Advertisement

ವೇದ ಸುಳ್ಳಾದರು ವಚನ ಸುಳ್ಳಾಗದು: ಕೆ.ಜ್ಯೋತಿ

09:04 PM Apr 10, 2019 | Lakshmi GovindaRaju |

ಮೈಸೂರು: ವಚನಕಾರರ ಕಾಲಘಟ್ಟದಲ್ಲಿ ಸಮಾಜದ ರೀತಿ ನೀತಿಗಳನ್ನು ಸರಿದೂಗಿಸುವ ಸಾಹಿತ್ಯಗಳು ಮೂಡಿಬರುತ್ತಿದ್ದವು. ಅಂತಹ ವಚನಗಳನ್ನು ನೋಡಿದಾಗ ವೇದ ಸುಳ್ಳಾದರು ವಚನ ಸುಳ್ಳಾಗದು ಎಂದು ಅನಿಸುತ್ತದೆ ಎಂದು ಮೈಸೂರು ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ.ಜ್ಯೋತಿ ಹೇಳಿದರು.

Advertisement

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ದೇವರ ದಾಸೀಮಯ್ಯ ಜಯಂತಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇವರ ದಾಸೀಮಯ್ಯ, ಅಕ್ಕ ಮಹಾದೇವಿ, ಬಸವಣ್ಣ ಹೀಗೆ ಹಲವಾರು ವಚನ ಸಾಹಿತಿಗಳು ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದರು.ಅದೊಂದು ಕ್ರಾಂತಿಕಾರಕ ಕಾಲಘಟ್ಟವಾಗಿತ್ತು, ಸಾಹಿತ್ಯವೆಂದರೆ ಬರೀ ಪ್ರತಿಭೆ, ಕಾವ್ಯ, ಸಾಂಪ್ರದಾಯಿಕ ಶೈಲಿ ಮಾತ್ರವಲ್ಲ ಅದೊಂದು ಜನರ ಅಂಕು-ಡೊಂಕುಗಳನ್ನು ತಿದ್ದುವ ಸಾಹಿತ್ಯಗಳು ಎಂಬುದನ್ನು ತೋರಿಸಿಕೊಟ್ಟವರು ವಚನ ಸಾಹಿತಿಗಳು ಎಂದರು.

ವಚನ ಸಾಹಿತ್ಯವು ನಮ್ಮ ಕನ್ನಡ ಸಾಹಿತ್ಯಕ್ಕೆ ಒಂದು ಕೊಡುಗೆಯಾಗಿದೆ. ಇಂತಹ ಸಾಹಿತ್ಯಗಳನ್ನು ಓದುವುದನ್ನು ಕಡ್ಡಾಯ ಮಾಡಬೇಕು ಹಾಗಾದರೆ ಸಾಹಿತ್ಯ ಉಳಿಯುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಆರ್‌. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next