Advertisement

ಶಾಲಾವರಣಕ್ಕೆ ವಠಾರ ಶಾಲೆ ಶಿಫ್ಟ್‌

02:13 PM Aug 03, 2020 | Suhan S |

ಕಂಪ್ಲಿ: ಪಟ್ಟಣದ ಎಂ.ಡಿ.ಕ್ಯಾಂಪ್‌ನ ಸರ್ಕಾರಿ ಕಿ.ಪ್ರಾ.ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಠಾರ ಶಾಲೆ ಆರಂಭಿಸಿದ್ದು, ಕೋವಿಡ್ ಭೀತಿಯಿಂದ ವಠಾರ ಶಾಲೆಯನ್ನು ವಠಾರದಿಂದ ಶಾಲೆಯ ಆವರಣಕ್ಕೆ ಸ್ಥಳಾಂತರಿಸಲಾಗಿದೆ.

Advertisement

ಆರ್ಥಿಕವಾಗಿ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯವೂ ಸೇರಿದಂತೆ ಅಲೆಮಾರಿಗಳೇ ಅಧಿಕ ಸಂಖ್ಯೆಯಲ್ಲಿ ವಾಸಿಸುವ ಕ್ಯಾಂಪ್‌ನಲ್ಲಿ ಶಾಲೆ ಆರಂಭದಿಂದ ಮಕ್ಕಳು ಪಾಲಕರಿಗೆ ಸಂತಸ ತಂದಿತ್ತು. ಆದರೆ ಪಕ್ಕದ ಓಣಿಯಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದರಿಂದ ಸೀಲ್‌ಡೌನ್‌ ಮಾಡಿರುವುದರಿಂದ ಶಾಲೆಯನ್ನು ಶುಕ್ರವಾರ ಶಾಲಾವರಣಕ್ಕೆ ಸ್ಥಳಾಂತರ ಮಾಡಲಾಗಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ 15ರಿಂದ 20 ವಿದ್ಯಾರ್ಥಿಗಳಿದ್ದು, ಮಾಸ್ಕ್, ದೈಹಿಕ ಅಂತರ ಪಾಲಿಸಿ ಪ್ರತಿದಿನ ಒಂದೂವರೆ ಗಂಟೆ ಪಾಠ ಪ್ರವಚನ ಮಾಡಲಾಗುತ್ತಿದೆ. ಹೀಗಾಗಿ ಶಾಲೆಯ ಸ್ಥಳಾಂತರಕ್ಕೆ ಪಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕ್ಯಾಂಪ್‌ನಲ್ಲಿ ಸ್ವತ್ಛತೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಶಾಲೆಯಲ್ಲಿ ಬೋರ್ಡ್‌, ಪ್ಲಾಕ್‌ಕಾರ್ಡ್‌ ಇತರೆ ಕಲಿಕಾ ಸಾಧನಗಳನ್ನು ತೋರಿಸಿ ಪರಿಣಾಮಕಾರಿಯಾಗಿ ಬೋಧಿಸಬಹುದು. ಹೀಗಾಗಿ ಮಕ್ಕಳ ಹಿತದೃಷ್ಟಿಯಿಂದ ಪಾಲಕರು ಸಭೆ ನಡೆಸಿ ಶಿಕ್ಷಣ ಇಲಾಖೆ ಗಮನಕ್ಕೆ ತಂದಲ್ಲಿ ಶಾಲೆಯಲ್ಲಿಯೇ ಪಾಠ ಹೇಳಬಹುದು ಎನ್ನುತ್ತಾರೆ ಮುಖ್ಯ ಶಿಕ್ಷಕರಾದ ಎ.ನಾಗರಾಜ ಮತ್ತು ಸಹ ಶಿಕ್ಷಕಿ ಎಸ್.ಸರಸ್ವತಿ.

Advertisement

Udayavani is now on Telegram. Click here to join our channel and stay updated with the latest news.

Next