Advertisement

ಸುವರ್ಣ ವಿಧಾನಸೌಧದಲ್ಲಿ ಕುರಿಗಳ ಸಭೆ: ಪೊಲೀಸರ ಅಡ್ಡಿ, ವಾಟಾಳ್ ನಾಗರಾಜ್ ಬಂಧನ

03:12 PM Oct 10, 2019 | Mithun PG |

ಬೆಳಗಾವಿ: ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲ ಅಧಿವೇಶನವನ್ನು ರದ್ದು ಪಡಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕುರಿಗಳ ಸಭೆ ನಡೆಸಲು ಉದ್ದೇಶಿಸಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್  ಅವರನ್ನು ಹಿರೇಬಾಗೇವಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಸಚಿವರು, ಶಾಸಕರನ್ನು ಕುರಿಗಳಿಗೆ ಹೋಲಿಕೆ ಮಾಡಿ ಸುವರ್ಣ ವಿಧಾನಸೌಧದಲ್ಲಿ ಕುರಿಗಳನ್ನು ತಂದು ಪ್ರತಿಭಟನೆ ನಡೆಸಲು ಮುಂದಾಗಿದ್ದ ವಾಟಾಳ್ ನಾಗರಾಜ್  ಅವರನ್ನು ಬಂಧಿಸಿ ಕುರಿಗಳ ಸಭೆಗೆ  ನಿರ್ಭಂದ ಹೇರಲಾಗಿದೆ.

ಈ ವೇಳೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಪ್ರತಿ ವರ್ಷ ಗಡಿ ಜಿಲ್ಲೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಸುವುದು ವಾಡಿಕೆ ಆಗಿದೆ. ಆದರೆ ಈ ಸಲ ರಾಜ್ಯ ಸರ್ಕಾರ ಈ ಇದನ್ನು ರದ್ದುಪಡಿಸಿ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯ ಮಾಡಿದೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಸದ ಸಚಿವರು ಹಾಗೂ  ಶಾಸಕರು ಕುರಿಗಳು ಇದ್ದಂತೆ.  ಹೀಗಾಗಿ ಕುರಿಗಳನ್ನು ತಂದು ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಪೊಲೀಸರು ಇದಕ್ಕೆ ಅನುಮತಿ ನೀಡಲಿಲ್ಲ. ಇಂತಹ ಸಭೆ ನಡೆಸಲು ನಮಗೆ ಆಗುವುದಿಲ್ಲ ಎಂದಾದರೆ ಎಮ್ಮೆ, ಕೋಣ, ಕುರಿಗಳಿಗೆ ಸಭೆ ನಡೆಸಲು ಸರಕಾರ ಅನುಮತಿ ನೀಡಲಿ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next