Advertisement
ಕಲ್ಸಂಕ ರೋಯಲ್ ಗಾರ್ಡನ್‌ನ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣ, ಆರ್.ಭರಣಯ್ಯ ವೇದಿಕೆಯಲ್ಲಿ ಐತಿಹಾಸಿಕ ಧರ್ಮಸಂಸದ್ ಅಧಿವೇಶನ ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸಹಸ್ರಾರು ವರ್ಷಗಳಿಂದಲೂ ಸಂತರು, ತಣ್ತೀಜ್ಞಾನಿಗಳನ್ನು ಸಮಾಜಕ್ಕೆ ನೀಡುತ್ತ ಬಂದಿದೆ. ಆದರೆ ಇಂದು ಸಮಾಜ ನಾನಾ ಸಮಸ್ಯೆಗಳಿಂದ ತತ್ತರಿಸುತ್ತಿದೆ. ಅಣು ಬಾಂಬು, ಸಂಪತ್ತಿನ ಸಂಗ್ರಹ, ತಂತ್ರಜ್ಞಾನದ ಅತಿಯಾದ ಅವಲಂಬನೆ, ಧಾರ್ಮಿಕ ಅಸಹಿಷ್ಣುತೆ, ಪರಿಸರಮಾಲಿನ್ಯ, ಮಾನವೀಯ ಮೌಲ್ಯಗಳ ಕುಸಿತ ಹೀಗೆ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅಸ್ಪೃಶ್ಯತೆ, ಜಾತೀಯತೆ, ಬಲಾತ್ಕಾರದ ಮತಾಂತರ, ಗೋರಕ್ಷಣೆ, ರಾಮಮಂದಿರ ನಿರ್ಮಾಣದಂತಹ ವಿಷಯಗಳು ಭವಿಷ್ಯದಲ್ಲಿ ಹಿಂದೂ ಧರ್ಮ ಎದುರಿಸುತ್ತಿರುವ ಸವಾಲುಗಳಾಗಿವೆ ಎಂದರು.
ಸ್ವಾಮಿ ವಿವೇಕಾನಂದರು, ಗಾಂಧೀಜಿ ಯವರ ಸಂದೇಶಗಳನ್ನು ನಾವು ಎಚ್ಚರಿಕೆಯಿಂದ ಪಾಲಿಸಬೇಕಾಗಿದೆ. ಧಾರ್ಮಿಕ ಪಂಗಡಗಳು ತಮ್ಮ ಭಿನ್ನಾಭಿ ಪ್ರಾಯಗಳನ್ನು ಮರೆತು ಒಂದಾಗಬೇಕು, ಜಾತೀಯತೆ-ಅಸ್ಪೃಶ್ಯತೆ ವಿರುದ್ಧ ಇನ್ನಷ್ಟು ಪ್ರಯತ್ನಗಳಾಗಬೇಕು, ಭ್ರಷ್ಟಾಚಾರವನ್ನು ಶೂನ್ಯಗೊಳಿಸಬೇಕು, ಮಹಿಳೆಯರ ಸ್ಥಾನಮಾನ ಮೇಲ್ದರ್ಜೆಗೇರಬೇಕು, ಹಿಂದುತ್ವ, ಗೋರಕ್ಷಣೆ ಹೆಸರಿನಲ್ಲಿ ನಡೆಯುವ, ಹಿಂದುತ್ವಕ್ಕೆ ಕೆಟ್ಟ ಹೆಸರು ತರುತ್ತಿರುವ ನೈತಿಕ ಪೊಲೀಸ್‌ಗಿರಿ ಯಂತಹ ಅಸಹನೀಯ ಚಟುವಟಿಕೆ ಗಳನ್ನು ನಿಯಂತ್ರಿಸುವತ್ತ ಅಧಿವೇಶನ ಗಮನ ಹರಿಸಬೇಕು ಎಂದರು. 1985ರಲ್ಲಿ ನಡೆದ ಧರ್ಮಸಂಸದ್ ಅಧಿವೇಶನದಲ್ಲಿ ತಮ್ಮ ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರು ಭಾಗವಹಿಸಿದ್ದರು ಎಂದು ಸುತ್ತೂರು ಸ್ವಾಮೀಜಿ ನೆನಪಿಸಿಕೊಂಡರು.
Related Articles
Advertisement
1964ರಲ್ಲಿ ವಿಹಿಂಪ ಸ್ಥಾಪನ ಸಭೆಯಲ್ಲಿ ಭಾಗವಹಿಸಿದ್ದ, 1969ರ ಪ್ರಥಮ ಪ್ರಾಂತ ವಿಹಿಂಪ ಸಮ್ಮೇಳನ, 1985ರ ಧರ್ಮಸಂಸದ್ ಆಯೋಜಿಸಿದ ಪೇಜಾವರ ಶ್ರೀಗಳು ಈಗ 12ನೆಯ ಧರ್ಮಸಂಸದ್ ಆಯೋಜಿಸಿದ್ದಾರೆ.
1969ರಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾಗಿ, 1983ರಲ್ಲಿ ಉಜಿರೆಯಲ್ಲಿ ವಿಹಿಂಪ ದ್ವಿತೀಯ ಪ್ರಾಂತ ಸಮ್ಮೇಳನವನ್ನು ಸಂಘಟಿಸಿದಡಾ| ಡಿ. ವೀರೇಂದ್ರ ಹೆಗ್ಗಡೆಯವರು ಈಗಲೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1985ರಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಅಂಬಲಪಾಡಿ ಕೃಷ್ಣ ರಾವ್ ಕಾರ್ಯನಿರ್ವಹಿಸಿದ್ದರು.