Advertisement

ಲೋಕಸಭೆಗೆ ವಾಟಾಳ್‌ ನಾಗರಾಜ್‌ ಸ್ಪರ್ಧೆ

06:14 AM Mar 15, 2019 | Team Udayavani |

ಬೆಂಗಳೂರು: ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವುದಾಗಿ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುವಂತಹ ಅಭ್ಯರ್ಥಿಗಳು ಬೇಕು. ಕರ್ನಾಟಕದ ಸಮಸ್ಯೆಗಳ ಬಗ್ಗೆ ತೀವ್ರವಾದಂತಹ ಚರ್ಚೆ, ಪ್ರತಿಭಟನೆ ನಡೆಸಿ ದೇಶದ ಗಮನ ಸೆಳೆಯುವ ನಾಯಕರು ಅಗತ್ಯವಿದ್ದಾರೆ.

Advertisement

ಆದರೆ ಈಗ ರಾಜ್ಯದ ಯಾವುದೇ ಪಕ್ಷದಲ್ಲೂ ಅಂತಹ ಪ್ರಬುದ್ಧ ನಾಯಕರಿಲ್ಲ. ಈ ಬಗ್ಗೆ ಮತದಾರರು ಎಚ್ಚರ ವಹಿಸಬೇಕು. ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಸ್ಪರ್ಧೆ ಮಾಡುವೆ. ಯಾವ ಕ್ಷೇತ್ರದಿಂದ ಹಾಗೂ ಚುನಾವಣಾ ಪ್ರಣಾಳಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ಬೇರೆ ರಾಜ್ಯದ ಸಂಸದರು ತಮ್ಮ ರಾಜ್ಯದ ಸಮಸ್ಯೆಗಳು ಎದುರಾದಾಗ ತೀವ್ರವಾಗಿ ಹೋರಾಟ ಮಾಡಿದ್ದಾರೆ. ಧರಣಿ, ಸಭಾ ತ್ಯಾಗ ಮಾಡುವ ಮೂಲಕ ತಮ್ಮ ರಾಜ್ಯದ ಬೇಡಿಕೆಗಳ ಬಗ್ಗೆ ದೇಶದ ಗಮನ ಸೆಳೆದಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಲೋಕಸಭಾ ಸದಸ್ಯರು ಅಷ್ಟು ಚೈತನ್ಯ ಪೂರ್ಣವಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಿಲ್ಲ.

ನದಿ, ರೈಲ್ವೆ, ಗಡಿನಾಡು, ಹಣಕಾಸು ಹಾಗೂ ಉದ್ಯೋಗ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸಂಸತ್‌ನಲ್ಲಿ ಒತ್ತಾಯ ಮಾಡಲಿಲ್ಲ. ಈಗ ಇಂತಹ ನಾಯಕರನ್ನೇ ಲೋಕಸಭೆಗೆ ಕಳುಹಿಸಲು ರಾಷ್ಟ್ರೀಯ ಪಕ್ಷಗಳು ಚಿಂತಿಸಿವೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next