Advertisement

ವಸುಂಧರಾ ಇಲ್ಲದೆ ನಡೆಯಲಿದೆ ಚುನಾವಣೆ? ರಾಜ್ಯ ಬಿಜೆಪಿ ಅಧ್ಯಕ್ಷರು ಹೇಳಿದ್ದೇನು?

11:02 AM May 22, 2022 | Team Udayavani |

ಜೈಪುರ : ಮುಂದಿನ ವರ್ಷ ರಾಜಸ್ಥಾನದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನೇ ಕೈಬಿಡಲಿದೆಯಾ ಎನ್ನುವ ಅನುಮಾನ ಶುರುವಾಗಿದೆ. ಅದಕ್ಕೆ ಕಾರಣ ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್‌ ಪೂನಿಯಾ ಕೊಟ್ಟಿರುವ ಹೇಳಿಕೆ.

Advertisement

ಜೈಪುರದಲ್ಲಿ ಪಕ್ಷದ 3 ದಿನಗಳ ಚುನಾವಣ ಕಾರ್ಯತಂತ್ರ ಸಭೆಯಲ್ಲಿ ಮಾತನಾಡಿರುವ ಅವರು, “ಚುನಾವಣೆಗೆ ಕೆಲವು ಬಾರಿ ನಾಯಕತ್ವವನ್ನು ಘೋಷಿಸಲಾಗುತ್ತದೆ, ಇನ್ನು ಕೆಲವು ಬಾರಿ ಘೋಷಿಸುವುದಿಲ್ಲ. ಮುಂಬರುವ ಚುನಾವಣೆಯನ್ನು ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎದುರಿಸಲಿದೆ.

2017ರಲ್ಲಿ ಉತ್ತರ ಪ್ರದೇಶವು ಯೋಗಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿರಲಿಲ್ಲ. ಆದರೆ ಬಿಜೆಪಿ ಗೆದ್ದಿತ್ತು. ಪಕ್ಷ ಹೊಸ ತಲೆಮಾರಿನ ನಾಯಕತ್ವಕ್ಕೆ ಹೊಣೆ ನೀಡಲು ಬಯಸುತ್ತದೆ’ ಎಂದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಿಎಂ ಸ್ಥಾನಕ್ಕೆ ವಸುಂಧರಾ ಅವರ ಬದಲು ಬೇರೆ ಅಭ್ಯರ್ಥಿ­ಯನ್ನು ಘೋಷಣೆ ಮಾಡಬಹುದು ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ: ಪ್ರಮೋದ್‌ ಮಧ್ವರಾಜ್‌

Advertisement

Udayavani is now on Telegram. Click here to join our channel and stay updated with the latest news.

Next