ ತಿಂಗಳಿಂದ ಇವಳ ಯಾತ್ರೆ ಆರಂಭವಾಗಲಿದೆ. 130 ದಿನಗಳ ಕಾಲ 29 ಸಾವಿರ ಕಿ.ಮೀ. ದೂರವನ್ನು ಈಕೆ ಕ್ರಮಿಸಲಿದ್ದಾಳೆ. ಇದನ್ನು ಪೂರ್ಣಗೊಳಿಸಿ ದಾಖಲೆ ಮಾಡಬೇಕು ಎಂಬುದೇ ವೇದಾಂಗಿಯ ಗುರಿ.

ದಕ್ಷಿಣ ಅಮೆರಿಕ ಮತ್ತು ಅಂಟಾಕ್ಟಿìಕಾ ಸೇರಿದಂತೆ ಬೇರೆಲ್ಲ ಖಂಡಗಳಿಗೂ ಈಕೆಯ ಪಯಣ ಸಾಗಲಿದೆ. ಈಗಾಗಲೇ ವೇದಾಂಗಿ ಮುಂಬೈನಿಂದ ನವದೆಹಲಿಗೆ 1,400 ಕಿ.ಮೀ. ತರಬೇತಿ ಪಯಣ ನಡೆಸಿದ್ದಾಳೆ. ಜೂನ್‌ ತಿಂಗಳಲ್ಲಿ ಆಸ್ಟ್ರೇಲಿಯಾದ ಪರ್ತ್‌ನಿಂದ ಸೈಕಲ್‌ ಪ್ರಯಾಣ ಆರಂಭಿಸಲಿದ್ದಾಳೆ ವೇದಾಂಗಿ. 2014ರಲ್ಲಿ ಪೌಲಾ ಗಿಯಾನೊಟ್ಟಿ ಎಂಬವರು 144 ದಿನಗಳಲ್ಲಿ ಸೈಕಲ್‌ ಮೂಲಕ ವಿಶ್ವ ಸುತ್ತಿದ್ದು ದಾಖಲೆಯಾಗಿದೆ. ಪುರುಷರ ವಿಭಾಗದಲ್ಲಿ ಮಾರ್ಕ್‌ ಬ್ಯೂಮಾಂಟ್‌ ಎಂಬವರು 78 ದಿನಗಳಲ್ಲಿ ಪ್ರಯಾಣ ಪೂರೈಸಿ ದಾಖಲೆ ಬರೆದಿದ್ದಾರೆ. ಆದರೆ, ಇಲ್ಲಿಯವರೆಗೆ ಯಾಎವೊಬ್ಬ ಭಾರತೀಯನೂ ಈ ದಾಖಲೆ ಮುರಿಯುವ ಸಾಹಸಕ್ಕೆ ಕೈಹಾಕಿಲ್ಲ. ಈ ನಿಟ್ಟಿನಲ್ಲಿ ಈಗ ವೇದಾಂಗಿ ಹೆಜ್ಜೆಯಿಟ್ಟಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next