Advertisement

ವಾಸುದೇವ ಅಡಿಗ ಕೊಲೆ ಪ್ರಕರಣ : ಆರೋಪಿಗಳು ದೋಷಮುಕ್ತಿ

04:33 PM May 12, 2017 | Team Udayavani |

ಕುಂದಾಪುರ:   ರಾಜ್ಯ ವನ್ನೇ ತಲ್ಲಣಗೊಳಿಸಿದ ಆರ್‌ಟಿಐ ಕಾರ್ಯಕರ್ತ ವಾಸುದೇವ ಅಡಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಂಟು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ಹೊರಡಿಸಿದೆ.

Advertisement

ಘಟನೆಯ ಹಿನ್ನೆಲೆ  
2013ರ ಜ. 7ರಂದು ವಂಡಾರಿ ನಲ್ಲಿ ವಾಸುದೇವ ಅಡಿಗ ನಾಪತ್ತೆ ಯಾಗಿದ್ದರು ಎಂದು ಶಂಕರ ನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಕಸ್ಮಿಕವಾಗಿ ಕಾಣೆ ಯಾಗಿರುವ ಅವರ ಕೊಲೆ ನಡೆದಿರುವ ಸಾಧ್ಯತೆಗಳು ಇವೆ ಎನ್ನುವ ಸಾರ್ವಜನಿಕ ಅಭಿಪ್ರಾಯಗಳು ಹೆಚ್ಚಾಗಿದ್ದರಿಂದ ಅಂದಿನ ಜಿಲ್ಲಾ ಎಸ್‌.ಪಿ. ಡಾ| ಬೋರಲಿಂಗಯ್ಯ ವಿಶೇಷ ಪೊಲೀಸ್‌ ತಂಡವನ್ನು ರಚಿಸಿದ್ದರು. ಜ.12ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಮದಗದ ಕೆರೆಯಲ್ಲಿ ಕೈಕಾಲು ಕಟ್ಟಿದ್ದ ಸ್ಥಿತಿಯಲ್ಲಿ ಅಡಿಗರ ಮೃತದೇಹ ಪತ್ತೆಯಾಗಿತ್ತು. ಈ ಮೃತದೇಹವನ್ನು ಪರಿಶೀಲನೆ ನಡೆಸಿದ ಸಂದರ್ಭ ಬ್ರಹ್ಮಾವರದ ಗಣೇಶ್‌ ಇಲೆಕ್ಟ್ರಿಕಲ್ಸ್‌ನಲ್ಲಿ ಡಿಟಿಎಚ್‌ ರಿಚಾರ್ಜ್‌ ಮಾಡಿದ ರಶೀದಿ ಲಭ್ಯವಾಗಿದ್ದು ಅದರ ಆಧಾರದ ಮೇಲೆ ವಾಸುದೇವ ಅಡಿಗ ಎಂದು ಗುರುತಿಸಲಾಗಿತ್ತು. 

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಜಮೀನು ವಿವಾದಕ್ಕೆ ಸಂಬಂಧಿಸಿದ ಹಾಗೂ ವೈಯಕ್ತಿಕ ವಿಚಾರಗಳ ಕುರಿತು ಅಡಿಗರೊಂದಿಗೆ ಇದ್ದ ದ್ವೇಷದ ಕಾರಣದಿಂದಾಗಿ ಈ ಕೊಲೆ ನಡೆದಿರಬಹುದು ಎನ್ನುವ ನೆಲೆಯಲ್ಲಿ ವಂಡಾರಿನ ಪ್ರಸಿದ್ಧ ಜೋತಿಷಿ ರಮೇಶ್‌ ಬಾಯರಿ, ಬಾಯರಿ ಸಂಬಂಧಿ ಬೆಂಗಳೂರಿನ ಸುಬ್ರಹ್ಮಣ್ಯ   ಉಡುಪ,  ಬೆಂಗಳೂರಿನ ಉಮೇಶ, ಬನಶಂಕರಿ ಹೊಸಕೆರೆ ಹಳ್ಳಿಯ ನವೀನ್‌ ಸಿ. ಪದ್ಮನಾಭ ನಗರದ ಕೆ.ಎಸ್‌. ರಾಘವೇಂದ್ರ, ಮೋಹನ್‌, ರವಿಚಂದ್ರ ಹಾಗೂ ವಿಜಯಸಾರಥಿ ಅವರನ್ನು ಬಂಧಿ ಸಲಾಗಿತ್ತು. ಜಾಮೀನು ಪಡೆದು ಕೊಳ್ಳಲು ಆರೋಪಿಗಳು ಹರ ಸಾಹಸ ನಡೆಸಿದ್ದರು.

ವಿಚಾರಣೆಯ ವೇಳೆ ಅಡಿಗರ ತಾಯಿ ಶೃಂಗೇಶ್ವರಿ ಅಡಿಗ, ದಾವಣ ಗೆರೆ ಜಿಲ್ಲೆಯ ಹೆಚ್ಚು ವರಿ ಎಸ್‌.ಪಿ. ಯಶೋದಾ ಒಂಟಗೋಡಿ ಸೇರಿದಂತೆ ಒಟ್ಟು  96 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಪೊಲೀಸರು  8 ಮಂದಿ ಆರೋಪಿಗಳ ವಿರುದ್ಧ ನ್ಯಾಯಾ ಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 

Advertisement

ಆರೋಪಿಗಳ ಪರವಾಗಿ ಮಂಗಳೂರಿನ ವಿಕ್ರಂ ಹೆಗ್ಡೆ, ಜಗನ್ನಾಥ ಆಳ್ವ, ಹಿರಿಯ ನ್ಯಾಯ ವಾದಿ ರವಿಕಿರಣ್‌ ಮುಡೇìಶ್ವರ ಕುಂದಾಪುರ, ಬನ್ನಾಡಿ ಸೋಮ ನಾಥ ಹೆಗ್ಡೆ, ಕಾಳಾವರ ಪ್ರದೀಪ್‌ ಕುಮಾರ್‌ ಶೆಟ್ಟಿ, ಉಡುಪಿಯ ಸಂಜೀವ ಎಂ., ನರಸಿಂಹ ಹೆಗ್ಡೆ ಹಾಗೂ ಅಮರ ಕೊರಿಯ ಸರಕಾರದ  ವಿಶೇಷ ಅಭಿಯೋಜಕರಾಗಿ ಮಂಗಳೂರಿನ ಶಿವಪ್ರಸಾದ ಆಳ್ವ ವಾದಿಸಿದ್ದರು.

ಕುಂದಾಪುರದ ಹೆಚ್ಚುವರಿ ಜಿಲ್ಲಾ  ಮತ್ತು ಸತ್ರ ನ್ಯಾಯಾ ಲಯದಲ್ಲಿ ಗುರುವಾರ ಸಂಜೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್‌ ಅವರು ಆರೋಪಿಗಳ ವಿರುದ್ಧ ಮಾಡಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ನೀಡಲಾಗಿರುವ ಸಾಂದರ್ಭಿಕ ಸಾಕ್ಷಿಗಳು ಸಾಬೀತಾಗದ ಹಿನ್ನೆಲೆ ಯಲ್ಲಿ ಎಲ್ಲ 8 ಆರೋಪಿಗಳನ್ನು ಬಿಡುಗಡೆಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next