Advertisement
ಭಾನುವಾರ, ಮಾಯಾವತಿ ಅವರು ತಮ್ಮ ಸೋದರಳಿಯ ಮತ್ತು ಬಿಎಸ್‌ಪಿ ರಾಷ್ಟ್ರೀಯ ಸಂಯೋಜಕ ಆಕಾಶ್ ಆನಂದ್ ಅವರೊಂದಿಗೆ ಆರ್ಮ್‌ಸ್ಟ್ರಾಂಗ್ ಅವರಿಗೆ ಅಂತಿಮ ನಮನ ಸಲ್ಲಿಸಲು ಚೆನ್ನೈಗೆ ಆಗಮಿಸಿದ್ದರು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ತಮಿಳುನಾಡಿನ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿದರು. ಆರ್ಮ್‌ಸ್ಟ್ರಾಂಗ್‌ನನ್ನು ಹತ್ಯೆ ಮಾಡಿರುವ ರೀತಿ ನೋಡಿದರೆ ಕಾನೂನು ಸುವ್ಯವಸ್ಥೆ ಇಲ್ಲ.ಪ್ರಮುಖ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
Related Articles
Advertisement
ಜುಲೈ 5 ರಂದು 52 ವರ್ಷದ ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಪೆರಂಬೂರ್ ಪ್ರದೇಶದಲ್ಲಿ ಅವರ ಮನೆಯ ಹೊರಗೆ ಕೆಲವು ಅಪರಿಚಿತರು ಹತ್ಯೆಗೈದಿದ್ದರು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಾಲ್ವರು ದಾಳಿಕೋರರು ಆಹಾರ ವಿತರಣಾ ಏಜೆಂಟ್‌ಗಳ ವಸ್ತ್ರ ಧರಿಸಿದ್ದರು ಎಂದು ಕಂಡು ಬಂದಿದೆ. ಹತ್ಯೆಗೆ ಸಂಬಂಧಿಸಿದಂತೆ ಕನಿಷ್ಠ ಎಂಟು ಶಂಕಿತರನ್ನು ಬಂಧಿಸಲಾಗಿದೆ.
ದೇಹ ಹೂಳುವ ಮನವಿ ವಜಾ
ಪಾರ್ಥಿವ ಶರೀರವನ್ನು ಪಕ್ಷದ ಕಚೇರಿಯಲ್ಲಿ ಹೂಳ ಬೇಕು ಎಂಬ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. ಕಚೇರಿ ಸ್ಥಳ ಅತ್ಯಂತ ಜನನಿಬಿಡ, ವಸತಿ ಪ್ರದೇಶ. ಹೀಗಾಗಿ, ಈ ಕೋರಿಕೆಗೆ ಸಮ್ಮತಿಸಲು ಸಾಧ್ಯ ವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಚೆನ್ನೈ ಸಮೀಪದ ತಿರುವಳ್ಳುವರ್ ಜಿಲ್ಲೆಯ ಭೂಮಿಯಲ್ಲಿ ಬಿಎಸ್‌ಪಿ ನಾಯಕನನ್ನು ಮಣ್ಣುಮಾಡಬಹುದು ಎಂದಿದೆ. ಪಕ್ಷದ ಕಚೇರಿಯಲ್ಲೇ ಹೂಳಲು ಅವಕಾಶ ನೀಡಬೇಕು ಎಂದು ಆರ್ಮ್ಸ್ಟ್ರಾಂಗ್ ಪತ್ನಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.