Advertisement

ವಾಸು ಪಕ್ಕಾ ಮಾಸು

03:45 PM Apr 27, 2018 | |

“ವಾಸು – ನಾನು ಪಕ್ಕಾ ಕಮರ್ಷಿಯಲ್‌’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ಕಳೆದ ವರ್ಷವೇ ಹೇಳಿಕೊಂಡಿದ್ದರು ಅನೀಶ್‌ ತೇಜೇಶ್ವರ್‌. ಆ ನಂತರ ಏನಾಯಿತೋ ಸುದ್ದಿಯೇ ಇರಲಿಲ್ಲ. ಈಗ ನೋಡಿದರೆ, ಅನೀಶ್‌ ಸದ್ದಿಲ್ಲದೆ ಚಿತ್ರದ ಚಿತ್ರೀಕರಣ ಮುಗಿಸಿ, ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ.

Advertisement

ಇತ್ತೀಚೆಗೆ ನಗರದ ಒರಾಯನ್‌ ಮಾಲ್‌ನಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಾಯಿತು. ಟ್ರೇಲರ್‌ ಬಿಡುಗಡೆ ಮಾಡುವುದಕ್ಕೆ ರಕ್ಷಿತ್‌ ಶೆಟ್ಟಿ ಬಂದಿದ್ದರು. ಜೊತೆಗೆ ಮೇಘನಾ ಗಾಂವ್ಕರ್‌, “ಬಹದ್ದೂರ್‌’ ಚೇತನ್‌, ಸಿಂಧು ಲೋಕನಾಥ್‌, ಕೃಷಿ ತಾಪಂಡ, ಡಾ. ಸೂರಿ, ಅನಿಲ್‌ ಕುಮಾರ್‌, ನವೀನ್‌ ರೆಡ್ಡಿ, ಮಹೇಶ್‌ ಸಿದ್ಧಾರ್ಥ್, “ಅಲೆಮಾರಿ’, ಸಂತು ಹೀಗೆ ಸಾಕಷ್ಟು ಮಂದಿ ಅಂದು ಜಮಾಯಿಸಿದ್ದರು.

ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡಿದ ರಕ್ಷಿತ್‌, “ನಾವಿಬ್ಬರೂ ಒಟ್ಟಿಗೆ “ತುಘಲಕ್‌’ ಚಿತ್ರದಲ್ಲಿ ನಟಿಸಿದ್ದೆವು. ಆ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಸಂದರ್ಭದಲ್ಲಿ  ಬೇಸರವಾಗಿದ್ದಾಗ, “ಎಲ್ಲರ ಜೀವನದಲ್ಲಿ ಫ್ಲಾಪ್‌ ಇದ್ದರೆ  ಮುಂದೆ ಒಳ್ಳೆ ಕತೆಗಳು ಹುಟ್ಟಿಕೊಳ್ಳುತ್ತವೆ ಎಂದು ಅನೀಶ್‌ ಹೇಳಿದ್ದ. ಇದು ಅವನ ಜೀವನಕ್ಕೆ ಅನ್ವಯಿಸುತ್ತದೆ’ ಎಂದು ಹೇಳಿದರು.

ಇನ್ನು ಅನೀಶ್‌ ಜೊತೆ “ನಮ್‌ ಏರಿಯಾಲ್‌ ಒಂದಿನ’ ಚಿತ್ರದಲ್ಲಿ ನಟಿಸಿದ್ದ ಮೇಘನಾ ಗಾಂವ್ಕರ್‌, “ಆಗ ಟ್ರೇಲರ್‌ ಮಾಡೋದು ದೊಡ್ಡ ವಿಷಯವಾಗಿತ್ತು. ಅದು ದೊಡ್ಡ ಹಿಟ್‌ ಸಹ ಆಗಿತ್ತು. ಅದರಂತೆ  ವಾಸುಗೂ ಆಗಲಿ’ ಎಂದು ಹೇಳಿದರು. ಇನ್ನು ಸಿಂಧು ಲೋಕನಾಥ್‌, “ಅನೀಶ್‌ ಅವರ ಏಳು, ಬೀಳು, ಬೇಸರ, ಖನ್ನತೆ ಎಲ್ಲವನ್ನು 8-9 ವರ್ಷದಿಂದ ನೋಡುತ್ತಾ ಬಂದಿದ್ದೇನೆ.

ಈ ಸಿನಿಮಾದಲ್ಲಿ  ಪಕ್ಕಾ ಕಮರ್ಷಿಯಲ್‌ ಹೀರೋ ಆಗಿದ್ದಾನೆ’ ಎಂಬ ಹಾರೈಕೆಯ ಮಾತುಗಳನ್ನಾಡಿದರು. ಇನ್ನು “ಬಹದ್ದೂರ್‌’ ಚೇತನ್‌ ಮಾತನಾಡಿ, “ಟ್ರೇಲರ್‌ ನೋಡಿದಾಗ ಸಕಾರಾತ್ಮಕ ಅಂಶಗಳು ಹೆಚ್ಚಿಗೆ ಕಾಣಿಸುತ್ತದೆ. ಕರ್ಮಯಲ್‌ ನಾಯಕನಾಗಿ ಅವರಿಗೊಂದು ಬ್ರೇಕ್‌ ಸಿಗಲಿ’ ಅಂತ ಹಾರೈಸಿದರು.

Advertisement

ನಾಯಕಿ ನಿಶ್ವಿ‌ಕಾ ನಾಯ್ಡುಗೆ ಇದು ಮೊದಲ ಚಿತ್ರ. ಈ ಚಿತ್ರದ ಕುರಿತು ಮಾತನಾಡಿದ ಅವರು, ತಮಗೆ ಅವಕಾಶ ಕೊಟ್ಟಿದ್ದಕ್ಕೆ ಚಿತ್ರತಂಡಕ್ಕೆ ಥ್ಯಾಂಕ್ಸ್‌ ಹೇಳಿದರು. ಕೊನೆಗೆ ಮಾತನಾಡಿದ ನಿರ್ಮಾಪಕ ಕಂ ನಾಯಕ ಅನೀಶ್‌ ತೇಜೇಶ್ವರ್‌, “ಇದು ಎಲ್ಲರೂ ಕಷ್ಟಪಟ್ಟು ಮಾಡಿರುವ ಚಿತ್ರ.

“ಅಕಿರಾ’ ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಅಜಿತ್‌ ವಾಸನ್‌ ಒಂದು ಕಥೆ ಹೇಳಿದ್ದರು. ಬಹಳ ಇಷ್ಟವಾಗಿ ಅಂದೇ ಚಿತ್ರ ಮಾಡೋಣ ಎಂದು ಹೇಳಿದ್ದೆ. ಅದರಂತೆ ಚಿತ್ರ ಮಾಡಿದ್ದೀವಿ. ಎಲ್ಲರ ಸಹಕಾರ ಪ್ರೋತ್ಸಾಹ ಇರಲಿ’ ಎಂದು ಹೇಳುವಲ್ಲಿಗೆ ಕಾರ್ಯಕ್ರಮ ಮುಗಿಯಿತು.

Advertisement

Udayavani is now on Telegram. Click here to join our channel and stay updated with the latest news.

Next