Advertisement

ವೇದ ಅರಿವು ನಮ್ಮ ಕರ್ತವ್ಯ

11:13 AM Jan 23, 2019 | Team Udayavani |

ಯಾದಗಿರಿ: ವೇದಗಳು ಮತ್ತು ಉಪನಿಷತ್ತುಗಳ ಅಧ್ಯಯನದಿಂದ ಮನುಷ್ಯನಿಗೆ ಮೋಕ್ಷ ಪ್ರಾಪ್ತವಾಗುತ್ತದೆ ಎಂದು ಪಂ. ನರಸಿಂಹಾಚರ್ಯ ಪುರಾಣಿಕ ಹೇಳಿದರು. ನಗರದ ಮಾತಾಮಾಣಿಕೇಶ್ವರ ವೀರಾಂಜನೆ ದೇವಸ್ಥಾನದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಶಂಕರ ಸೇವಾ ಸಮಿತಿಯಿಂದ ಭಾಷ್ಯಾಮೃತವಾಹಿನಿ ಸಪ್ತಾಹ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶಂಕರಾಚಾರ್ಯರು, ರಾಮಾನುಜಾ ಚಾರ್ಯರು ಮತ್ತು ಮಧ್ವಾಚಾರ್ಯರು ವೇದ ಮತ್ತು ಉಪನಿಷತ್ತುಗಳಿಗೆ ಭಾಷ್ಯೆಯನ್ನು ಬರೆದಿದ್ದಾರೆ. ತದ ನಂತರದಲ್ಲಿ ಅನೇಕ ಪಂಡಿತರು ಸಹ ಭಾಷ್ಯೆ ಬರೆದಿರುವುದನ್ನು ಕಾಣುತ್ತೇವೆ. ಎಲ್ಲ ಕಲೆಗಳಿಗೆ ವೇದವೇ ತಳಹದಿಯಾಗಿದ್ದರಿಂದ ಅದನ್ನು ಅರ್ಥಾನುಸಹಿತವಾಗಿ ಕಲಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರರಾವ್‌ ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಂ. ರಾಘವೇಂದ್ರಾಚಾರ್ಯ ಬಳಿಚಕ್ರ, ಶಂಕರ ಸೇವಾ ಸಮಿತಿ ಉಪಾಧ್ಯಕ್ಷ ಕಿಶನರಾವ ಕುಲಕರ್ಣಿ ಲಾಡ್ಲಪುರ, ಸಮಿತಿ ಸಂಚಾಲಕ ರವೀಂದ್ರ ಕುಲಕರ್ಣಿ ಇದ್ದರು.

ಶ್ರೀಕಾಂತಾಚಾರ್ಯ ಹಂದ್ರಿಕಿ, ಗುಂಡೇರಾವ್‌ ಕುಲಕರ್ಣಿ, ಕಾಶಿನಾಥ ಯಾದಗಿರಿ, ಶಂಕರ ಕುಲಕರ್ಣಿ, ಕೃಷ್ಣಮೂರ್ತಿ ಕುಲಕರ್ಣಿ, ಸುಧಾಕರ ಕುಲಕರ್ಣಿ ಹಾಗೂ ಮಹಿಳಾ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು. ಅನಿಲ ದೇಶಪಾಂಡೆ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next